'ಸರ್ಕಾರ ಒಂದೇ ತಿಂಗಳು ಎಂದು BJPಯವರೇ ಹೇಳ್ತಿದ್ದಾರೆ'

Published : Sep 01, 2019, 01:53 PM IST
'ಸರ್ಕಾರ ಒಂದೇ ತಿಂಗಳು ಎಂದು BJPಯವರೇ ಹೇಳ್ತಿದ್ದಾರೆ'

ಸಾರಾಂಶ

ಸದ್ಯ ಬಿಜೆಪಿ ಸರ್ಕಾರ ತೊಂದರೆಯಲ್ಲಿದೆ. ಈ ಸರ್ಕಾರ ಎಷ್ಟುದಿನ ನಡೆಯಲಿದೆ, ಮುಂದೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಬಿಜೆಪಿ ಸರ್ಕಾರದಲ್ಲಿ ಸಾಕಷ್ಟುಗೊಂದಲಗಳಿದ್ದು, ಈ ಸರ್ಕಾರ ಎಷ್ಟುದಿನ ನಡೆಯಲಿದೆ ಕಾದು ನೋಡಬೇಕು. ಒಂದು ತಿಂಗಳು ಮಾತ್ರ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ. ಇದರ ಲಾಭ ಪಡೆಯಲು ಕಾಂಗ್ರೆಸ್‌ ಯಾವುದೇ ಪ್ರಯತ್ನ ಮಾಡಲ್ಲ ಎಂದರು.

ಬೆಳಗಾವಿ(ಆ.01): ಸದ್ಯ ಬಿಜೆಪಿ ಸರ್ಕಾರ ತೊಂದರೆಯಲ್ಲಿದೆ. ಈ ಸರ್ಕಾರ ಎಷ್ಟುದಿನ ನಡೆಯಲಿದೆ, ಮುಂದೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಸಾಕಷ್ಟುಗೊಂದಲಗಳಿದ್ದು, ಈ ಸರ್ಕಾರ ಎಷ್ಟುದಿನ ನಡೆಯಲಿದೆ ಕಾದು ನೋಡಬೇಕು. ಒಂದು ತಿಂಗಳು ಮಾತ್ರ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ. ಇದರ ಲಾಭ ಪಡೆಯಲು ಕಾಂಗ್ರೆಸ್‌ ಯಾವುದೇ ಪ್ರಯತ್ನ ಮಾಡಲ್ಲ. ಮುಂದೆ ಏನಿದ್ದರೂ ಮಧ್ಯಂತರ ಚುನಾವಣೆಯೇ ಇದಕ್ಕೆ ಪರಿಹಾರವಾಗಲಿದೆ ಎಂದರು.

'ರಮೇಶ ಜಾರಕಿಹೊಳಿ ಯಾವಾಗ ಯೂಟರ್ನ್ ಹೊಡೆಯುತ್ತಾರೆ ಹೇಳೊಕೆ ಬರಲ್ಲ'

ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಭೀಮಾ ನಾಯ್‌್ಕ ಹೆಸರು ಪ್ರಸ್ತಾಪವಾಗಿತ್ತು. ಸದ್ಯ ಕೆಎಂಎಫ್‌ ಚುನಾವಣೆ ಪರಿಸ್ಥಿತಿಯೇ ಬೇರೆಯಾಗಿದೆ. ಬಾಲಚಂದ್ರ ಜಾರಕಿಹೊಳಿಗೆ ಕೆಎಂಎಫ್‌ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಖುಷಿಯ ವಿಚಾರವೇನಲ್ಲ. ಬಿಜೆಪಿ ಆಧಾರ ಮೇಲೆ ಬಾಲಚಂದ್ರ ಜಾರಕಿಹೊಳಿ ಆಯ್ಕೆಯಾಗಿದ್ದಾರೆ. ಕೆಎಂಫ್‌ನಲ್ಲಿ ಒಳ್ಳೆಯ ಕೆಲಸ ಮಾಡಲಿ ಎಂಬ ಬಯಕೆ ಅಷ್ಟೇ ನಮ್ಮದು ಎಂದರು.

ಬೆಳಗಾವಿ: ನಾಣ್ಯ ಹಾಕಿ ನೀರು ಪಡೆಯಿರಿ..!

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ