ಮೂರು ವೈನ್ ಬಾಟಲ್ ಖರೀದಿಸಿದರೆ 1 ಬಾಟಲ್ ಉಚಿತವಾಗಿ ಕೊಡುಗೆ ನೀಡುವುದಾಗಿಯೂ ಕೆಲ ಕಂಪೆನಿಗಳು ಘೋಷಿಸಿವೆ. ಮತ್ತೊಂದೆಡೆ, ಪಬ್, ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಝಗಮಗಿಸುವ ಬಲ್ಬ್‌ಗಳನ್ನು ಅಳವಡಿಸಿವೆ.
ಬೆಂಗಳೂರು(ಡಿ.31): ಹೊಸ ವರ್ಷವನ್ನು ಸ್ವಾಗತಿಸಲು ನಗರದ ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ಸ್, ಪಬ್ ಗಳು ಸಜ್ಜಾಗಿದ್ದು, ಮದ್ಯಪ್ರಿಯರಿಗೆ 'ಆಫರ್' ನೀಡುವ ಮೂಲಕ ಮಾರಾಟ ಹೆಚ್ಚಿಸಿಕೊಳ್ಳಲು ಮುಂದಾಗಿವೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31 ರಂದು ಯಥೇಚ್ಛವಾಗಿ ಮದ್ಯ ಮಾರಾಟ ಆಗುವುದರಿಂದ ಇದೇ ಸಂದರ್ಭದಲ್ಲಿ ವ್ಯಾಪಾರ ಹೆಚ್ಚಿಸಿಕೊಳ್ಳುವ ಜೊತೆಗೆ ಗ್ರಾಹಕರನ್ನೂ ಸಂಪಾದಿಸಲು ದುಬಾರಿ ಬೆಲೆಯ ಮದ್ಯಗಳಲ್ಲಿ ರಿಯಾಯಿತಿ, ಹೆಚ್ಚಿನ ಖರೀದಿಗೆ ಒಂದು ಬಾಟಲ್ ಉಚಿತ ನೀಡುವುದಾಗಿ ಕೆಲ ಮದ್ಯ ಮಾರಾಟಗಾರರು ಪ್ರಕಟಿಸಿದ್ದಾರೆ.
ಕೆಲ ಬ್ರಾಂಡ್‌ನವರು ಮಾರಾಟ ಹೆಚ್ಚಿಸಿಕೊಳ್ಳಲು ಮದ್ಯದಂಗಡಿಯವರಿಗೆ ದುಬಾರಿ ಬೆಲೆಯ 750 ಎಂಎಲ್‌ನ ಫುಲ್ ಬಾಟಲ್ ಮೇಲೆ 100 ರಿಂದ 200 ರುಪಾಯಿವರೆಗೂ ವಿಶೇಷ ರಿಯಾಯಿತಿ ನೀಡಿದ್ದಾರೆ.
ಗ್ರಾಹಕರಿಗೆ ತಮ್ಮ 'ಬ್ರಾಂಡ್' ಅನ್ನೇ ಹೆಚ್ಚಾಗಿ ಮಾರಾಟ ಮಾಡಲಿ ಎನ್ನುವತಂತ್ರ ಇದರ ಹಿಂದೆ ಅಡಗಿದೆ. ಕಂಪೆನಿಗಳು ತಮಗೆ ನೀಡಿದ ದರ ರಿಯಾಯಿತಿ ಕೊಡುಗೆಯ ಬಹುಪಾಲನ್ನು ಗ್ರಾಹಕರಿಗೇ ನೀಡಿ ವ್ಯಾಪಾರ ಹೆಚ್ಚಿಸಿಕೊಳ್ಳಲು ಕೆಲ ಮದ್ಯ ಮಾರಾಟಗಾರರು ಮುಂದಾಗಿದ್ದು ಕಂಡುಬಂದಿದೆ.
ಹೊಸ ವರ್ಷಕ್ಕೆ ಮದ್ಯದ ಪಾರ್ಟಿಗೆ ಪ್ಲಾನ್ ಹಾಕಿರೋರು ಹುಷಾರ್; ನಕಲಿ ಬ್ರಾಂಡೆಡ್ ಮದ್ಯ ತಯಾರಿಸೋ ಗ್ಯಾಂಗ್ ಪತ್ತೆ!
ಮೂರು ವೈನ್ ಬಾಟಲ್ ಖರೀದಿಸಿದರೆ 1 ಬಾಟಲ್ ಉಚಿತವಾಗಿ ಕೊಡುಗೆ ನೀಡುವುದಾಗಿಯೂ ಕೆಲ ಕಂಪೆನಿಗಳು ಘೋಷಿಸಿವೆ. ಮತ್ತೊಂದೆಡೆ, ಪಬ್, ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಝಗಮಗಿಸುವ ಬಲ್ಬ್‌ಗಳನ್ನು ಅಳವಡಿಸಿವೆ.
ಹೊಸ ವರ್ಷಕ್ಕೆ ಬರ್ತಿದೆ ನಕಲಿ ಮದ್ಯ: ಕುಡಿದವರ ಕರುಳು ಸುಡುತ್ತೆ!
ವಿಜಯಪುರ: ಇನ್ನೇನು ಹೊಸವರ್ಷ ಬಂದೇಬಿಡ್ತು, ಎಲ್ಲರೂ ಸೇರಿ ಹೊಸ ವರ್ಷದ ಸಂಭ್ರಮ ಮಾಡಲು ಎಂದುಕೊಂಡಿರುವ ಮದ್ಯ ಪ್ರಿಯರಿಗೆ ನಕಲಿ ಮದ್ಯ ತಯಾರಕರು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಬ್ರಾಂಡೆಡ್ ಕಂಪ ನಿಗಳ ಲಕ್ಷ ಲಕ್ಷ ಮೌಲ್ಯದ ಮದ್ಯವನ್ನು ಅಸಲಿಯ ತಲೆಯ ಮೇಲೆ ಹೊಡೆದಂತೆ ತಯಾರಿಸುತ್ತಿದ್ದ ತಂಡವೊಂದನ್ನು ಅಬಕಾರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಕಲಿ ತಯಾರಿಕಾ ಅಡ್ಡೆಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಸಲಿ ಯಾವುದು, ನಕಲಿ ಯಾವುದು ಎಂದು ಕಂಡುಹಿಡಿಯಲು ಪೇಚಾಡಿದ ಘಟನೆ ನಡೆದಿದೆ.
ಅಸಲಿಯತ್ತಿಗೆ ನಕಲಿ ಸವಾಲ್:
ಸಾಕಷ್ಟು ನಿಯಮಾವಳಿಗಳನ್ನು ಪಾಲಿಸಿ ಮದ್ಯ ತಯಾರು ಮಾಡುವ ಕಂಪನಿಗಳು ತಕ್ಕ ಮಟ್ಟಿಗೆ ಗುಣಮಟ್ಟ ಕಾಪಾಡಿಕೊಂ ಡು ನಿಗದಿಪಡಿಸಲಾದ ಪ್ರಮಾಣದಲ್ಲಿ ಕಂಟೆಂಟ್ ಗಳನ್ನು ಬೆರೆಸುತ್ತವೆ. ಜತೆಗೆ ಕರ್ನಾಟಕ ಸರ್ಕಾರ ನಿಗದಿಪಡಿಸಿದ ಲೇಬಲ್, ಸ್ಟಿಕ್ಚರ್, ಸೀಲ್ ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಆದರೆ ಈ ನಕಲಿ ಮದ್ಯ ತಯಾರಕರು ಸೇಮ್ ಟು ಸೇಮ್ ಕಂಪನಿಯ ಮದ್ಯದಂತೆ ಕಲರ್, ಸ್ಟಿಕ್ಕರ್, ಲೇಬಲ್, ಸೀಲ್ ಅಳವಡಿಸಿಕೊಂಡು ಲಕ್ಷಾಂತರ ರುಪಾಯಿ ಮೌಲ್ಯದ ಮದ್ಯ ತಯಾರಿಕೆ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀ ಸರು ಬರೋಬ್ಬರಿ ಎಂಟೂವರೆ ಲಕ್ಷ ರುಪಾಯಿ ಮೌಲ್ಯದ ನಕಲಿ ಮದ್ಯ ಜಪ್ತಿ ಮಾಡಿದ್ದಾರೆ.
ಮಂಡ್ಯದಲ್ಲಿ ತಯಾರಾಗುತ್ತೆ ಬ್ರ್ಯಾಂಡೆಡ್ ಹೆಸರಲ್ಲಿ ನಕಲಿ ಮದ್ಯ: ಇದನ್ನ ಕುಡಿದರೆ ದೇವರೇ ಕಾಪಾಡಬೇಕು!
ಕರುಳು ಸುಡುತ್ತೆ ನಕಲಿ ಮದ್ಯ:
ನಕಲಿ ಮದ್ಯ ತಯಾರಿಕೆಗೆ ಕಳಪೆ ಮಟ್ಟದ ಸೀರಿಟ್, ಕಳಪೆ ಕಲರ್, ವಾಸನೆಗೆ ಕಳಪೆ ಪ್ಲೇವರ್ ಬಳಸುತ್ತಿದ್ದರು. ದಾಳಿ ನಡೆಸಿದ ಅಧಿಕಾರಿಗಳಿಗೆ ನಕಲಿ ಬ್ರಾಡೆಂಡ್ ಮದ್ಯ ತಯಾರಿಕೆಗೆ ಈ ಖದೀಮರು ಉಪಯೋಗಿಸಿ ಬಿಸಾಕಿದ ಬ್ರಾಂಡೆಡ್ ಕಂಪನಿಗಳ ಮದ್ಯದ ಬಾಟಲಿ ಸಂಗ್ರಹಿಸುತ್ತಿದ್ದರು. ಅದರಲ್ಲಿ ಅಸಲಿಯಂತೆ ಕಾಣುವ ನಕಲಿ ಮದ್ಯ ತುಂಬಿಸುತ್ತಿದ್ದರು. ಇಂತಹ 561 ಲೀಟರ್ ನಕಲಿ ಮದ್ಯವುಳ್ಳ 65 ಬಾಕ್ಸ್ ಹಾಗೂ 200 ಲೀಟರ್ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ.
ಯಾವ ಯಾವ ಬ್ರ್ಯಾಂಡ್ ತಯಾರಿಸುತ್ತಿದ್ದ ಖದೀಮರು?:
ಈ ಗ್ಯಾಂಗ್ ಮಾರ್ಕೆಟ್ ನಲ್ಲಿ ಹೆಚ್ಚೆಚ್ಚು ಮಾರಾಟವಾಗುವ ಜನಪ್ರಿಯ ಬ್ರಾಂಡ್ ಗಳ ಮದ್ಯವನ್ನೇ ಡುಪ್ಲಿಕೇಟ್ ಮಾಡಿದ್ದಾರೆ. ಎಂ.ಸಿ.ಮೆಗ್ದಾಲ್ ನಂಬರ್ 1 ಹಾಗೂ ಇಂಪಿರಿಯಲ್ ಬ್ಲೂ ಬ್ರಾಂಡ್‌ಗಳನ್ನು ನಕಲಿ ಬಾಟಲ್ ತಯಾರಿಸಿದ್ದಾರೆ. ಗುವಾಹಟಿಯಿಂದ ಎರಡು ಕಂಪನಿಗಳ ನಕಲಿ ಸ್ಟಿಕ್ಟರ್, ಸೀಲ್, ಕರ್ನಾಟಕ ಸರ್ಕಾರದ ಹಾಲೊಗ್ರಾಮ್ ಸಹಿತವಾಗಿ ನಕಲಿ ತಯಾರಿಸಿ ನಕಲಿ ಬಾಟಲ್ ರೆಡಿ ಮಾಡಿದ್ದಾರೆ.