'ಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿನೆ ಇರಲ್ಲ : ಕೈ ಮುಖಂಡ

Kannadaprabha News   | Asianet News
Published : Sep 16, 2020, 10:02 AM ISTUpdated : Sep 16, 2020, 10:36 AM IST
'ಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿನೆ ಇರಲ್ಲ : ಕೈ ಮುಖಂಡ

ಸಾರಾಂಶ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಲ್ಲ ಎಂದರೆ ಬಿಜೆಪಿ ಪಕ್ಷನೇ ಇರಲ್ಲ ಎಂದು ಕಾಂಗ್ರೆಸ್ ಮುಖಂಡರೋರ್ವರು ಹೇಳಿದ್ದು, ಈ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.  

 ತುಮಕೂರು (ಸೆ.16):  ಯಡಿಯೂರಪ್ಪ ಇಲ್ಲಾ ಅಂದರೆ ಭಾರತೀಯ ಜನತಾ ಪಕ್ಷವೇ ಹೊರಟು ಹೋಗುತ್ತದೆ ಎಂದು ಕಾಂಗ್ರೆಸ್‌ ಮುಖಂಡ ಕೆ.ಎನ್‌. ರಾಜಣ್ಣ ಹೇಳುವು ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

ಯಡಿಯೂರಪ್ಪನವರು ಒಂದು ವರ್ಷ ಮಾತ್ರ ಮುಖ್ಯಮಂತ್ರಿಯನ್ನಾಗಿ ಮಾಡಿರುವುದು ಅಂತಾ ಆ ಪಕ್ಷದ ಹಿರಿಯ ಮುಖಂಡರು ಹೇಳುತ್ತಾರೆ. ಆದರೆ ಯಡಿಯೂರಪ್ಪನವರನ್ನು ಬದಲಾವಣೆ ಮಾಡಿದರೆ ಆ ಪಕ್ಷವೇ ಹೊರಟು ಹೋಗುತ್ತದೆ ಎಂದರು.

'ಸಿಎಂ ಸ್ಥಾನದಿಂದ ಬಿಎಸ್‌ವೈ ತೆಗೆಯಬಹುದು : ಬದಲಾವಣೆ ಖಚಿತ' .

ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್‌ಗೆ ದೇವೇಗೌಡ ಹಾಗೂ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಈ ಮೂರು ಜನ ಇಲ್ಲ ಅಂದರೆ ಆ ಪಕ್ಷಗಳೇ ಇರುವುದಿಲ್ಲ ಎಂದರು. ಈ ಮೂವರಿಗೆ ಮತಗಳನ್ನು ಟ್ರಾನ್ಸ್‌ಫರ್‌ ಮಾಡಿಸುವ ಶಕ್ತಿ ಇದೆ. ಇದು ವಾಸ್ತವ ಎಂದರು.

ಇಂದು ಕಾಂಗ್ರೆಸ್‌ ಮುಖಂಡರ ಸಭೆ:  ಶಿರಾ ಉಪಚುನಾವಣೆ ಸಂಬಂಧ ಬುಧವಾರ ಬೆಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಶಿರಾ ಅಭ್ಯರ್ಥಿ ಆಯ್ಕೆ ಹಾಗೂ ಉಪಚುನಾವಣೆ ಕುರಿತ ಸಭೆ ಇದಾಗಿದ್ದು, ಉಪಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ