ಕೊರೋನಾ ಮಧ್ಯೆಯೇ ಮದುವೆ: ನನ್ನ ವಿವಾಹಕ್ಕೆ ಯಾರೂ ಬರಬೇಡಿ ಎಂದ ಮದುಮಗ..!

By Suvarna News  |  First Published May 8, 2020, 11:03 AM IST

ವಿಶಿಷ್ಟ ಮದುವೆ ಆಮಂತ್ರಣ| ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದಲ್ಲೊಂದು ವಿಶಿಷ್ಟ ವಿವಾಹ| ಮನೆಯಲ್ಲಿಯೇ ಇರಿ ಮಾಸ್ಕ್‌ ಧರಿಸಿ ಸಂಚಾರ ಮಾಡಿ ಮಾರಕ ಕೊರೋನಾ ಓಡಿಸಿ ಎಂದು ಮದುಮಗನ ಸಂದೇಶ| 


ಬಳ್ಳಾರಿ(ಮೇ.08): ಕೊರೋನಾ ಭೀತಿ ಮಧ್ಯೆ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಮದುಮಗನೊಬ್ಬ ವಿಶಿಷ್ಟ ಮದುವೆ ಆಮಂತ್ರಣ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾನೆ.  ಚಿರಂಜೀವಿ ಎಂಬುವರೇ ವಿಶಿಷ್ಟವಾಗಿ ಮದುವೆ ಆಮಂತ್ರಣ ಪತ್ರಿಕೆ ತಯಾರಿಸಿದ ಮದುಮಗನಾಗಿದ್ದಾರೆ. 

ಕೊರೋನಾ ವೈರಸ್‌ ಆತಂಕದ ಮದ್ಯೆಯೂ ಈ ಮೊದಲೇ ನಿಗದಿ ಮಾಡಿದಂತೆ ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮದುವೆಯ ಮಾಹಿತಿಗಾಗಿ ಸಂಬಂಧಿಕರು ಹಾಗೂ ಸ್ನೇಹಿತರಿಗೆ ವಾಟ್ಸಾಪ್ ಓಲೆ ಬರೆದಿದ್ದಾರೆ.
ಕೇವಲ ಮಾಹಿತಿಗಾಗಿ ಮದುವೆ ಆಹ್ವಾನ ನೀಡುತ್ತಿರುವುದಕ್ಕೆ ಮತ್ತು ಪರೋಕ್ಷವಾಗಿ ಮದುವೆಗೆ ಬರಬೇಡಿ ಎನ್ನುತ್ತಿರುವುದಕ್ಕೆ ಮನಸ್ಸು ಭಾರವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಮಾರ್ಗ ಅನಿವಾರ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ. 

Tap to resize

Latest Videos

ಒಂದ್ಕಡೆ ಕೊರೋನಾ ಕಾಟ, ಇನ್ನೊಂದ್ಕಡೆ ಸುಡು ಬಿಸಿಲಿಗೆ ಬಸವಳಿದ ಜನ: ಗ್ರಾಹಕರಿಗೆ SBIನಿಂದ ವಿನೂತನ ಸೇವೆ..!

ನನ್ನ ಮನೆಯಲ್ಲಿ ಸರಳವಾಗಿ ಮೇ 10 ನೇ ರಂದು ಮದುವೆ ನಡೆಯಲಿದೆ. ಕೊರೋನಾ ಹಿನ್ನಲೆಯಲ್ಲಿ ನಿಮ್ಮ ಮನೆಯಿಂದಲೇ ನಮಗೆ ಆಶೀರ್ವಾದ ಮಾಡಿ ಹರಸಿ ಎಂದು ಮನವಿ ಮಾಡಿಕೊಂಡಿದ್ದಾನೆ. ಮುಂಬರುವ ದಿನಗಳಲ್ಲಿ ನಿಮ್ಮ ಮನೆಗೆ ನವ ದಂಪತಿಗಳು ನಿಮ್ಮ ಬಳಿ ಬಂದು ಆಶೀರ್ವಾದ ಪಡೆಯುತ್ತೇವೆ ಎಂದು ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಮನೆಯಲ್ಲಿಯೇ ಇರಿ ಮಾಸ್ಕ್‌ ಧರಿಸಿ ಸಂಚಾರ ಮಾಡಿ ಮಾರಕ ಕೊರೋನಾ ಓಡಿಸಿ ಎಂದು ಮದುಮಗ ಚಿರಂಜೀವಿ ಸಂದೇಶ ನೀಡಿದ್ದಾನೆ. 
 

click me!