'ಕಾಂಗ್ರೆಸ್‌ನಿಂದ ಬ್ರಾಹ್ಮಣರಿಗೆ ಅವಹೇಳನ'

By Kannadaprabha News  |  First Published Jun 12, 2021, 12:03 PM IST

* ಜಗತ್ತಿನ ಒಳಿತನ್ನು ಬಯಸುತ್ತ ಬಂದಿರುವ ಬ್ರಾಹ್ಮಣ ಸಮಾಜ
* ಕಾಂಗ್ರೆಸ್‌ ವಿರುದ್ಧ ದೂರು 
* ಬ್ರಾಹ್ಮಣ ಸಮಾಜವನ್ನು ದುರದ್ದೇಶಪೂರ್ವಕವಾಗಿ ಅವಮಾನ


ಗಂಗಾವತಿ(ಜೂ.12): ಕಾರಟಗಿ ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಯೊಬ್ಬರು ಫೇಸ್‌ಬುಕ್‌ನಲ್ಲಿ ಬ್ರಾಹ್ಮಣರಿಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ಇಲ್ಲಿನ ಬ್ರಾಹ್ಮಣ ಸಮಾಜದವರು ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು.

ಕಾರಟಗಿ ಬ್ಲಾಕ್‌ ಕಾಂಗ್ರೆಸ್‌ ಎನ್ನುವ ಹೆಸರಿನ ಫೇಸ್‌ಬುಕ್‌ ಖಾತೆಯಿಂದ ಗೋಮೂತ್ರ ಕುಡಿಯಿರಿ, ಕೊರೋನಾ ವಾಸಿಯಾಗುತ್ತದೆ ಅನ್ನುತ್ತಿದ್ದ .... ಈಗ ಲಸಿಕೆ ಹೆಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಫೋಸ್ಟ್‌ ಮಾಡಿ ಅವಮಾನಿಸಿದ್ದಾರೆ. ಬ್ರಾಹ್ಮಣ ಸಮಾಜವು ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಆಶಯದೊಂದಿಗೆ ಸಾವಿರಾರು ವರ್ಷಗಳಿಂದ ಇಡೀ ಜಗತ್ತಿನ ಒಳಿತನ್ನು ಬಯಸುತ್ತ ಬಂದಿದೆ. ಗಂಗಾವತಿ ಘಟಕ ಸ್ಥಾಪನೆಯಾದಾಗಿನಿಂದ ಹಲವಾರು ಸಾಮಾಜಿಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಕಳೆದ ವರ್ಷ ಕೋವಿಡ್‌-19 ಲಾಕ್‌ಡೌನ್‌ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್‌ಗೆ ಒಂದು ತಿಂಗಳ ವರೆಗೆ ನಿತ್ಯ ಉಚಿತ ಅನ್ನದಾನ ಸೇವೆ ಮಾಡಿದೆ. ಆದರೆ ಇತ್ತೀಚೆಗೆ ಬ್ರಾಹ್ಮಣ ಸಮಾಜವನ್ನು ದುರದ್ದೇಶಪೂರ್ವಕವಾಗಿ ಅವಮಾನಗೊಳಿಸಲಾಗುತ್ತಿದೆ. ಕೂಡಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.ಇಲ್ಲದಿದ್ದರೆ ರಾಜ್ಯ, ದೇಶಾದ್ಯಂತ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುಬೇಕಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Tap to resize

Latest Videos

ಕೊಪ್ಪಳ: ಈ ಗ್ರಾಮದತ್ತ ಕಾಲಿಡದ ಕೊರೋನಾ..!

ಸಮಾಜದ ಅಧ್ಯಕ್ಷ ಮೇಗೂರು ರಾಘವೇಂದ್ರ, ವಕೀಲ ಪ್ರಹ್ಲಾದರಾವು ನವಲಿ, ನಗರಸಭಾ ಸದಸ್ಯ ವಾಸುದೇವ ನವಲಿ, ಪವನಕುಮಾರ ಗುಂಡೂರು, ನಗರಸಭಾ ಸದಸ್ಯ ಶಾಮಚಾರ್ಯ ಜೋಷಿ, ನರಸಿಂಹರಾವು ಕುಲಕರ್ಣಿ, ಅನಿಲ್‌ ದೇಸಾಯಿ, ಬದರಿನಾಥ ಜೋಷಿ, ಗುರುರಾಜ ಚಿರ್ಚನಗುಡ್ಡ, ಸತೀಶ ಕುಲಕರ್ಣಿ, ರಾಘವೇಂದ್ರ, ಶಾಮಚಾರ್ಯ ರಾಯಿಸ್ತ ಉಪಸ್ಥಿತರಿದ್ದರು.
 

click me!