ಹೊಸ ವರ್ಷದ ರಾತ್ರಿ ಬೆಂಗಳೂರಲ್ಲಿ ಪ್ರಯಾಣಕ್ಕೆ ವಿಶೇಷ ಬಸ್‌ ವ್ಯವಸ್ಥೆ! ಎಲ್ಲಿಂದ? ಎಲ್ಲಿಗೆ?

Published : Dec 24, 2025, 03:29 PM IST
BMTC

ಸಾರಾಂಶ

ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಡಿಸೆಂಬರ್ 31ರ ರಾತ್ರಿಯಿಂದ ಜನವರಿ 1ರ ಬೆಳಗಿನ ಜಾವದವರೆಗೆ ಬಿಎಂಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಿಂದ ನಗರದ ಪ್ರಮುಖ ಭಾಗಗಳಿಗೆ ಸುಮಾರು 70 ವಿಶೇಷ ಬಸ್‌ಗಳು ಸಂಚರಿಸಲಿದೆ.

ಬೆಂಗಳೂರು: ಹೊಸ ವರ್ಷದ ಸಂಭ್ರಮವನ್ನು ಸುರಕ್ಷಿತ ಹಾಗೂ ಸುಗಮವಾಗಿ ಆಚರಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ಪ್ರಮುಖ ರಸ್ತೆಗಳಿಂದ ವಿವಿಧ ಭಾಗಗಳಿಗೆ ಹೆಚ್ಚುವರಿ ವಿಶೇಷ ಬಸ್‌ಗಳನ್ನು ಸಂಚಾರಕ್ಕೆ ಇಳಿಸಿದೆ. ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1ರ ರಾತ್ರಿ 2 ಗಂಟೆಯವರೆಗೆ ನಗರದಲ್ಲಿ ಜನ ಸಂಚಾರ ಹೆಚ್ಚಾಗುವ ಹಿನ್ನೆಲೆಯಲ್ಲಿ, ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಿಂದ ಹಲವು ಮಾರ್ಗಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ. ಈ ಅವಧಿಯಲ್ಲಿ ಒಟ್ಟು 70 ಹೆಚ್ಚುವರಿ ಬಿಎಂಟಿಸಿ ಬಸ್‌ಗಳು ಸೇವೆ ನೀಡಲಿವೆ ಎಂದು ಬಿಎಂಟಿಸಿ ಪ್ರಕಟಿಸಿದೆ.

ಡಿಸೆಂಬರ್ 25ರಿಂದಲೇ ರಾತ್ರಿ ವಿಶೇಷ ಬಸ್ ಸೇವೆ

ಬಿಎಂಟಿಸಿ ತಿಳಿಸಿರುವಂತೆ, ಡಿಸೆಂಬರ್ 25ರ ರಾತ್ರಿ 11 ಗಂಟೆಯಿಂದ ಜನವರಿ 1ರ ರಾತ್ರಿ 2 ಗಂಟೆಯವರೆಗೆ ಕೆಲವು ಪ್ರಮುಖ ಮಾರ್ಗಗಳಲ್ಲಿ ರಾತ್ರಿ ವಿಶೇಷ ಬಸ್ ಸೇವೆ ಮುಂದುವರಿಯಲಿದೆ. ಇದರಿಂದ ಹೊಸ ವರ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ.

ಬ್ರಿಗೇಡ್ ರಸ್ತೆಯಿಂದ ಸಂಚರಿಸುವ ಬಸ್‌ಗಳು

ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಗೆ – 6 ಬಸ್‌ಗಳು

ಬ್ರಿಗೇಡ್ ರಸ್ತೆಯಿಂದ ಜಿಗಣಿಗೆ – 6 ಬಸ್‌ಗಳು

ಎಂಜಿ ರಸ್ತೆಯಿಂದ ವಿವಿಧ ಭಾಗಗಳಿಗೆ ಬಸ್ ಸೇವೆ

ಎಂಜಿ ರಸ್ತೆಯಿಂದ ಸರ್ಜಾಪುರಕ್ಕೆ – 6 ಬಸ್‌ಗಳು

ಕೆಂಗೇರಿಗೆ – 4 ಬಸ್‌ಗಳು

ಜನಪ್ರಿಯ ಟೌನ್‌ಶಿಪ್‌ಗೆ – 4 ಬಸ್‌ಗಳು

ನೆಲಮಂಗಲಕ್ಕೆ – 4 ಬಸ್‌ಗಳು

ಯಲಹಂಕಕ್ಕೆ – 4 ಬಸ್‌ಗಳು

ಬಾಗಲೂರಿಗೆ – 4 ಬಸ್‌ಗಳು

ಹೊಸಕೋಟೆಗೆ – 6 ಬಸ್‌ಗಳು

ಚನ್ನಸಂದ್ರಕ್ಕೆ – 6 ಬಸ್‌ಗಳು

ಕಾಡುಗೋಡಿಗೆ – 4 ಬಸ್‌ಗಳು

ಬನಶಂಕರಿಗೆ – 4 ಬಸ್‌ಗಳು

ಜೀವನ್ ಭೀಮಾನಗರಕ್ಕೆ – 2 ಬಸ್‌ಗಳು

ಮೆಟ್ರೋ ಹಾಗೂ ಮೆಜೆಸ್ಟಿಕ್ ಸಂಪರ್ಕ ಬಸ್‌ಗಳು

ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ – 4 ಬಸ್‌ಗಳು

ಮೆಜೆಸ್ಟಿಕ್‌ನಿಂದ ಕೋರಮಂಗಲಕ್ಕೆ – 2 ಬಸ್‌ಗಳು

ಪ್ರಯಾಣಿಕರಿಗೆ ಬಿಎಂಟಿಸಿಯ ಮನವಿ

ಹೊಸ ವರ್ಷದ ರಾತ್ರಿ ಸಾರ್ವಜನಿಕರು ಖಾಸಗಿ ವಾಹನಗಳ ಬದಲು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂದು ಬಿಎಂಟಿಸಿ ಮನವಿ ಮಾಡಿದೆ. ಇದರಿಂದ ರಸ್ತೆ ದಟ್ಟಣೆ ಕಡಿಮೆಯಾಗುವುದರ ಜೊತೆಗೆ, ಅಪಘಾತಗಳನ್ನು ತಡೆಯಲು ಸಹಾಯವಾಗಲಿದೆ. ಪ್ರಯಾಣಿಕರು ಸಮಯಪಾಲನೆ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಬಿಎಂಟಿಸಿ ತಿಳಿಸಿದೆ.

PREV
Read more Articles on
click me!

Recommended Stories

ಹೊಸೂರು ವಿಮಾನ ನಿಲ್ದಾಣ ನಿರ್ಮಾಣದ ತಮಿಳುನಾಡು ಆಸೆಗೆ ಬ್ರೇಕ್‌, ಕೇಂದ್ರದ ಉಡಾನ್‌ ಪಟ್ಟಿಯಿಂದ ಹೊರಕ್ಕೆ! ಕಾರಣ ಬೆಂಗಳೂರು ವಿಮಾನ ನಿಲ್ದಾಣ!
ಬಳ್ಳಾರಿ ಜ್ಯುವೆಲ್ಲರಿಯಲ್ಲಿ ಮತ್ತೆ ಕೇರಳ ಎಸ್‌ಐಟಿ ಶೋಧ, ಶಬರಿಮಲೆಯ ಇನ್ನೂ ಕೆಲ ದೇಗುಲದಲ್ಲಿ ಚಿನ್ನಕ್ಕೆ ಕನ್ನ ಶಂಕೆ!