ಟೊಮೆಟೋಗೆ ಈಗ ಭಾರೀ ಬಂಪರ್ : ರೈತನಿಗೆ ಫುಲ್ ಖುಷ್

By Kannadaprabha News  |  First Published Sep 13, 2020, 7:25 AM IST

ರಾಜ್ಯದ ಟೊಮೆಟೋಗೆ ಉತ್ತಮ ಬೇಡಿಕೆ ಸೃಷ್ಟಿಯಾಗಿದೆ. ರೈತರಿಗೆ ಶುಕ್ರದೆಸೆ ಆರಂಭವಾಗಿದೆ. 


ಕೋಲಾರ (ಸೆ.13):  ಉತ್ತರ ಭಾರತದಲ್ಲಿ ಭಾರೀ ಮಳೆಯಿಂದಾಗಿ ಬೆಳೆ ನಷ್ಟವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಟೊಮೆಟೋಗೆ ಉತ್ತಮ ಬೇಡಿಕೆ ಸೃಷ್ಟಿಯಾಗಿದೆ. 

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲ ಸಮಯದ ಹಿಂದೆ 15 ಕೆ.ಜಿ. ತೂಕದ ಒಂದು ಬಾಕ್ಸ್‌ 200ರಿಂದ 400 ರುಗೆ ಮಾರಾಟವಾಗುತ್ತಿತ್ತು. 

Tap to resize

Latest Videos

ಇದೀಗ 800ನಿಂದ 1,050 ರು. ವರೆಗೆ ಏರಿಕೆ ಆಗಿದೆ. ಕಳೆದ ಎರಡು ತಿಂಗಳಿನಿಂದ ಮಹಾರಾಷ್ಟ್ರ ಮತ್ತು ಉತ್ತರ ಭಾರತದಲ್ಲಿ ಹೆಚ್ಚು ಮಳೆ ಆಗಿದ್ದರಿಂದ ಕೋಲಾರದ ಟೊಮೆಟೋಗೆ ಶುಕ್ರದೆಸೆ ಶುರುವಾಗಿದೆ. 

ಬೆಳೆ ವಿಮೆ ನಷ್ಟಪರಿಹಾರ ರೈತರ ಖಾತೆಗೆ ಜಮಾ

ಸಾಮಾನ್ಯವಾಗಿ ಜೂನ್‌ ಮೊದಲ ವಾರದಿಂದ ಟೊಮೆಟೋ ಬೆಲೆಯಲ್ಲಿ ಏರಿಕೆಯಾಗುತ್ತದೆ. ಜೂನ್‌ ತಿಂಗಳಿಂದ ಆಗಸ್ಟ್‌ ತಿಂಗಳವರೆಗೆ ಉತ್ತಮ ಬೆಲೆ ಇರುತ್ತದೆ. ಆದರೆ ಈ ಬಾರಿ ಸೆಪ್ಟೆಂಬರ್‌ ತಿಂಗಳಲ್ಲಿ ಬೆಲೆ ಏರಿಕೆಯಾಗಿದೆ.

ಇದರ ಪರಿಣಾಮವಾಗಿ ಸ್ಥಳೀಯವಾಗಿಯೂ ದರ ಹೆಚ್ಚಾಗಿದ್ದು, ಕೆಲದಿನಗಳ ಹಿಂದೆ ಅಂಗಡಿಗಳಲ್ಲಿ ಕೆ.ಜಿ.ಗೆ 30, 40 ರು.ಗೆ ಮಾರಾಟವಾಗುತ್ತಿದ್ದ ಟೊಮೆಟೋದರ 50ರಿಂದ 60 ರು. ತಲುಪಿದೆ.
 

click me!