ಮಂಗಳೂರು: ಕರಾವಳಿ ಯುವಕನ ಪ್ರೀತಿಗೆ ಮನಸೋತ ಬ್ರೆಜಿಲ್ ಬೆಡಗಿ, ತುಳುನಾಡು ಸಂಪ್ರದಾಯದಂತೆ ಅದ್ಧೂರಿ ವಿವಾಹ..!

By Kannadaprabha News  |  First Published Aug 11, 2024, 11:31 AM IST

ಬ್ರೆಜಿಲ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ. ತಾಟಿಯಾನೆಳನ್ನು ಪ್ರೀತಿಸುತ್ತಿರುವ ವಿಷ ಯವನ್ನು ಆದಿತ್ಯ ಪಾಲಕರಿಗೆ ತಿಳಿಸಿ ದ್ದರು. ಅದೇ ರೀತಿ ಯುವತಿಯು ತಮ್ಮ ಪೋಷಕರನ್ನು ಮದುವೆಗೆ ಒಪ್ಪಿಸಿದ್ದಳು. ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ತುಳುನಾಡಿನ ಸಂಪ್ರದಾಯದಂತೆ ಆದಿತ್ಯ ಮತ್ತು ತಾಟಿಯಾನೆ ಅದ್ದೂರಿಯಾಗಿ ವಿವಾಹವಾದರು. 


ಮಂಗಳೂರು(ಆ.11): ಪರಿಶುದ್ಧ ಪ್ರೀತಿಗೆ ದೇಶಗಳ ಅಡ್ಡಿಯಿಲ್ಲ ಎನ್ನುವುದಕ್ಕೆ ಮಂಗಳೂ ರಿನಲ್ಲಿ ನಡೆದಿರುವ ಈ ಮದುವೆಯೇ ಸಾಕ್ಷಿ. ಕರಂಗಲ್ಪಾಡಿ ನಿವಾಸಿ ಆದಿತ್ಯ, ಬ್ರೆಜಿಲ್ ಪ್ರಜೆ ತಾಟಿಯಾನೆಯರನ್ನು ಮದುವೆಯಾಗಿದ್ದಾರೆ.

ಬ್ರೆಜಿಲ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ. ತಾಟಿಯಾನೆಳನ್ನು ಪ್ರೀತಿಸುತ್ತಿರುವ ವಿಷ ಯವನ್ನು ಆದಿತ್ಯ ಪಾಲಕರಿಗೆ ತಿಳಿಸಿ ದ್ದರು. ಅದೇ ರೀತಿ ಯುವತಿಯು ತಮ್ಮ ಪೋಷಕರನ್ನು ಮದುವೆಗೆ ಒಪ್ಪಿಸಿದ್ದಳು. 

Tap to resize

Latest Videos

ಬೆಳ್ತಂಗಡಿ: ಸದಾಶಿವ ರುದ್ರ ದೇವಸ್ಥಾನಕ್ಕೆ ನಟ ಯಶ್ ಭೇಟಿ, ಹರಕೆ ತೀರಿಸಿದ ರಾಕಿಂಗ್‌ ಸ್ಟಾರ್‌..!

ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ತುಳುನಾಡಿನ ಸಂಪ್ರದಾಯದಂತೆ ಆದಿತ್ಯ ಮತ್ತು ತಾಟಿಯಾನೆ ಅದ್ದೂರಿಯಾಗಿ ವಿವಾಹವಾದರು. ಎರಡೂ ಕುಟುಂಬದ ಸದಸ್ಯರ ಸಮಕ್ಷಮದಲ್ಲಿ ಅಗ್ನಿ ಸಾಕ್ಷಿಯಾಗಿ ನವದಾಂಪತ್ಯಕೆ ಕಾಲಿಟ್ಟರು. 

click me!