15 ಕ್ಷೇತ್ರದಲ್ಲೂ ಬಿಜೆಪಿಗೆ ಗೆಲವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಶಾಸಕ ರೇಣುಕಾಚಾರ್ಯ| ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ| ಬಿಜೆಪಿಗೆ ಸಂಘಟನೆ,ಚುನಾವಣೆ ಹೊಸದೇನೂ ಅಲ್ಲ| ನಮ್ಮ ಪಕ್ಷದ ಸಂಘಟನೆಯೂ ಎಂದಿಗೂ ನಿಂತ ನೀರಲ್ಲ| ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳಿಗೆ ಜನರು ಆಶೀರ್ವಾದ ಮಾಡಲಿದ್ದಾರೆ|
ದಾವಣಗೆರೆ:(ಸೆ.22) ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಎಲ್ಲ 15 ಕ್ಷೇತ್ರದಲ್ಲೂ ಬಿಜೆಪಿ ಜಯ ಸಾಧಿಸಲದೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸಂಘಟನೆ, ಚುನಾವಣೆ ಹೊಸದೇನೂ ಅಲ್ಲ. ನಮ್ಮ ಪಕ್ಷದ ಸಂಘಟನೆಯೂ ಎಂದಿಗೂ ನಿಂತ ನೀರಲ್ಲ. 15 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಅಷ್ಟೂ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳಿಗೆ ಜನರು ಆಶೀರ್ವಾದ ಮಾಡಲಿದ್ದಾರೆ. ಅನರ್ಹ ಶಾಸಕರ ಬಗ್ಗೆ ವಿಶ್ವಾಸ, ಗೌರವವಿದೆ. 17 ಶಾಸಕರು ರಾಜೀನಾಮೆ ಕೊಟ್ಟಾಗ ನ್ಯಾಯಾಲಯ ಶಾಸಕರ ನಿಲುವನ್ನು ಎತ್ತಿ ಹಿಡಿಯಿತು ಎಂದು ತಿಳಿಸಿದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆದರೆ, ಆಗಿನ ಸ್ಪೀಕರ್ ರಮೇಶ್‌ಕುಮಾರ ತುಘಲಕ್ ದರ್ಬಾರ್ ಮಾಡಿ, ಅಷ್ಟೂ ಶಾಸಕರನ್ನೂ ಅನರ್ಹಗೊಳಿಸಿದರು. ಸುಪ್ರೀಂನಲ್ಲಿ ಈ ಶಾಸಕರ ಪರವಾಗಿ ತೀರ್ಮಾನ ಬರುವ ವಿಶ್ವಾಸವಿದೆ. ನ್ಯಾಯಾಲಯ ಶಾಸಕರ ರಾಜೀನಾಮೆ ಅಂಗೀಕಾರ ಸ್ಪೀಕರ್‌ಗೆ ಬಿಟ್ಟಿದ್ದು ಎಂಬ ತೀರ್ಪು ನೀಡಿತು. ಆದರೆ, ಸ್ಪೀಕರ್ ಆಗಿದ್ದ ರಮೇಶಕುಮಾರ ಶಾಸಕರನ್ನು ಅನರ್ಹಗೊಳಿಸಿ ತುಘಲಕ್ ಆಡಳಿತ ನಡೆಸಿದ್ರು ಎಂದು ಟೀಕಿಸಿದರು.
ವಿಜಯನಗರ ಜಿಲ್ಲೆ ಜನರ ಹಕ್ಕೊತ್ತಾಯ
ಬಳ್ಳಾರಿ ಜಿಲ್ಲೆಯ ವಿಸ್ತೀರ್ಣ ಹೆಚ್ಚಾಗಿರುವ ಹಿನ್ನೆಲೆ ಅನೇಕ ತಾಲೂಕುಗಳು ಜಿಲ್ಲಾ ಕೇಂದ್ರದಿಂದ 200 ಕಿಮೀ ಅಂತರದಲ್ಲಿವೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಕಷ್ಟವಾಗುತ್ತಿದೆ. ಜನ ಸಾಮಾನ್ಯರಿಗೂ ತೊಂದರೆ ತಪ್ಪಿದ್ದಲ್ಲವೆಂಬ ಕಾರಣಕ್ಕೆ, ಚಿಕ್ಕ ಚಿಕ್ಕ ಜಿಲ್ಲೆಗಳಾದರೆ ಅಭಿವೃದ್ಧಿ, ಆಡಳಿತ, ಜನರ ಹಿತದೃಷ್ಟಿಯಿಂದಲೂ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಆ ಜಿಲ್ಲೆಯ ಮಠಾಧೀಶರು, ಜನರು, ಜನ ಪ್ರತಿನಿಧಿಗಳ ಹಕ್ಕೊತ್ತಾಯದ ಮೇರೆಗೆ ಹೊಸ ವಿಜಯನಗರ ಜಿಲ್ಲೆ ರಚಿಸಲಾಗುತ್ತಿದೆ ಎಂದು ಅವರು ಹೇಳಿದರು.