ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಕಟ್ಟಿಟ್ಟ ಬುತ್ತಿ: ಸಚಿವ ಮುನೇನಕೊಪ್ಪ

By Kannadaprabha News  |  First Published Oct 16, 2021, 8:46 AM IST

*   ಜನತೆ ಪ್ರಜ್ಞಾವಂತರಿದ್ದು, ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ನೀಡ್ತಾರೆ
*  ಬಿಎಸ್‌ವೈ ಹಾಗೂ ಶೆಟ್ಟರ್‌ ಪ್ರಚಾರದಲ್ಲಿ ಭಾಗಿಯಾಗುತ್ತಿರುವುದರಿಂದ ಶಕ್ತಿ ಹೆಚ್ಚಾಗಿದೆ
*  ಕೇಂದ್ರ ಹಾಗೂ ರಾಜ್ಯದಲ್ಲಿ ಉತ್ತಮ ನಾಯಕತ್ವದಲ್ಲಿ ಸರ್ಕಾರ ನಡೆಸಲಾಗುತ್ತಿದೆ


ಹುಬ್ಬಳ್ಳಿ(ಅ.16): ಉಪಚುನಾವಣೆ(Byelection) ನಡೆಯುತ್ತಿರುವ ಹಾನಗಲ್‌(Hanagal) ಹಾಗೂ ಸಿಂದಗಿ(Sindagi) ಕ್ಷೇತ್ರದಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂದು ಜವಳಿ, ಸಕ್ಕರೆ ಹಾಗೂ ಕಬ್ಬು ಖಾತೆಯ ಸಚಿವ ಶಂಕರ ಪಾಟೀಲ ಮುನೇನಕೊಪ್ಪ(Shakar Patil Munenkoppa) ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಉತ್ತಮ ನಾಯಕತ್ವದಲ್ಲಿ ಸರ್ಕಾರ ನಡೆಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ(BS Yediyurappa) ಹಾಗೂ ಜಗದೀಶ ಶೆಟ್ಟರ್‌(Jagadish Shettar) ಪ್ರಚಾರದಲ್ಲಿ ಭಾಗಿಯಾಗುತ್ತಿರುವುದರಿಂದ ಶಕ್ತಿ ಹೆಚ್ಚಾಗಿದೆ. ಎರಡು ಕ್ಷೇತ್ರದಲ್ಲಿ ಬಿಜೆಪಿ(BJP) ಗೆಲವು ಕಟ್ಟಿಟ್ಟ ಬುತ್ತಿ ಎಂದರು.

Tap to resize

Latest Videos

ಸಿಎಂ ಹುದ್ದೆಗಾಗಿ ಫೈಟ್‌, ಕಾಂಗ್ರೆಸ್‌ ಐಸಿಯುನಲ್ಲಿದೆ: ಜಗದೀಶ ಶೆಟ್ಟರ್‌

ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಬೇನಾಮಿ ಆಸ್ತಿ ವಿಚಾರವಾಗಿ ಸೊಗಡು ಶಿವಣ್ಣ(Sogadu Shivanna) ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಕೆಲವರು ತಮ್ಮ ಅಭಿಪ್ರಾಯ ಹೇಳುತ್ತಾರೆ. ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದರು.

ಸಿದ್ದರಾಮಯ್ಯ(Siddaramaiah) ಮತ್ತು ಕುಮಾರಸ್ವಾಮಿ(HD Kumaraswamy) ಒಬ್ಬರಿಗೊಬ್ಬರು ವೈಯಕ್ತಿಕ ಟೀಕೆ ಮಾಡುತ್ತಿರುವುದನ್ನು ರಾಜ್ಯದ(Karnataka) ಜನತೆ ನೋಡುತ್ತಿದ್ದಾರೆ. ಎರಡು ಪಕ್ಷದವರು ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಜನತೆ ಪ್ರಜ್ಞಾವಂತರಿದ್ದು, ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ನೀಡುತ್ತಾರೆ ಎಂದರು.

ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪಮೇಯರ್‌ ವಿಚಾರವಾಗಿ ಗೆಜೆಟ್‌ ಆಗಿದೆ. ಆದಷ್ಟು ಶೀಘ್ರವೇ ಪಾಲಿಕೆ ಮೇಯರ್‌ ಉಪಮೇಯರ್‌ ಚುನಾವಣೆ ನಡೆಯಲಿದೆ ಎಂದರು.
 

click me!