
ಕೋಲಾರ(ಜು.31): ಸರ್ಕಾರ ಮಕ್ಕಳಿಗೆ ನೀಡುತ್ತಿರುವ ಬೈಸಿಕಲ್ ಗುಣಮಟ್ಟಕ್ಕೆ ಚ್ಯುತಿ ಬಾರದಂತೆ ಎಚ್ಚರವಹಿಸಿ, ಸೂಚಿಸಿರುವ ಎಲ್ಲಾ ಬಿಡಿಭಾಗಗಳನ್ನು ಹಾಕಿ ಸಿದ್ಧಗೊಂಡ ಬೈಸಿಕಲ್‌ಗಳನ್ನು ಆಯಾ ದಿನವೇ ಶಾಲೆಗಳಿಗೆ ವಿತರಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸೂಚನೆ ನೀಡಿದರು.
ಮಂಗಳವಾರ ನಗರದ ಮೆಥೋಡಿಸ್ಟ್ ಶಾಲಾ ಆವರಣದಲ್ಲಿ ಹೀರೋ ಕಂಪನಿಗೆ ಸೇರಿದ ಬೈಸಿಕಲ್‌ಗಳನ್ನು ಸಿದ್ದಗೊಳಿಸುತ್ತಿದ್ದು, ಕೆಜಿಎಫ್‌ನ ಸರ್ಕಾರಿ ಐಟಿಐನ ಗುಣಮಟ್ಟಪರಿಶೀಲನಾ ತಂಡದೊಂದಿಗೆ ಅವರು ಭೇಟಿ ನೀಡಿ ಮಾತನಾಡಿದರು.
ಜಿಲ್ಲಾಸ್ಪತ್ರೆ ಪಾರ್ಕ್‌ನಲ್ಲಿ ಊಟ, ತಿಂಡಿಗೆ ನಿಷೇಧ: ಡಿಸಿ ಸೂಚನೆ
ಲೋಪವಾಗದಂತೆ ಎಚ್ಚರವಿರಲಿ:
ಸರ್ಕಾರ ಗ್ರಾಮೀಣ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಸಂಬಂಧ ಬೈಸಿಕಲ್ ವಿತರಣೆಯ ಅತ್ಯುತ್ತಮ ಯೋಜನೆ ಜಾರಿಗೆ ತಂದಿದ್ದು, ಇದರಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಎಂದು ತಾಕೀತು ಮಾಡಿದರು.
ಶಾಲೆಗಳಲ್ಲಿ 8ನೇ ತರಗತಿ ದಾಖಲಾತಿ ಸಂಖ್ಯೆಗೆ ಅನುಗುಣವಾಗಿ ಮಕ್ಕಳಿಗೆ ಸೈಕಲ್‌ಗಳನ್ನು ವಿತರಿಸಿ, ಯಾವುದೇ ಮಗುವಿಗೆ ಸಿಗಲಿಲ್ಲ ಎಂಬ ಆರೋಪ ಕೇಳಿ ಬರಬಾರದು ಎಂದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ