ಮಹೇಶ್ ಬಿಜೆಪಿ ಸೇರ್ಪಡೆ ಕಸವು ಕಸದ ಬುಟ್ಟಿ ಸೇರಿದಂತೆ

Kannadaprabha News   | Asianet News
Published : Aug 04, 2021, 07:37 AM IST
ಮಹೇಶ್ ಬಿಜೆಪಿ ಸೇರ್ಪಡೆ ಕಸವು ಕಸದ ಬುಟ್ಟಿ ಸೇರಿದಂತೆ

ಸಾರಾಂಶ

ಬಿಎಸ್‌ಪಿಯಿಂದ ಉಚ್ಛಾಟಿತರಾದ ಎನ್‌ ಮಹೇಶ್ ಎನ್‌ ಮಹೇಶ್ ಅವರು ಬಿಜೆಪಿ ಸೇರ್ಪಡೆಯಾಗುವ ಬಗ್ಗೆ  ರಾಜ್ಯಾಧ್ಯಕ್ಷ ಎಂ ಕೃಷ್ಣ ಮೂರ್ತಿ ವ್ಯಂಗ್ಯ

ಚಾಮರಾಜನಗರ (ಆ.04): ಬಿಎಸ್‌ಪಿಯಿಂದ ಉಚ್ಛಾಟಿತರಾದ ಎನ್‌ ಮಹೇಶ್ ಅವರು ಬಿಜೆಪಿ ಸೇರ್ಪಡೆಯಾಗುವ ಬಗ್ಗೆ  ರಾಜ್ಯಾಧ್ಯಕ್ಷ ಎಂ ಕೃಷ್ಣ ಮೂರ್ತಿ ವ್ಯಂಗ್ಯವಾಡಿದ್ದಾರೆ. 

ಚಾಮರಾಜನಗರದಲ್ಲಿ ಮಂಗಳವಾರ ಮಾತನಾಡಿದ ಕೃಷ್ಣಮೂರ್ತಿ, ಮಹೇಶ್ ಬಿಜೆಪಿ ಸೇರುವುದು ಎಂದರೆ ಕಸ ಕಸದ ಬುಟ್ಟಿಗೆ ಸೇರಿದಂತೆ ಎಂದು ಹೇಳಿದ್ದಾರೆ. 

ಬಿಎಸ್‌ಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವವರು ಕಸವು ಕಸದ ಬುಟ್ಟಿಎ ಸೇರಿದಂತೆ ಎಂದು  ಪಕ್ಷದ ಸಂಸ್ಥಾಪಕ ದಾದಾಸಾಹೇಬ್ ಕಾನ್ಸಿರಾಂ ಜಿ ಹೇಳಿದ್ದಾರೆ ಎಂದು ಕೃಷ್ಣಮೂರ್ತಿ ಹೇಳಿದರು.

ಮತ್ತೊಬ್ಬ ಶಾಸಕ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್..! 

ಕೊಳ್ಳೇಗಾಲ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಎನ್‌.ಮಹೇಶ್‌ ಅವರ ಬಿಜೆಪಿ ಸೇರ್ಪಡೆಗೆ ಕೊನೆಗೂ ದಿನ ನಿಗದಿಯಾಗಿದೆ. ಆ.5ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಹೇಶ್‌ ಅವರು ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ. 

ಬಿಎಸ್ಪಿಯಿಂದ ಆಯ್ಕೆಯಾಗಿದ್ದ ಎನ್‌.ಮಹೇಶ್‌ರನ್ನು ನಂತರ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆ ಬಳಿಕ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮಹೇಶ್‌ ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದರು. ಬಿಜೆಪಿ ಸೇರ್ಪಡೆಯಾಗುವುದಾಗಿ ಇತ್ತೀಚೆಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!