ವಿಜಯಪುರ: ಭಾರೀ ಮಳೆಗೆ ಕುಸಿದ ಸೇತುವೆ, ರಸ್ತೆ ಸಂಚಾರ ಸ್ಥಗಿತ

By Girish Goudar  |  First Published Aug 17, 2024, 8:12 AM IST

ಬ್ರೀಡ್ಜ್ ಕುಸಿದ ಪರಿಣಾಮ ಭಾರೀ ವಾಹನ‌ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಸೇತುವೆ ಕುಸಿತವಾಗಿದೆ. ಆದಷ್ಟು ಬೇಗ ಬ್ರೀಡ್ಜ್ ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ. 


ವಿಜಯಪುರ(ಆ.17):  ಭಾರೀ ಮಳೆಗೆ ಸೇತುವೆ ಕುಸಿದ ಪರಿಣಾಮ ರಸ್ತೆ ಸಂಚಾರ ಕಡಿತವಾದ ಘಟನೆ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ದೇವುರು ಗ್ರಾಮದ ಬಳಿ ನಡೆದಿದೆ. ಸೇತುವೆ ಕುಸಿದ ಪರಿಣಾಮ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಳಿಕೋಟಿ ರಸ್ತೆ ಸಂಚಾರ ಕಡಿತವಾಗಿದೆ. 

ದೇವರ ಹಿಪ್ಪರಗಿಯಿಂದ ತಾಳಿಕೋಟಿಗೆ ಹೋಗುವ ರಸ್ತೆ ಸಂಚಾರ ಸ್ಥಗಿತವಾಗಿದೆ.  ಸ್ಥಳಕ್ಕೆ ದೇವರಹಿಪ್ಪರಗಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಭೇಟಿ ಪರಿಶೀಲನೆ ನಡೆಸಿದ್ದಾರೆ. 

Tap to resize

Latest Videos

undefined

ಇಂದು, ನಾಳೆ ಕರ್ನಾಟಕದ 14 ಜಿಲ್ಲೆಗಳಲ್ಲಿ ಭಾರೀ ಮಳೆ..!

ಬ್ರೀಡ್ಜ್ ಕುಸಿದ ಪರಿಣಾಮ ಭಾರೀ ವಾಹನ‌ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಸೇತುವೆ ಕುಸಿತವಾಗಿದೆ. ಆದಷ್ಟು ಬೇಗ ಬ್ರೀಡ್ಜ್ ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ. ಸೇತುಗೆ ದುರಸ್ತಿಗೆ ಅಧಿಕಾರಿಗಳಿಗೆ ತಹಶಿಲ್ದಾರ ಪ್ರಕಾಶ ಸಿಂದಗಿ ನಿರ್ದೇಶನ ನೀಡಿದ್ದಾರೆ. 

click me!