
ಬೆಂಗಳೂರು(ಜ.21): ಬಿಎಂಟಿಸಿ ಬಸ್ ನಿರ್ವಹಣೆ ಕೊರತೆ ಕಾರಣದಿಂದಾಗಿ ಪದೇ ಪದೇ ರಸ್ತೆ ಮಧ್ಯದಲ್ಲಿ ನಿಲ್ಲುವ ಸಂಖ್ಯೆ ಹೆಚ್ಚು ತಿದ್ದು, 2024-25ನೇ ಸಾಲಿನ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಬರೋಬ್ಬರಿ 220 ಬಸ್ ರಸ್ತೆ ಮಧ್ಯದಲ್ಲೇ ನಿಂತು ಪ್ರಯಾಣಿಕರು ಸಮಸ್ಯೆ ಎದುರಿಸಿದ್ದಾರೆ.
ಬಿಎಂಟಿಸಿಯ ಅಂಕಿ-ಅಂಶದಂತೆಯೇ ಏಪ್ರಿಲ್ ನಿಂದ ನವೆಂಬರ್‌ವರೆಗೆ 220 ಬಸ್‌ಗಳು ಬ್ರೇಕ್ ಡೌನ್ ಆಗಿ ರಸ್ತೆ ಮಧ್ಯದಲ್ಲಿಯೇ ನಿಂತು ಸಮಸ್ಯೆ ಸೃಷ್ಟಿ ಮಾಡಿತ್ತು. ಅದರಲ್ಲಿ ಎಲೆಕ್ನಿಕ್ ಬಸ್‌ಗಳೇ ಅತಿಹೆಚ್ಚು ರಸ್ತೆ ಮಧ್ಯದಲ್ಲಿ ನಿಂತಿವೆ. ಪ್ರಸಕ್ತ ವರ್ಷದ ಮೊದಲ 8 ತಿಂಗಳಲ್ಲಿ 220 ಬಸ್ ಗಳು ರಸ್ತೆ ಮಧ್ಯದಲ್ಲಿ ನಿಂತಿದ್ದು, ಅದರಲ್ಲಿ 64 ಡೀಸೆಲ್ ಮೂಲಕ ಸಂಚರಿಸುವ ಬಸ್‌ಗಳಾಗಿದ್ದರೆ, ಉಳಿದ 156 ಎಲೆಕ್ಟಿಕ್ ಬಸ್‌ಗಳಾಗಿವೆ.
ಬಸ್ ದರ ಏರಿಕೆ ಬೆನ್ನಲ್ಲೇ ಚಿಲ್ಲರೆ ಸಮಸ್ಯೆ, ನಿರ್ವಾಹಕರ-ಪ್ರಯಾಣಿಕರ ಗುದ್ದಾಟ, ಸಮಸ್ಯೆ ಚಿಲ್ಲರೆಯಲ್ಲ!
ಅಲ್ಲದೆ, ಸೆಪ್ಟೆಂಬರ್, ಅಕ್ಟೋ ಬರ್ ಹಾಗೂ ನವೆಂಬರ್ ತಿಂಗಳಲ್ಲಿಯೇ ಅತಿಹೆಚ್ಚು ಬಸ್‌ಗಳು ಬ್ರೇಕ್‌ಡೌನ್ ಆಗಿ ರಸ್ತೆ ಮಧ್ಯದಲ್ಲಿಯೇ ನಿಲ್ಲುವಂತಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 39, ಅಕ್ಟೋಬರ್‌ನಲ್ಲಿ 70 ಹಾಗೂ ನವೆಂಬರ್ ತಿಂಗಳಲ್ಲಿ 55 ಬಸ್‌ಗಳು ಕೆಟ್ಟು ನಿಂತು, ಪ್ರಯಾಣಿಕರು ಹೈರಾಣಾಗುವಂತಾಗಿದೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ರಸ್ತೆ ಬದಿ ಅಂಗಡಿಗೆ ಡಿಕ್ಕಿ
ಬೆಂಗಳೂರು: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯವಾಗಿ ರಸ್ತೆಯ ಬದಿ ಬೀಡಾ ಅಂಗಡಿ ಹಾಗೂ ಡಾಬಾವೊಂದರ ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಿರ್ಕೆ ಸರ್ಕಲ್ ಕಡೆಯಿಂದ ನಾಗರಬಾವಿ ಕಡೆಗೆ ತೆರಳುವಾಗ ಮಾರ್ಗ ಮಧ್ಯೆ ನಾಗದೇವನಹಳ್ಳಿ ಬಳಿ ಭಾನುವಾರ ಬೆಳಗ್ಗೆ ಸುಮಾರು 6.30ಕ್ಕೆ ಅಪಘಾತ ನಡೆದಿದ್ದು, ಘಟನೆಯಿಂದ ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.
ಶಿರ್ಕೆ ಸರ್ಕಲ್ ಕಡೆಯಿಂದ ನಾಗರಬಾವಿ ಕಡೆಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಬರುವಾಗ ನಾಗದೇವನಹಳ್ಳಿ ಬಳಿ ಏಕಾಏಕಿ ಬ್ರೇಕ್ ವಿಫಲಗೊಂಡಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಯ ಬೀಡಾ ಅಂಗಡಿಗೆ ಡಿಕ್ಕಿ ಹೊಡೆದು ಬಳಿಕ ಡಾಬಾವೊಂದರ ಗೋಡೆಗೆ ಗುದ್ದಿ ನಿಂತಿದೆ. ಘಟನೆ ವೇಳೆ ರಸ್ತೆಯಲ್ಲಿ ಹಾಗೂ ಬೀಡಾ ಅಂಗಡಿಯಲ್ಲಿ ಯಾರೂ ಇಲ್ಲದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.