ಸುಮಲತಾ ವಿರುದ್ಧ ಎಚ್‌ಡಿಕೆ ಕೆಂಡಾಮಂಡಲ : ಅವರನ್ನೇ ಅಲ್ಲಿ ಮಲಗಿಸ್ಬೇಕೆಂದರು

By Suvarna NewsFirst Published Jul 5, 2021, 12:35 PM IST
Highlights
  • ಮಂಡ್ಯದ ಮೈ ಶುಗರ್  ಕಾರ್ಖಾನೆ ಖಾಸಗಿ ಪಾಲಾಗಬಾರದು
  • ಸರ್ಕಾರದ ಸ್ವಾಮ್ಯದಲ್ಲೇ ಇರಬೇಕು ಎನ್ನುವುದು ನಮ್ಮ  ಅಭಿಲಾಷೆ
  • ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ

ಬೆಂಗಳೂರು (ಜು.05): ಮಂಡ್ಯದ ಮೈ ಶುಗರ್  ಕಾರ್ಖಾನೆ ಖಾಸಗಿ ಪಾಲಾಗಬಾರದು.  ರೈತ ಸಂಘದ ಮುಖಂಡರು ಭೇಟಿ ಮಾಡಿ ಮೈ ಶುಗರ್ ಕಾರ್ಖಾನೆ ಬಗ್ಗೆ ಚರ್ಚೆ ಮಾಡಿದ್ದರು. ಅದು ಸರ್ಕಾರದ ಸ್ವಾಮ್ಯದಲ್ಲೇ ಇರಬೇಕು ಎನ್ನುವುದು ನಮ್ಮ  ಅಭಿಲಾಷೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. 

"

ಬೆಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ  ಮಂಡ್ಯ  ಮೈ ಶುಗರ್ ಕಾರ್ಖಾನೆ ಖಾಸಗಿಯವರ ಪಾಲಗಬಾರದು. ಈ ಬಗ್ಗೆ ಈಗಾಗಲೆ ಸಿಎಂ ಭರವಸೆ ಕೊಟ್ಟಿದ್ದಾರೆ.  ಖಾಸಗಿಯವರಿಗೆ ಒಪ್ಪಿಗೆ ಕೊಡುವುದಿಲ್ಲ ಎಂದು  ಮುಖ್ಯಮಂತ್ರಿ ಹೇಳಿದ್ದಾರೆ ಎಂದರು. 

ನಮ್ಮ ಕೈ ಕಟ್ಟಿಹಾಕಿದಂತಾಗಿದೆ : ಸಂಸದೆ ಸುಮಲತಾ ಬೇಸರ

ಅವರಿಗೆ ನಾನು ಮಂಡ್ಯ ಜನತೆ ಪರವಾಗಿ ಅಭಿನಂದನೆ  ಸಲ್ಲಿಸುತ್ತೇನೆ. 40  ವರ್ಷ ಗುತ್ತಿಗೆ  ಕೊಡಬೇಕು ಎಂದು ಸರ್ಕಾರದ ಮುಂದೆ ಪ್ರಸ್ತಾವನೆ ಇತ್ತು. ಆದರೆ ಅದನ್ನ ಅಂಗೀಕರಿಸಬಾರದು ಎಂದು ಎಚ್ ಡಿಕೆ ಹೇಳಿದರು.

ನನ್ನ ಬಗೆಗಿನ ಅಪಪ್ರಚಾರಕ್ಕೆ ಕಿವಿಗೊಡಬೇಡಿ : ಸುಮಲತಾ

ಖಾಸಗಿಯವರಿಗೆ ಕೊಡಬೇಕು ಎಂಬ ಬಗ್ಗೆ ಯಾರ ಒತ್ತಡವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಅವರನ್ನೆ ಕೇಳಬೇಕು. ಮಂಡ್ಯ ಜಿಲ್ಲೆಗೆ ಅಂತ ಸಂಸದೆ ಹಿಂದೆಯು ಬಂದಿಲ್ಲ, ಮುಂದೆಯೂ ಬರುವುದು ಇಲ್ಲ.  ಕೆಆರ್ಎಸ್  ರಕ್ಷಣೆ ಮಾಡುತ್ತಾರಂತೆ ಅವರನ್ನ ಮಲಗಿಸಿಬಿಟ್ಟರೆ  ಸರಿಯಾಗುತ್ತದೆ.  ಕೆಆರ್ ಎಸ್  ಬಾಗಿಲಿಗೆ ನೀರು ಹೋಗದಂತೆ ಅವರನ್ನೆ ಮಲಗಿಸಿಬಿಡಬೇಕು ಎಂದು ಸುಮಲತಾ ವಿರುದ್ಧ ಭಾರೀ ವಾಕ್ ಪ್ರಹಾರ ನಡೆಸಿದರು.  

ಕೆಲಸ ಬಗ್ಗೆ ಮಾಹಿತಿ ಇಲ್ಲದೆ ಕಾಟಾಚಾರಕ್ಕೆ, ಯಾರದೋ ಮೇಲೆ ವೈಯಕ್ತಿಕ ದ್ವೇಷಕ್ಕೆ  ಹೀಗೆ ಮಾಡಬಾರದು. ಇದು ಬಹಳ ದಿನ ನಡೆಯುವುದಿಲ್ಲ. ಯಾವುದೋ ಅನುಕಂಪದ ಮೇಲೆ ಬಂದಿದ್ದಾರೆ.  ಅನುಕಂಪದಿಂದ ಬಂದ ಮೇಲೆ ಜನರ ಋಣ ತೀರಿಸುವ ಕೆಲಸ ಮಾಡಬೇಕು.  ಪದೇ ಪದೇ ಇಂತಹ ಅವಕಾಶ ದೊರೆಯುವುದಿಲ್ಲ.  ಜನತೆ ಋಣ ತಿರಿಸುವ ಕೆಲಸ ಮಾಡಬೇಕು.   ದೊರಕಿರುವ ಅವಕಾಶ ಸದ್ಬಳಕೆ ಮಾಡಿಕೊಂಡಿಲ್ಲ ಎಂದರೆ ಜನ ಪಾಠ ಕಲಿಸುತ್ತಾರೆ ಎಂದು ಸುಮಲತಾ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. 

click me!