* ರಾಜ್ಯಕ್ಕೆ 1100 ಟನ್ ಆಕ್ಸಿಜನ್ ಬೇಡಿಕೆ ಇದೆ
* ಜಿಂದಾಲ್ ಬಳಿ ಸಾವಿರ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ
* ಎಲ್ಲ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಬೆಡ್ ಬೇಡಿಕೆ ಹೆಚ್ಚಾಗುತ್ತಿದೆ
ಹೂವಿನಹಡಗಲಿ(ಮೇ.10): ಜಿಲ್ಲೆಯಲ್ಲಿ ಕೋವಿಡ್‌ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಎಲ್ಲ ಕೋವಿಡ್‌ರೋಗಿಗಳಿಗೆ ಆಕ್ಸಿಜನ್‌ಬೆಡ್‌ಬೇಡಿಕೆ ಹೆಚ್ಚಾಗುತ್ತದೆ. ಆದರಿಂದ ಬ್ಯೂರೋ ಸಿಲಿಂಡರ್‌ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದ್ದಾರೆ.
undefined
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಶೇ. 80ರಷ್ಟು ಆಕ್ಸಿಜನ್‌ಹೊರ ರಾಜ್ಯಕ್ಕೆ ಕಳಿಸಲಾಗುತ್ತದೆ. ರಾಜ್ಯಕ್ಕೆ 1100 ಟನ್ ಆಕ್ಸಿಜನ್ ಬೇಡಿಕೆ ಇದೆ. ಜಿಲ್ಲೆಗೆ ಪೊರೈಕೆ ಮಾಡಿ ಉಳಿದ ಆಕ್ಸಿಜನ್ ಹೊರ ರಾಜ್ಯಗಳಿಗೆ ಪೊರೈಕೆ ಮಾಡಲಾಗುತ್ತಿದೆ. ಕೋವಿಡ್ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರಿಂದ ಜಿಂದಾಲ್‌ಬಳಿ ಸಾವಿರ ಆಕ್ಸಿಜನ್‌ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಕೊರೋನಾರ್ಭಟ: 'ಪ್ರತಿ ತಾಲೂಕಿನಲ್ಲೂ 100 ಬೆಡ್, 10 ವೆಂಟಿಲೇಟರ್ ವ್ಯವಸ್ಥೆ'
ವಿರೋಧ ಪಕ್ಷದವರು ಸರ್ಕಾರದ ಬಗ್ಗೆ ವಿರೋಧ ಮಾಡಲು ಒಂದು ಪಕ್ಷದಿಂದ ಬಂದಿರುವ ರೋಗ ಕೊರೋನಾವಲ್ಲ. ಎಲ್ಲರೂ ಒಟ್ಟಾಗಿ ನಿಯಂತ್ರಣಕ್ಕೆ ತರಬೇಕಿದೆ. ಆದರಿಂದ ಮೇ 10 ಬಳ್ಳಾರಿಯಲ್ಲಿ ಸರ್ವ ಪಕ್ಷಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಸಲಹೆಗಳನ್ನು ನೀಡಬಹುದು. ಈ ಸಭೆಯಲ್ಲಿ ಹಾಲಿ ಮಾಜಿ ಶಾಸಕರು, ಸಂಸದರು, ಮಾಜಿ ಸಚಿವರ ಸಭೆಯಲ್ಲಿ ಸಲಹೆ ನೀಡಬಹುದು ಎಂದರು.
ಪ್ರತಿ ಆಸ್ಪತ್ರೆಯಲ್ಲಿ 100 ಹಾಸಿಗೆ ಹಾಗೂ 10 ಐಸಿಯು ಬೆಡ್‌ತೆರೆಯಲು ಕ್ರಮಕೈಗೊಳ್ಳಲಾಗುವುದು ಎಂದರು. ಈ ವೇಳೆ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಸಂಸದ ವೈ. ದೇವೀಂದ್ರಪ್ಪ, ಡಿಸಿ ಪವನ್‌ಕುಮಾರ ಮಾಲಪಾಟಿ, ಎಸ್ಪಿ ಇದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona