ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಹಿನ್ನಲೆ: ಆತಂಕದ ವಾತಾವರಣ

Published : May 02, 2025, 06:08 PM ISTUpdated : May 02, 2025, 06:39 PM IST
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಹಿನ್ನಲೆ: ಆತಂಕದ ವಾತಾವರಣ

ಸಾರಾಂಶ

ಅದು ಜಿಲ್ಲೆಯ ಶಕ್ತಿ ಕೇಂದ್ರ ಅರ್ಥಾತ್ ಜಿಲ್ಲಾಡಳಿತ ಭವನ. ಜಿಲ್ಲಾಧಿಕಾರಿ ಎಸಿ ಸೇರಿದಂತೆ ಭಾಗಶಃ ಇಲಾಖೆಯ ಕಚೇರಿಗಳು ಇರುವುದು ಇಲ್ಲೇ ಇಂತ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಒಂದು ಕ್ಷಣ ಪತ್ರುಗುಟ್ಟೊಗಿದ್ರು.   

ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಮೇ.02): ಅದು ಜಿಲ್ಲೆಯ ಶಕ್ತಿ ಕೇಂದ್ರ ಅರ್ಥಾತ್ ಜಿಲ್ಲಾಡಳಿತ ಭವನ. ಜಿಲ್ಲಾಧಿಕಾರಿ ಎಸಿ ಸೇರಿದಂತೆ ಭಾಗಶಃ ಇಲಾಖೆಯ ಕಚೇರಿಗಳು ಇರುವುದು ಇಲ್ಲೇ ಇಂತ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಒಂದು ಕ್ಷಣ ಪತ್ರುಗುಟ್ಟೊಗಿದ್ರು. ಕೈಯಲ್ಲಿ ವ್ಯಾನಿಟಿ ಬ್ಯಾಗ್ ಹಿಡ್ದು ಲೇಡಿ ಆಫೀಸರ್ಸ್ ಆಚೆ ಬರ್ತಾಯಿದ್ರೆ ಇತ್ತ ಖಾಕಿ ಪಡೆ ಪೀಪಿ ಊದುತ್ತಾ ಎಲ್ಲರನ್ನ ಆಚೆ ಕಳಿಸ್ಥಾಯಿತ್ತು. ಅಸಲಿ ಅಲ್ಲಾಗಿದ್ದೇನು ಅಂತೀರ ಈ ರಿಪೋರ್ಟ್ ನೋಡಿ. ಕಚೇರಿ ಆವರಣದಲ್ಲೇ ಬೀಡು ಬಿಟ್ಟಿರುವ ಎಸ್.ಪಿ.. ಡಿಸಿ.. ಆತಂಕದಿಂದ ಓಡೋಡಿ ಬರ್ತಾಯಿರೊ ಆಫೀಸರ್ಸ್. 

ವ್ಯಾನಿಟಿ ಬ್ಯಾಗನ್ನ ಕೈಯಲ್ಲಿ ಹಿಡ್ದು ತರಾತುರಿಯಲ್ಲಿ ಆಚೆ ಬರ್ತಾಯಿರೊ ಲೇಡಿ ಆಫೀಸರ್ಸ್.  ಪೀಪಿ ಊದುತ್ತಾ ಕಚೇರಿ ಒಳಗಿರುವ ಪ್ರತಿಯೊಬ್ಬರನ್ನ ಆಚೆ ಕಳೆಸುತ್ತಿರೊ ಖಾಕಿ ಪಡೆ. ಈ ಎಲ್ಲಾ ಹೈ ಡ್ರಾಮಕ್ಕೆ ಸಾಕ್ಷಿಯಾಗಿದ್ದು ಗಡಿ ನಾಡು ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ. ಹೌದು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಬಂದ ಆ ಒಂದು ಈ ಮೇಲ್ ಕಂಪ್ಲೀಟ್ ಅಧಿಕಾರಿ ವರ್ಗವನ್ನೆ ಒಮ್ಮೆ ಬೆವರಿಳಿಸಿ ಬಿಟ್ಟಿದೆ. ಡಿಸಿ ಕಚೇರಿಯಲ್ಲಿ ಬಾಂಬ್ ಇಟ್ಟಿದ್ದು ಎಕ್ಸಾಟ್ ಮದ್ಯಾಹ್ನ 3 ಗಂಟೆ ಕಚೇರಿಯನ್ನ ಉಡೀಸ್ ಮಾಡ್ತೀವಿ ಅಂತ ಬಂದ ಸಂದೇಶದಿಂದ ಕೆಲ ಕಾಲ ಗೊಂದಲ ಹಾಗೂ ಭಯದ ವಾತಾವರಣ ಸೃಷ್ಠಿಯಾಗಿತ್ತು.

ಇನ್ನು ಮೇಲ್ ಬರ್ತಾಯಿದ್ದಂತೆ  ಅಲರ್ಟ್ ಆದ ಖಾಕಿ ಪಡೆ ತಡ ಮಾಡ್ಡೆ ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ಕ್ವಾಡ್ ಸ್ಥಳಕ್ಕೆ ಆಗಮಿಸಿತ್ತು. ಎಲ್ಲರನ್ನ ಆಚೆ ಕಳ್ಸಿ ಜಿಲ್ಲಾಧಿಕಾರಿಯ ಆವರಣದ ಇಂಚಿಂಚು ಜಾಗವನ್ನ ಬಿಡದೆ ಚೆಕ್ ಮಾಡಿದೆ. ಇನ್ನು ಮೇಲ್ ನಲ್ಲಿದ್ದ ಸಾರಂಶ ಅಂದ್ರೆ ಸಾಧಿಕ್ ಹಾಗೂ ಸೇಠ್ ಎಂಬ ಇಬ್ಬರು ಐಪಿಎಸ್ ಆಫೀಸರ್ಸ್ ರನ್ನ ದೋಷ ಮುಕ್ತರನ್ನಾಗಿಸಬೇಕೆಂಬ ಆಗ್ನೆ ಇತ್ತು. ಕೊನೆಗೆ ತಪಾಸಣೆ ನಡೆಸಿದ ಪೊಲೀಸರು ಇದೊಂದು ಫೇಕ್ ಮೇಲ್ ಎಂಬುದು ಕನ್ಫರ್ಮ್ ಆಗಿತ್ತು. ಸದ್ಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಜಿತ್ ಮನ್ಮೊಲ್ ಎಂಬ ಅಕೌಂಟ್ ನಿಂದ ಬಂದ ಮೇಲ್ ನ ಐಪಿ ಅಡ್ರೆಸ್ ನ ಬೆಂಬಿದ್ದಿದ್ದು ಸಂದೇಶ ಕಳ್ಸಿದವರ ಜಾಡು ಕಂಡು ಹಿಡಿಯಲು ಮುಂದಾಗಿದ್ದಾರೆ.

4 ವರ್ಷವಾದರೂ ಭರವಸೆ ಈಡೇರಿಲ್ಲ: ಆಕ್ಸಿಜನ್ ದುರಂತ ಸಂತ್ರಸ್ತರ ಆಕ್ರೋಶ

ಅದೇನೆ ಹೇಳಿ ಈ ಮೇಲ್ ಕಳ್ಸಿ ಅಧಿಕಾರಿಗಳ ಬುಡವನ್ನ ಅಲ್ಲಾಡ್ಸಿ ಬೆವರಿಳಿಸಿದವ ಯಾರು ಎಂಬ ಯಕ್ಷ ಪ್ರಶ್ನೆ ಕಾಡ್ತಾಯಿದ್ದ ಆದಷ್ಟು ಬೇಗ ಬೆದರಿಕೆ ಸಂದೇಶ ಕಳುಹಿಸಿದವನ ಕೈಗೆ ಕೋಳ ತೊಡಿಸುವುದಾಗಿ ಖಾಕಿ ಪಡೆ ಶಪಥ ಮಾಡಿದ್ದು. ಈ ಮೇಲ್ ಕಳಿಸಿದವನ ಬಂಧನವಾದ ಬಳಿಕವಷ್ಟೇ ಸತ್ಯಾ ಸತ್ಯತೆ ಆಚೆ ಬರಬೇಕಿದೆ.

PREV
Read more Articles on
click me!

Recommended Stories

ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಬಂಧಿಸಿದ ಮಂಗಳೂರು ಪೊಲೀಸರು
Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!