KR ಪೇಟೆ ಗೆಲ್ಲಲು ಬಿಎಸ್ ವೈ ಮಾಸ್ಟರ್ ಪ್ಲಾನ್

Published : Aug 18, 2019, 01:49 PM IST
KR ಪೇಟೆ ಗೆಲ್ಲಲು ಬಿಎಸ್ ವೈ ಮಾಸ್ಟರ್ ಪ್ಲಾನ್

ಸಾರಾಂಶ

ರಾಜ್ಯದಲ್ಲಿ ಉಪ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಮಂಡ್ಯದ ಕೆ ಆರ್ ಪೇಟೆ ಗೆಲ್ಲಲು ಸಿಎಂ ಬಿ.ಎಸ್.ಯಡಿಯೂರಪ್ಪ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. 

ಮಂಡ್ಯ [ಆ.18]: ರಾಜ್ಯದಲ್ಲಿ  ರಾಜೀನಾಮೆ ನೀಡಿ ಅನರ್ಹರಾದ ಕ್ಷೇತ್ರಗಳಿಗೆ  ಉಪ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ವಿವಿಧ ಪಕ್ಷಗಳ ನಾಯಕರು ಸಿದ್ಧತೆ ಆರಂಭಿಸಿದ್ದಾರೆ. 

ಕೆ ಆರ್ ಪೇಟೆ ಉಪ ಚುನಾವಣೆಗೆ ಬಿಜೆಪಿ ನಾಯಕರು ಸಜ್ಜಾಗುತ್ತಿದ್ದು, ಗೆಲುವಿಗಾಗಿ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ಲಾನ್ ಮಾಡುತ್ತಿದ್ದಾರೆ. 

ಕೆಆರ್ ಪೇಟೆಯಲ್ಲಿ ಬಿಜೆಪಿ ನಾಯಕರು ಈಗಾಗಲೇ ಸದಸ್ಯತ್ವ ಅಭಿಯಾನ ಆರಂಭ ಮಾಡಿದ್ದು, ಕ್ಷೇತ್ರದಾದ್ಯಂತ ಫುಲ್ ಆ್ಯಕ್ಟಿವ್ ಆಗಿದ್ದಾರೆ. 

ಕಳೆದ 2018 ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದ  ಬೂಕಳ್ಳಿ ಮಂಜು ನೇತೃತ್ವದಲ್ಲಿ ಸದಸ್ಯತ್ವ ಅಭಿಯಾನ ಆರಂಭ ಮಾಡಿದ್ದಾರೆ. 

ಕೆ ಆರ್ ಪೇಟೆ ಕ್ಷೇತ್ರದ ಪ್ರತೀ ಮತಗಟ್ಟೆಯಲ್ಲಿ 250 ಮಂದಿಯನ್ನು ನೋಂದಣಿ ಮಾಡಿಕೊಂಡು, ಕ್ಷೇತ್ರದಾದ್ಯಂತ 50 ಸಾವಿರ ಕಾರ್ಯಕರ್ತರನ್ನು ನೋಂದಾವಣೆ ಮಾಡುವ ಗುರಿ ಹೊಂದಲಾಗಿದೆ. ಈ ಮೂಲಕ ಕ್ಷೇತ್ರದಲ್ಲಿ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು