ನರೇಗಾ ಕಾಮಗಾರಿಯ ಬಿಲ್ಲು ತಡೆ: ದನಗಳ ಸಮೇತ ಕಚೇರಿಗೆ ನುಗ್ಗಿದ ರೈತ

By Kannadaprabha News  |  First Published Dec 1, 2023, 9:49 AM IST

ಕಳೆದ ನಾಲ್ಕು ವರ್ಷಗಳಿಂದ ನರೇಗಾ ಯೋಜನೆಯಡಿ ಸಾಮಗ್ರಿ ಹಾಗೂ ಕೂಲಿ ಹಣ ಕಲ್ಪಿಸುವಲ್ಲಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾ.ಪಂ ಅಧ್ಯಕ್ಷ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದ ಬಡ ರೈತ, ದನಗಳ ಸಮೇತ ಕಚೇರಿಗೆ ನುಗ್ಗಿಸಿ ಗ್ರಾ.ಪಂ ಆವರಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಸಾಸಲಕುಂಟೆಯಲ್ಲಿ ನಡೆದಿದೆ.


  ಪಾವಗಡ :  ಕಳೆದ ನಾಲ್ಕು ವರ್ಷಗಳಿಂದ ನರೇಗಾ ಯೋಜನೆಯಡಿ ಸಾಮಗ್ರಿ ಹಾಗೂ ಕೂಲಿ ಹಣ ಕಲ್ಪಿಸುವಲ್ಲಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾ.ಪಂ ಅಧ್ಯಕ್ಷ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದ ಬಡ ರೈತ, ದನಗಳ ಸಮೇತ ಕಚೇರಿಗೆ ನುಗ್ಗಿಸಿ ಗ್ರಾ.ಪಂ ಆವರಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಸಾಸಲಕುಂಟೆಯಲ್ಲಿ ನಡೆದಿದೆ.

ಕೇಂದ್ರ ಸರ್ಕಾರದ ಯೋಜನೆಯಡಿ ಕ್ರಿಯಾ ಯೋಜನೆಯ ಮಂಜುರಾತಿ ಪಡೆದು ನಿಯಮನುಸಾರ ದಕೊಟ್ಟಿಗೆ ನಿರ್ಮಿಸಲಾಗಿದೆ. ಈ ಸಂಬಂಧ ಜಿಪಿಎಸ್‌ ಹಾಗೂ ಕೂಲಿ ಕಾರ್ಡ್‌ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಸಿದ್ದರೂ

Latest Videos

undefined

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶನ್ವಯ ಉದ್ಯೋಗ ಖಾತ್ರಿ ಯೋಜನೆಯಡಿ ನಿಯಮನುಸಾರ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿ 70ಸಾವಿರ ವೆಚ್ಚದ ದನದಕೊಟ್ಟಿಗೆ ನಿರ್ಮಾಣಕ್ಕೆ ಮಂಜೂರಾತಿ ಪಡೆಯಲಾಗಿತ್ತು.

ಗ್ರಾ.ಪಂ ನಿಯಮನುಸಾರ ಸ್ಥಳ ಹಾಗೂ ದನದಕೊಟ್ಟಿಗೆ ನಿರ್ಮಾಣದ ಕಾಮಗಾರಿ ನಿರ್ವಹಿಸಲಾಗಿದ್ದು, ದನದ ಕೊಟ್ಟಿಗೆ ನಿರ್ಮಿಸಿ ನಾಲ್ಕು ವರ್ಷ ಕಳೆದರೂ ರಾಜಕೀಯ ಪಿತೂರಿ ನಡೆಸಿ ಗ್ರಾ.ಪಂ. ಅಧಿಕಾರಿಗಳ ಬಿಲ್ಲು ತಡೆಹಿಡಿದಿದ್ದಾರೆ.

ಬಿಲ್ ವಿಳಂಬದ ಬಗ್ಗೆ ಪ್ರಶ್ನಿಸಿದರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬೇಜಾವಬ್ಧಾರಿ ಪ್ರತಿಕ್ರಿಯೆ ನೀಡುತ್ತಿದ್ದು, ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ಕೂಲಿಕಾರರಿಗೆ ಹಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ರೈತ ಗೋಪಾಲಪ್ಪ ಆಳಲು ತೋಡಿಕೊಂಡಿದ್ದಾರೆ.

ನರೇಗಾ ಯೋಜನೆಯಡಿ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಗ್ರಾ.ಪಂ. ಕಚೇರಿಗೆ ಕಳೆದ ನಾಲ್ಕು ವರ್ಷದಿಂದ ಅಲೆಯುತ್ತಿದ್ದೇನೆ. ಎಲ್ಲ ಸರಿ ಇದ್ದರೂ ಬಿಲ್ ಮಾತ್ರ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿದರು.

ಮೂಕ ಪ್ರಾಣಿಗಳಿಗೆ ಕೊಟ್ಟಿಗೆ ನಿರ್ಮಿಸಲೂ ಅಧಿಕಾರಿಗಳನ್ನು ಗೋಗರೆಯಬೇಕಿದೆ. ಶ್ರೀಮಂತರು, ಪ್ರಭಾವಿಗಳ ಮನೆ ಬಾಗಿಲಿಗೆ ಹೋಗಿ ನರೇಗಾ ಯೋಜನೆ ಬಿಲ್ ಮಾಡಿಕೂಡುತ್ತಾರೆ. ಈ ಬಗ್ಗೆ ದಾಖಲೆಗಳಿವೆ. ಎಲ್ಲಾ ಸರಿ ಇದ್ದರೂ ಬಡ ರೈತರನ್ನು ಕಚೇರಿಗೆ ಅಲೆದಾಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಸೌಲಭ್ಯ ಆರ್ಹರಿಗೆ ಸಿಗಬೇಕು. ಗ್ರಾ.ಪಂ ಮಟ್ಟದಲ್ಲಿರುವ ಭ್ರಷ್ಟ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರಿಗಿಸುವಂತೆ ಅವರು ಒತ್ತಾಯಿಸಿದರು.

ಗ್ರಾ.ಪಂ ಪಿಡಿಒ ಗಂಗಯ್ಯ ಹಾಗೂ ಗ್ರಾ.ಪಂ ಕಚೇರಿಯ ಸಿಬ್ಬಂದಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಿರ್ಲಕ್ಷ್ಯಿತ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮುಂದುವರಿಸಲಿದ್ದು, ಮರುಪರಿಶೀಲನೆ ನಡೆಸಿ ನರೇಗಾ ಯೋಜನೆಯ ದನದ ಕೊಟ್ಟಿಗೆ ಬಿಲ್ಲು ಪಾವತಿ ಮಾಡಿಕೊಡುವವರೆಗೆ ಗ್ರಾ.ಪಂ. ಕಚೇರಿಯಲ್ಲಿಯೇ ಹಸು ಕಟ್ಟಿಹಾಕಿ ಅನಿರ್ಧಿಷ್ಟಾವಾಧಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು. 

click me!