Black magic: ಬಂಟ್ವಾಳ ಪುರಸಭೆ ನಿರ್ಮಿಸುತ್ತಿರುವ 'ಪಿಂಕ್ ಟಾಯ್ಲೆಟ್' ನಲ್ಲಿ ವಾಮಾಚಾರ!

By Ravi Janekal  |  First Published Nov 17, 2022, 9:56 AM IST

ದ.ಕ ಜಿಲ್ಲೆಯ ಬಂಟ್ವಾಳ ಪುರಸಭಾ ವ್ಯಾಪ್ತಿಯ ಆಡಳಿತ ಸೌಧ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್‌ ಟ್ಲಾಯೆಟ್ ನಲ್ಲಿ ವಾಮಾಚಾರದ ಕುರುಹುಗಳು ಪತ್ತೆಯಾಗಿವೆ.  ನಿರ್ಮಾಣ ಹಂತದಲ್ಲಿರುವ ಪಿಂಕ್ ಟ್ಲಾಯೆಟ್ ನ ಒಳಗೆ ಕುಂಬಳಕಾಯಿ, ಪ್ರಸಾದ, ಮೊಟ್ಟೆ ಹಾಗೂ ಕುಂಬಳಕಾಯಿ ಮೇಲೆ ಗೊಂಬೆಯೊಂದನ್ನು ನಿರ್ಮಿಸಿ ಪೂಜೆ ಮಾಡಿದ ಕುರುಹುಗಳು ಪತ್ತೆಯಾಗಿವೆ. 


ಮಂಗಳೂರು (ನ.17): ದ.ಕ ಜಿಲ್ಲೆಯ ಬಂಟ್ವಾಳ ಪುರಸಭಾ ವ್ಯಾಪ್ತಿಯ ಆಡಳಿತ ಸೌಧ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಪಿಂಕ್‌ ಟ್ಲಾಯೆಟ್ ನಲ್ಲಿ ವಾಮಾಚಾರದ ಕುರುಹುಗಳು ಪತ್ತೆಯಾಗಿವೆ.  ನಿರ್ಮಾಣ ಹಂತದಲ್ಲಿರುವ ಪಿಂಕ್ ಟ್ಲಾಯೆಟ್ ನ ಒಳಗೆ ಕುಂಬಳಕಾಯಿ, ಪ್ರಸಾದ, ಮೊಟ್ಟೆ ಹಾಗೂ ಕುಂಬಳಕಾಯಿ ಮೇಲೆ ಗೊಂಬೆಯೊಂದನ್ನು ನಿರ್ಮಿಸಿ ಪೂಜೆ ಮಾಡಿದ ಕುರುಹುಗಳು ಪತ್ತೆಯಾಗಿವೆ. 

ಹಲವಾರು ವರ್ಷಗಳ ಇತಿಹಾಸವಿದ್ದ ಹಳೆಯ ಸಾರ್ವಜನಿಕ ರಂಗ ಮಂದಿರವನ್ನು ಹಾಗೂ ಅನೇಕ ಮರಗಳನ್ನು ಕೆಡವಿ ಹಾಕಿ ಸುಂದರ ಬಿ.ಸಿ.ರೋಡ್(B.C.Road) ಕಲ್ಪನೆಗೆ ಸುಂದರವಾದ ರಸ್ತೆಯ ನಿರ್ಮಾಣ ಮಾಡಲಾಗಿತ್ತು. ಆದರೆ ಅದಾದ ಕೆಲವೇ ಸಮಯದಲ್ಲಿ ಸರಕಾರದ ಅದೇಶದಂತೆ ಪಿಂಕ್ ಟ್ಲಾಯೆಟ್(Pink toilet) ನ್ನು ನಿರ್ಮಾಣ ಮಾಡಲು ಹೊರಟ ಪುರಸಭೆ ಬಿ.ಸಿ.ರೋಡಿನ ಅಂದವನ್ನು ಕೆಡಿಸುವ ರೀತಿಯಲ್ಲಿ ಬಿ.ಸಿ‌.ರೋಡಿನ ಹೃದಯ ಭಾಗದ ಆಡಳಿತ ಸೌಧದ ಕಚೇರಿಗೆ ಪ್ರವೇಶ ಮಾಡುವ ಗೇಟ್ ನ ಹತ್ತಿರದಲ್ಲೇ ಟಾಯ್ಲೆಟ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿತ್ತು.

Tap to resize

Latest Videos

ಮಾಟದ ಶಂಕೆ : ಎರಡು ಮಕ್ಕಳ ತಾಯಿಯನ್ನು ಜೀವಂತ ಸುಟ್ಟ ಜನ

ಈ ಪಿಂಕ್ ಟ್ಲಾಯೆಟ್ ನ ವಿರುದ್ಧ ಸಮಿತಿಯೊಂದು ರಚನೆಯಾಗಿ ಜಿಲ್ಲಾಡಳಿತ ಸಹಿತ  ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿ ತಾತ್ಕಾಲಿಕ ತಡೆ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಟಾಯ್ಲೆಟ್ ನಿರ್ಮಾಣದ ಕಾಮಗಾರಿಗೆ ವೇಗ ಸಿಕ್ಕಿದೆ. ‌ಕಾಮಗಾರಿ ನಡೆಯುವ ಸಂದರ್ಭದಲ್ಲಿಯೇ ಕಟ್ಟಡದ ಪ್ರವೇಶ ಭಾಗದಲ್ಲಿಯೇ ವಾಮಾಚಾರ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ. 

ಬಂಟ್ವಾಳ ಪೊಲೀಸರು ಈ ಭಾಗದಲ್ಲಿರುವ ಸಿ.ಸಿ.ಕ್ಯಾಮೆರಾ(CC Camera)ಗಳ ಪೂಟೇಜ್ ಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಸುಳಿವು ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಓರ್ವ ವ್ಯಕ್ತಿ ಆಗಮಿಸಿ ಈ ಕೆಲಸ ಮಾಡಿರುವ ದೃಶ್ಯ ಸಿ.ಸಿ.ಕ್ಯಾಮೆರಾದಲ್ಲಿ ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. KSOU: ಮುಕ್ತ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ..!

click me!