ಏಕವಚನದಲ್ಲಿ ಮಾತು ನನ್ನ ಸಂಸ್ಕೃತಿಯಲ್ಲ| ಏಕವಚನದಲ್ಲಿ ಮಾತನಾಡುವುದು ಅವರ ಸಂಸ್ಕೃತಿ ತೋರಿಸುತ್ತದೆ| ನಾನು ಯಾರ ವಿರುದ್ಧವೂ ಏಕವಚನದಲ್ಲಿ ಮಾತನಾಡುವುದಿಲ್ಲ| ನನಗೆ ಒಳ್ಳೆಯ ಸಂಸ್ಕಾರ ಇದೆ| ಅವರು ಒಬ್ಬ ಶಾಸಕ. ಹೀಗಾಗಿ, ನಾನು ಅವರಂತೆ ಏಕವಚನದಲ್ಲಿ ಮಾತನಾಡುವುದಿಲ್ಲ| ಯಾವುದೇ ಶಾಸಕರ ಕುರಿತು ನಾನು ಹೇಳಿಕೆ ಕೊಡಲ್ಲ ಎಂದ ಯತ್ನಾಳ್|
ವಿಜಯಪುರ(ಮಾ.21): ಏಕವಚನದಲ್ಲಿ ಮಾತನಾಡುವುದು ನನ್ನ ಸಂಸ್ಕೃತಿ ಅಲ್ಲ. ಶಾಸಕ ರೇಣುಕಾಚಾರ್ಯ ಹೇಳಿಕೆಗೆ ನಾನು ಉತ್ತರ ನೀಡುವುದಿಲ್ಲ. ಅವರು ಹತಾಶರಾಗಿ ಏಕವಚನದಲ್ಲಿ ಮಾತನಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿರುಗೇಟು ನೀಡಿದ್ದಾರೆ.
‘ತಾಕತ್ ಇದ್ರೆ ಸಿಎಂ ಬದಲಾವಣೆ ಮಾಡು’ ಎಂದು ರೇಣುಕಾಚಾರ್ಯ ಹಾಕಿರುವ ಸವಾಲಿಗೆ ಪ್ರತ್ರಿಯಿಕಿಸಿದ ಯತ್ನಾಳ್, ನಾನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಮಾತ್ರ ಮಾತನಾಡುತ್ತೇನೆ. ನನ್ನ ಹೋರಾಟ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಮಾತ್ರ. ನನ್ನ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೋ ನೋಡೋಣ ಎಂದು ಹೇಳಿದರು.
ಯತ್ನಾಳ್ ತಾಕತ್ತಿಗೆ ಸಿಎಂ ಬಿಎಸ್‌ವೈ ರಾಜಕೀಯ ಕಾರ್ಯದರ್ಶಿ ಸವಾಲ್!
ಏಕವಚನದಲ್ಲಿ ಮಾತನಾಡುವುದು ಅವರ ಸಂಸ್ಕೃತಿ ತೋರಿಸುತ್ತದೆ. ನಾನು ಯಾರ ವಿರುದ್ಧವೂ ಏಕವಚನದಲ್ಲಿ ಮಾತನಾಡುವುದಿಲ್ಲ. ನನಗೆ ಒಳ್ಳೆಯ ಸಂಸ್ಕಾರ ಇದೆ. ಅವರು ಒಬ್ಬ ಶಾಸಕ. ಹೀಗಾಗಿ, ನಾನು ಅವರಂತೆ ಏಕವಚನದಲ್ಲಿ ಮಾತನಾಡುವುದಿಲ್ಲ. ಯಾವುದೇ ಶಾಸಕರ ಕುರಿತು ನಾನು ಹೇಳಿಕೆ ಕೊಡಲ್ಲ ಎಂದರು.
ಸೋಮವಾರ ವಿಧಾನಸಭೆಯ ಪಡಸಾಲೆಯಲ್ಲಿ 25 ಶಾಸಕರು ಸಭೆ ಸೇರಿ ನಿನಗೆ ಸರಿಯಾದ ಉತ್ತರ ಕೊಡ್ತೀವಿ ಎಂಬ ರೇಣುಕಾಚಾರ್ಯ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮೇ 2ರ ನಂತರ ಇದೆಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದರು.