ಪೊಲೀಸ್‌ ನೋಟಿಸ್‌ಗೂ ಜಗ್ಗದೇ ಹೋರಿ ಬೆದರಿಸಿದರು..!

By Kannadaprabha News  |  First Published Nov 18, 2020, 11:18 AM IST

ದೀಪಾವಳಿ ಹಬ್ಬದ ನಿಮಿತ್ತ ಹೋರಿ ಬೆದರಿಸುವ ಕಾರ್ಯಕ್ರಮ| ಕೊರೋನಾ ಮುನ್ನೆಚ್ಚರಿಕೆ ಮಾಯ| ಹೋರಿ ಹಬ್ಬ ನಡೆಸದಂತೆ ಹಳ್ಳಿಹಳ್ಳಿಗಳಲ್ಲಿ ಸಭೆ ನಡೆಸಿ ಎಚ್ಚರಿಕೆ ನೀಡಿದ್ದ ಪೊಲೀಸರು| ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಜನರ ಸಂಖ್ಯೆ ಕಡಿಮೆ| 


ಹಾವೇರಿ(ನ.18): ದೀಪಾವಳಿ ಹಬ್ಬದ ನಿಮಿತ್ತ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಂಭ್ರಮದಿಂದ ಸಾಂಪ್ರದಾಯಕ ಹೋರಿ ಬೆದರಿಸುವ ಕಾರ್ಯಕ್ರಮ ನಡೆಯಿತು.

ಜಿಲ್ಲೆಯಲ್ಲಿ ಹೋರಿ ಬೆದರಿಸುವ ಕಾರ್ಯಕ್ರಮ ನಡೆಸದಂತೆ ಪೊಲೀಸ್‌ ಇಲಾಖೆಯಿಂದ ನೋಟಿಸ್‌ ಜಾರಿ ಮಾಡಿದ್ದರೂ ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬದ ನಿಮಿತ್ತ ಹೋರಿ ಬೆದರಿಸುವ ಕಾರ್ಯಕ್ರಮ ಸುಗಮವಾಗಿ ನಡೆಯಿತು. ಅಲ್ಲದೆ, ಕೊರೋನಾ ಮುನ್ನೆಚ್ಚರಿಕೆಯೂ ಮಾಯವಾಗಿತ್ತು.

Tap to resize

Latest Videos

ಅನೈತಿಕ ಸಂಬಂಧ: ಹೆತ್ತವಳ ಮೇಲೆಯೇ ಅತ್ಯಾಚಾರ ಎಸಗಿ ಕೊಲೆಗೈದ ಮಗ

ಹೋರಿ ಹಬ್ಬ ನಡೆಸದಂತೆ ಪೊಲೀಸರು ಹಳ್ಳಿಹಳ್ಳಿಗಳಲ್ಲಿ ಸಭೆ ನಡೆಸಿ ಎಚ್ಚರಿಕೆ ನೀಡಿದ್ದರು. ಆದರೂ ಜಿಲ್ಲೆಯ ವಿವಿಧಡೆ ಹೋರಿಯನ್ನು ಬೆದರಿಸಿ ಸಂಭ್ರಮಿಸಿದರು. ಬಲಿಪಾಡ್ಯದ ದಿನ ಬಹುತೇಕರು ಹೋರಿ ಬೆದರಿಸಿದರು. ದೀಪಾವಳಿ ಹಬ್ಬ ಸಂದರ್ಭದಲ್ಲಿ ಆರಂಭವಾಗುವ ಈ ಸ್ಪರ್ಧೆಗಳು ಸುಮಾರು ಒಂದು ತಿಂಗಳು ಕಾಲ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯುತ್ತದೆ. ಆದರೂ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಜನರ ಸಂಖ್ಯೆ ಕಡಿಮೆಯಿತ್ತು.
 

click me!