ಕೋಲಾರ ಮಾವು ಬೆಳೆಗಾರರ ಬೇಡಿಕೆಗೆ ಕ್ಯಾರೇ ಎನ್ನದ ಸರಕಾರ!

By Suvarna News  |  First Published May 5, 2022, 12:33 PM IST
  • ವಿಶ್ವ ವಿಖ್ಯಾತ ಮಾವಿನ ತವರು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು 
  • ಅಂಗೈಯಲ್ಲೇ ಆಕಾಶ ತೋರಿಸುತ್ತಿರುವ ಜನಪತ್ರಿನಿಧಿಗಳು.
  • ಪ್ರತಿ ಚುನಾವಣೆಯಲ್ಲೂ ರೈತರಿಗೆ ಭರವಸೆ ನೀಡಿ ಬಳಿಕ ಕಣ್ಮರೆ.

 ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಮೇ.5): ಕೋಲಾರ (Kolara) ಜಿಲ್ಲೆ ಶ್ರೀನಿವಾಸಪುರ (Srinivaspura) ತಾಲೂಕು ಅಂದ್ರೆ ವಿಶ್ವ ವಿಖ್ಯಾತ ಮಾವಿನ ತವರು ಅಂತಾನೆ ಹೆಸರುವಾಸಿ ಪಡೆದಿರುವ ಸ್ಥಳ. 50 ಸಾವಿರ ಎಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಮಾವುಗಳನ್ನು ಬೆಳೆಯೋದ್ರಿಂದ ದೇಶ, ವಿದೇಶಗಳಲ್ಲಿ ಇಲ್ಲಿನ ಮಾವಿಗೆ ಭಾರಿ ಡಿಮ್ಯಾಂಡ್ ಇದೆ. ಆದ್ರೆ ಏನು ಪ್ರಯೋಜನ ಅದೆಷ್ಟೇ ಭಾರಿ ಮನವಿ ಮಾಡಿದ್ರು ಸಹ ಯಾವುದೇ ಸರ್ಕಾರಗಳು ಇರಲಿ ಮಾವು ಬೆಳಗಾರರ ಬೇಡಿಕೆಗೆ ಕೊಂಚವೂ ಕೇರ್ ಮಾಡ್ತಿಲ್ಲ.

Latest Videos

undefined

ಹೌದು ವರ್ಷಕ್ಕೆ ಒಮ್ಮೆ ಬೆಳೆಯುವ ಮಾವಿಗೆ ಒಂದು ಸಂಸ್ಕರಣಾ ಘಟಕ ಸಹ ಇಲ್ಲದೆ, ಇಲ್ಲಿನ ರೈತರು ಪರದಾಟ ಪಡುವ ಸನ್ನಿವೇಶ ಸೃಷ್ಟಿಯಾಗಿದೆ. ನೇರವಾಗಿ ಮಾರುಕಟ್ಟೆಗೆ ಹೋಗಿ ಮಾವಿನ ಕಾಯಿಗಳನ್ನು ಹಾಕಬೇಕು, ಒಂದು ವೇಳೆ ನಿಗದಿತ ಸಮಯದಲ್ಲಿ ಮಾರಾಟ ಮಾಡದೇ ಹೋದ್ರೆ ಭಾರಿ ನಷ್ಟವಾಗುತ್ತೆ ಹೀಗಾಗಿ ನಮಗೆ ಅವಶ್ಯಕತೆ ಇದ್ದಾಗ ಮಾರಾಟ ಮಾಡುತ್ತೇವೆ ನಮಗೊಂದು ಮಾವಿನ ಸಂಸ್ಕರಣಾ ಘಟಕ ಮಾಡಿಕೊಡಿ ಅಂತ ಬಹಳಷ್ಟು ವರ್ಷಗಳಿಂದ ಇಲ್ಲಿನ ರೈತರು ಸರ್ಕಾರದ ಮುಂದೆ ಬೇಡಿಕೆ ಇಡುತ್ತಾ ಬಂದಿದ್ದಾರೆ.

INDIAN BANK RECRUITMENT 2022: ಕ್ರೀಡಾ ಕೋಟದ ಮೇಲೆ ಅರ್ಜಿ ಆಹ್ವಾನ

ಚುನಾವಣೆ ಸಮಯದಲ್ಲಿ ಈ ಬಾರಿ ಮಾಡಿಯೇ ತಿರುತ್ತೇವೆ ಅಂತ ವೋಟು ಹಾಕಿಸಿಕೊಂಡು ಗೆದ್ದ ಬಳಿಕ ಯಾರು ಈ ವಿಚಾರವಾಗಿ ಏರು ಧ್ವನಿಯಲ್ಲಿ ಸರ್ಕಾರಕ್ಕೆ ಪ್ರಶ್ನೆ ಮಾಡಿ ಸಂಸ್ಕರಣಾ ಘಟಕ  ತಂದಿಲ್ಲ. ಕಳೆದ ಬಾರಿಯ ಬಜೆಟ್ ನಲ್ಲಿ ಖಂಡಿತ ಸಂಸ್ಕರಣಾ ಘಟಕ ಸ್ಥಾಪನೆಗೆ ಅನುಮತಿ ಜೊತೆಗೆ ಬಜೆಟ್ ನಲ್ಲಿ ಹಣ ಮೀಸಲು ಇಟ್ಟೆ ಬಿಟ್ರು ಅಂತ ಮಾವು ಬೆಳೆಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಅಂಗೈಯಲ್ಲೇ ಆಕಾಶ ತೋರಿಸಿ ಹೋಗಿದ್ದು ಬಿಟ್ರೆ ಇದುವರೆಗೂ ಆ ವಿಚಾರವಾಗಿ ತುಟಿ ಬಿಚ್ಚುತ್ತಿಲ್ಲ, ಹೀಗಾಗಿ ಇಲ್ಲಿನ ಮಾವು ಬೆಳೆಗಾರರ ಸಂಘ ಈ ಬಾರಿ ಚುನಾವಣೆ ಬರಲಿ,ವೋಟು ಕೇಳೋಕೆ ಬಂದಾಗ ಸರಿಯಾಗಿ ಬುದ್ದಿ ಕಲಿಸೋಣ ಅಂತ ತೀರ್ಮಾನ ಮಾಡಿಕೊಂಡಿದ್ದಾರೆ.

ಇನ್ನು ಒಂದು ಕಡೆ ಮಾವಿನ ಸಂಸ್ಕರಣಾ ಘಟಕದ ವಿಚಾರ ಆದ್ರೆ, ಮತ್ತೊಂದು ಕಡೆ ಜ್ಯುಸ್ ಹಾಗೂ ಚಾಕಲೇಟ್ ಕಂಪನಿಯವರಿಗೆ ಬೇಕಾಗಿರುವ ಮಾವಿನ ಪಲ್ಪ್ (ತಿರುಳು) ತೆಗೆದು ಶೇಖರಣೆ ಮಾಡುವ ಕಾರ್ಖಾನೆ ಸಹ ಇಲ್ಲಿ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ನೆರೆಯ ಆಂಧ್ರ ಹಾಗೂ ತಮಿಳುನಾಡಿನಲಿರುವ ಪಲ್ಪ್ ಫ್ಯಾಕ್ಟರಿಯವರು ನೇರವಾಗಿ ಶ್ರೀನಿವಾಸಪುರಕ್ಕೆ ಬಂದು ಕಡಿಮೆ ಧರದಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ತಿದ್ದಾರೆ. ಒಂದು ವೇಳೆ ಇಲ್ಲೇ ಪಲ್ಪ್ ಫ್ಯಾಕ್ಟರಿ ಇದ್ದಿದ್ರೆ ರೈತರು ಇಲ್ಲೇ ಮಾರಾಟ ಮಾಡುವ ಮೂಲಕ ಒಳ್ಳೆಯ ಆದಾಯ ಗಳಿಸುತ್ತಿದ್ವಿ,ಆದ್ರೆ ಅದ್ಯಾಕೋ ಸರ್ಕಾರಗಳು ಕೇವಲ ಆಶ್ವಾಸನೆ ನೀಡಿ ಕಡೆಗಣಿಸುತ್ತಿದೆ ಅನ್ನೋದು ಮಾವು ಬೆಳೆಗಾರರ ಅಭಿಪ್ರಾಯ.

 2015 gazetted probationers ಉತ್ತರ ಪತ್ರಿಕೆ ನಿಡುವಂತೆ ವಂಚಿತ ಅಭ್ಯರ್ಥಿಯಿಂದ ಸಿಎಂಗೆ ಪತ್ರ!

ಒಟ್ನಲ್ಲಿ ನಮ್ಮ ರಾಜ್ಯದ ಮಾವನ್ನು ಬಳಸಿಕೊಂಡು ನೆರೆಯ ರಾಜ್ಯಗಳು ಒಳ್ಳೆಯ ಹಣ ಮಾಡ್ತಿದ್ದಾರೆ.ಒಂದು ವೇಳೆ ಮಾವು ಬೆಳೆಗಾರರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದೆ ಆದಲ್ಲಿ ರೈತರಿಗೆ ಹೆಚ್ಚಿನ ಅನುಕೂಲ ಆಗೋದ್ರಲ್ಲಿ ಅನುಮಾನವಿಲ್ಲ. ಇದರ ಜೊತೆ ಉದ್ಯೋಗ ಸೃಷ್ಟಿ ಸಹ ಆಗಲಿದೆ.ಇನ್ನಾದ್ರೂ ಸರ್ಕಾರ ಮಾವಿನ ಬೆಳೆಗಾರರ ಪರವಾಗಿ ನಿಲ್ಲಲ್ಲಿ ಅನ್ನೋದು ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಆಶಯ ಕೂಡ.

click me!