ಸಂಪುಟ ವಿಸ್ತರಣೆ ನಂತರ ಬಿ.ಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಂಪುಟ ವಿಸ್ತರಣೆ ನಂತರ ಪತನವಾಗುತ್ತೆ, ಶಾಸಕರಲ್ಲಿ ಸಚಿವ ಸ್ಥಾನಕ್ಕಾಗಿ ಅಸಮಾಧಾನ ಭುಗಿಲೆದ್ದಿದೆ ಎಂಬೆಲ್ಲ ಮಾತುಗಳ ನಡುವೆ ಯಡಿಯೂರಪ್ಪ ಸರ್ಕಾರ ಸೇಫ್ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿ(ಫೆ.05): ಸಂಪುಟ ವಿಸ್ತರಣೆ ನಂತರ ಬಿ.ಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಂಪುಟ ವಿಸ್ತರಣೆ ನಂತರ ಪತನವಾಗುತ್ತೆ, ಶಾಸಕರಲ್ಲಿ ಸಚಿವ ಸ್ಥಾನಕ್ಕಾಗಿ ಅಸಮಾಧಾನ ಭುಗಿಲೆದ್ದಿದೆ ಎಂಬೆಲ್ಲ ಮಾತುಗಳ ನಡುವೆ ಯಡಿಯೂರಪ್ಪ ಸರ್ಕಾರ ಸೇಫ್ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
undefined
ಹುಬ್ಬಳ್ಳಿಯಲ್ಲಿ ಕೋಡಿಮಠದ ಸ್ವಾಮೀಜಿ ಹೇಳಿಕೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆಗಳು ಇಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತನ್ನ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಲಿದ್ದು, ಯಡಿಯೂರಪ್ಪ ಸರ್ಕಾರ ಸೇಫ್ ಆಗಿರಲಿದೆ ಎಂದು ಹೇಳಿದ್ದಾರೆ.
'ಸಚಿವ ಸ್ಥಾನ ಕೊಟ್ಟರೆ ಸಂತೋಷ, ಕೊಡದಿದ್ರೆ ಬೇಸರ ಇಲ್ಲ'
ಸದ್ಯಕ್ಕೆ ರಾಜ್ಯ ರಾಜಕೀಯದಲ್ಲಿ ಯಾವುದೇ ತೊಂದರೆ ಇಲ್ಲ, ಎಲ್ಲವೂ ಸರಿಯಾಗಲಿದೆ. ಯಡಿಯೂರಪ್ಪ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ಯುಗಾದಿವರೆಗೆ ಸರ್ಕಾರ ಸುಸೂತ್ರವಾಗಿ ನಡೆಯಲಿದೆ. ಯುಗಾದಿ ನಂತರ ಮತ್ತೆ ಏನೆಂಬುದನ್ನು ತಿಳಿಸುವೆ. ಯಾರೇ ಸಚಿವ ಸ್ಥಾನಕ್ಕೆ ಒತ್ತಾಯಿಸುತ್ತಿದ್ದರೂ ಬಿಎಸ್‌ವೈ ಸರ್ಕಾರಕ್ಕೆ ತೊಂದರೆಯಿಲ್ಲ ಎಂದಿದ್ದಾರೆ.
ಸಂಪುಟ ವಿಸ್ತರಣೆಗೆ ಬಿಗ್ ಟ್ವಿಸ್ಟ್; ಆಕಾಂಕ್ಷಿಗಳಿಗೆ ಹೈ ಕಮಾಂಡ್ ಶಾಕ್!
ಈ ವರ್ಷ ಇನ್ನೂ ಹೆಚ್ಚಿನ ಮಳೆಯಾಗುವ ಸೂಚನೆಯಿದೆ. ಈ ವರ್ಷ ಬೆಂಕಿಯ ಆಪತ್ತು ಸಂಭವಿಸಲಿದೆ, ಮತ್ತೆ ಜಲಕಂಟಕ ಎದುರಾಗಲಿದೆ. ಇನ್ನೂ ಹೊಸ ಹೊಸ ರೋಗಗಳು ಉದ್ಭಸಲಿವೆ. ಅಯೋಧ್ಯೆಯಲ್ಲಿ ರಾಮಂಮದಿರ ನಿರ್ಮಾಣ ಮಾಡುವುದು ದೇಶ ಆಳುವ ರಾಜನ ಕರ್ತವ್ಯ. ಅದು ಬಹುಸಂಖ್ಯಾತರ ಅಪೇಕ್ಷೆ ಕೂಡ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಸಿಎಎ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, 'ಸಿಎಎ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ' ಎಂದಿದ್ದಾರೆ.