ಬೆಳಗಾವಿ: ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ವಿಫಲ, ನಾಡದ್ರೋಹಿ ಎಂಇಎಸ್‌ ಪುಂಡರಿಗೆ ಮುಖಭಂಗ!

By Girish Goudar  |  First Published Nov 1, 2024, 7:38 PM IST

ಎಂಇಎಸ್‌ ನಾಯಕರ ಇಂದು ಕರಾಳ ದಿನಾಚರಣೆಗೆ ಕರೆಗೆ ಮರಾಠಿ ಭಾಷಿಕರಿಂದ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆಯಲಿಲ್ಲ. ಮೆರವಣಿಗೆಯಲ್ಲಿ ಬೆರಳಣಿಕೆಯಷ್ಟು ಪಾಲ್ಗೊಂಡಿದ್ದ ಎಂಇಎಸ್‌ ಪುಂಡರು ಕಪ್ಪು ಬಟ್ಟೆ ಹಾಕಿ ಪ್ರತಿಭಟಿಸಿದರು.


ಬೆಳಗಾವಿ(ನ.01):  ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಸಂಘಟಿಸಿದ್ದ ಕರಾಳ ದಿನಾಚರಣೆ ಸಂಪೂರ್ಣವಾಗಿ ವಿಫಲವಾಗಿದೆ.

ಎಂಇಎಸ್‌ ನಾಯಕರ ಇಂದು(ಶುಕ್ರವಾರ) ಕರಾಳ ದಿನಾಚರಣೆಗೆ ಕರೆಗೆ ಮರಾಠಿ ಭಾಷಿಕರಿಂದ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ದೊರೆಯಲಿಲ್ಲ. ಮೆರವಣಿಗೆಯಲ್ಲಿ ಬೆರಳಣಿಕೆಯಷ್ಟು ಪಾಲ್ಗೊಂಡಿದ್ದ ಎಂಇಎಸ್‌ ಪುಂಡರು ಕಪ್ಪು ಬಟ್ಟೆ ಹಾಕಿ ಪ್ರತಿಭಟಿಸಿದರು.

Latest Videos

undefined

ಬೆಳಗಾವಿ ಗಡಿ ಪ್ರವೇಶಿಸದಂತೆ 3 ಮಹಾ ಸಚಿವರು, ಒಬ್ಬ ಸಂಸದರಿಗೆ ನಿರ್ಬಂಧ

ಬೆಳಗಾವಿ, ನಿಪ್ಪಾಣಿ, ಕಾರವಾರ, ಖಾನಾಪುರ ಸೇರಿದಂತೆ ಗಡಿಭಾಗದಲ್ಲಿರುವ ಮರಾಠಿ ಬಹುಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವಂತೆ ಘೋಷಣೆ ಕೂಗಿದ ಎಂಇಎಸ್‌ ಪುಂಡರು ಮತ್ತೆ ಉದ್ಘಟತನ ಪ್ರದರ್ಶಿಸಿದ್ದಾರೆ. 

ಮಹಾಧ್ವಾರ ರಸ್ತೆಯ ಸಂಭಾಜಿ ಉದ್ಯಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಶಿವಾಜಿ ಉದ್ಯಾನ, ಶಹಾಪುರ ಖಡೇಬಜಾರ, ಕೋರೆ ಗಲ್ಲಿ ಮೂಲಕ ಹಾಯ್ದು ಗೋವಾವೇಸ್‌ಗೆ ತೆರಳಿ, ವಿಸರ್ಜನೆಗೊಂಡಿತು. 

click me!