ಚುನಾವಣೆಯಲ್ಲಿ 10 ರಲ್ಲಿ 7 ಸ್ಥಾನ ಬಿಜೆಪಿ ಪಾಲಾದರೆ 1 ಸ್ಥಾನ ಜೆಡಿಎಸ್ ಹಾಗೂ ಇನ್ನೆರಡು ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಲಭಿಸಿದೆ.
ಬೆಂಗಳೂರು [ಜ.24]: ಬಿಬಿಎಂಪಿಯ 12 ಸ್ಥಾಯಿ ಸಮಿತಿಯ ಪೈಕಿ ಹತ್ತು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಚುನಾವಣೆ ನಡೆಸಲಾಯಿತು. ಈ ವೇಳೆ ಹತ್ತು ಸ್ಥಾಯಿ ಸಮಿತಿಗೂ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅಧ್ಯಕ್ಷತೆಯಲ್ಲಿ ಹತ್ತು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಈ ವೇಳೆ ಎಲ್ಲ ಸಮಿತಿಗಳಿಗೂ ತಲಾ ಒಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
undefined
ಜ.18ರಂದು ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಗುರುವಾರ ಸದಸ್ಯರಿಗೆ ಸ್ಥಾಯಿ ಸಮಿತಿ ವಾರು ಪ್ರತ್ಯೇಕ ಸ್ಥಳ ನಿಯೋಜಿಸಲಾಗಿತ್ತು. ಒಂದೊಂದು ಸ್ಥಾಯಿ ಸಮಿತಿಗೂ ಪ್ರತ್ಯೇಕವಾಗಿ ಚುನಾವಣೆ ನಡೆಸಲಾಯಿತು. ನಾಮಪತ್ರ ಸಲ್ಲಿಕೆಗೆ ಮತ್ತು ವಾಪಾಸ್ ಪಡೆಯುವುದಕ್ಕೆ ತಲಾ ಒಂದು ನಿಮಿಷ ಕಾಲಾವಕಾಶ ನೀಡಲಾಯಿತು. ಅಂತಿಮವಾಗಿ ಎಲ್ಲ ಹತ್ತು ಸ್ಥಾಯಿ ಸಮಿತಿಗಳಿಗೂ ತಲಾ ಒಂದು ನಾಮಪತ್ರ ಸಲ್ಲಿಕೆಗೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ಘೋಷಿಸಿದರು.
'ಧರಂ ಸಿಂಗ್ ಅವಧಿಯಲ್ಲಿ ಬಿಎಸ್‌ವೈ ಕಾಂಗ್ರೆಸ್ ಸೇರಲು ಯತ್ನಿಸಿದ್ದರು!'..
ಗುರುವಾರ ನೇಮಕಗೊಂಡ ಹತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಪೈಕಿ ಎಲ್.ಶ್ರೀನಿವಾಸ್, ಮಂಜುನಾಥ್ ರಾಜು, ಆಶಾ ಸುರೇಶ್, ಹನುಮಂತಯ್ಯ, ಮೋಹನ್‌ಕುಮಾರ್, ಆರ್.ಪದ್ಮಾವತಿ ಹಾಗೂ ಅರುಣಾ ರವಿ ಬಿಜೆಪಿಯಿಂದ ಗೆದ್ದು ಪಾಲಿಕೆ ಸದಸ್ಯರಾಗಿ ಆಯ್ಕೆಯಾದವರು. ಇನ್ನು ಲಗ್ಗೇರೆ ವಾರ್ಡ್‌ನ ಮಂಜುಳಾ ನಾರಾಯಣಸ್ವಾಮಿ ಜೆಡಿಎಸ್‌ನಿಂದ, ಯಶವಂತಪುರ ವಾರ್ಡ್‌ನ ಜಿ.ಕೆ.ವೆಂಕಟೇಶ್ ಕಾಂಗ್ರೆಸ್‌ನಿಂದ ಹಾಗೂ ದೊಮ್ಮಲೂರು ವಾರ್ಡ್‌ನಿಂದ ಲಕ್ಷ್ಮೇನಾರಾಯಣ ಪಕ್ಷೇತರ ಸದಸ್ಯರಾಗಿ ಆಯ್ಕೆಯಾದವರಾಗಿದ್ದಾರೆ.
ಮಧ್ಯ ಪ್ರದೇಶದ ಶಕ್ತಿ ದೇಗುಲದಲ್ಲಿ ಮಹಾ ಪೂಜೆ, ಹೋಮ ನಡೆಸಿದ ಡಿಕೆಶಿ..
ತಾಂತ್ರಿಕ ಸಮಸ್ಯೆಯಿಂದ ಲೆಕ್ಕಪತ್ರ ಹಾಗೂ ತೋಟಗಾರಿಕಾ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಶೀಘ್ರದಲ್ಲಿ ಈ ಸಮಿತಿಗಳಿಗೂ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ.
-ಗೌತಮ್ ಕುಮಾರ್, ಬಿಬಿಎಂಪಿ ಮೇಯರ್.
ಸ್ಥಾಯಿ ಸಮಿತಿ ಅಧ್ಯಕ್ಷರ ಪಟ್ಟಿ
ಸ್ಥಾಯಿ ಸಮಿತಿ ಅಧ್ಯಕ್ಷರು ಪ್ರತಿನಿಧಿಸುವ ವಾರ್ಡ್
1.ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಎಲ್.ಶ್ರೀನಿವಾಸ್ ಕುಮಾರಸ್ವಾಮಿ ಬಡಾವಣೆ
2.ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಜಿ.ಮಂಜುನಾಥ ರಾಜು ಕಾಡುಮಲ್ಲೇಶ್ವರ
3.ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಆಶಾ ಸುರೇಶ್ ಬೆಳ್ಳಂದೂರು ವಾರ್ಡ್
4.ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಮೋಹನ್‌ಕುಮಾರ ನಾಗರಬಾವಿ
5.ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಜಿ.ಕೆ.ವೆಂಕಟೇಶ್ (ಎನ್‌ಟಿಆರ್) ಯಶವಂತಪುರ
6.ಶಿಕ್ಷಣ ಸ್ಥಾಯಿ ಸಮಿತಿ ಮಂಜುಳಾ ಎನ್.ಸ್ವಾಮಿ ಲಗ್ಗೇರೆ
7.ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸ್ಥಾಯಿ ಸಮಿತಿ ಅರುಣಾ ರವಿ ಸಿ.ವಿ.ರಾಮನ್‌ನಗರ
8.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಹನುಮಂತಯ್ಯ ಉತ್ತರಹಳ್ಳಿ
9.ಅಪೀಲುಗಳ ಸ್ಥಾಯಿ ಸಮಿತಿ ಸಿ.ಆರ್.ಲಕ್ಷ್ಮೇ ನಾರಾಯಣ (ಗುಂಡಣ್ಣ) ದೊಮ್ಮಲೂರು
10.ಮಾರುಕಟ್ಟೆಸ್ಥಾಯಿ ಸಮಿತಿ ಆರ್.ಪದ್ಮಾವತಿ ಚೌಡೇಶ್ವರಿ ವಾರ್ಡ್