ಶಿರಾ ಬಿಜೆಪಿ ಟಿಕೆಟ್ ಕನ್ಫರ್ಮ್ : ಒಂದೇ ವೇದಿಕೆಯಲ್ಲಿ ಮುನಿಸಿಕೊಂಡ ಮುಖಂಡರು

Kannadaprabha News   | Asianet News
Published : Oct 11, 2020, 08:40 AM ISTUpdated : Oct 11, 2020, 09:00 AM IST
ಶಿರಾ ಬಿಜೆಪಿ ಟಿಕೆಟ್ ಕನ್ಫರ್ಮ್ : ಒಂದೇ ವೇದಿಕೆಯಲ್ಲಿ ಮುನಿಸಿಕೊಂಡ ಮುಖಂಡರು

ಸಾರಾಂಶ

ತುಮಕೂರಿನಿಂದ ಬಿಜೆಪಿ ಟಿಕೆಟ್ ಬಹುತೇಕ ಖಚಿತವಾದಂತಾಗಿದೆ. ಇನ್ನು ಇದೇ ಕಾರಣದಿಂದ ಹಲವರಲ್ಲಿ ಅಸಮಾಧಾನವೂ ಕಂಡು ಬಂದಿತ್ತು. 

 ತುಮಕೂರು (ಅ.11):  ಬಿಜೆಪಿಯಿಂದ ರಾಜೇಶ್‌ಗೌಡರಿಗೆ ಟಿಕೆಟ್‌ ಬಹುತೇಕ ಅಂತಿಮವಾಗಿರುವ ಹಿನ್ನೆಲೆಯಲ್ಲಿ ತೀವ್ರವಾಗಿ ಅಸಮಾಧಾನಗೊಂಡು ಪಕ್ಷದ ಚಟುವಟಿಕೆಯಿಂದ ದೂರವಿದ್ದ ಎಸ್‌.ಆರ್‌. ಗೌಡ ಹಾಗೂ ಬಿ.ಕೆ. ಮಂಜುನಾಥ್‌ ಅವರು ರಾಜೇಶ್‌ಗೌಡರ ಜೊತೆ ವೇದಿಕೆ ಹಂಚಿಕೊಂಡು ಒಗ್ಗಟ್ಟು ಪ್ರದರ್ಶಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶಗೌಡರು ಸಂಧಾನ ನಡೆಸಿದ ಹಿನ್ನೆಲೆಯಲ್ಲಿ ರಾಜೇಶಗೌಡರ ಜೊತೆ ಬಿ.ಕೆ. ಮಂಜುನಾಥ್‌ ಹಾಗೂ ಎಸ್‌.ಆರ್‌. ಗೌಡ ಪರಸ್ಪರ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದರು.

'ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ' ..

ಕಳೆದ ಒಂದು ವಾರದಿಂದ ಈ ಇಬ್ಬರು ನಾಯಕರು ಅಸಮಾಧಾನಗೊಂಡಿದ್ದರು. ಈಗ ಅಸಮಾಧಾನ ಮರೆತು ಎಲ್ಲರೂ ಒಗ್ಗಟ್ಟಾಗಿ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದರಿಂದ ಕಾರ್ಯಕರ್ತರಲ್ಲಿ ಹರ್ಷ ಮನೆ ಮಾಡಿದೆ.

ನವೆಂಬರ್ ಮೂರರಂದು ರಾಜ್ಯದ ಎರಡು ಕ್ಷೇತ್ರಗಳಿಗೆ ಉಪ ಚುನಾವನೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ತಮ್ಮದೇ ಆದ ಸಿದ್ಧತೆಯಲ್ಲಿ ತೊಡಗಿವೆ. ಗೆಲುವಿನ ಭರಸವೆಯಲ್ಲಿ ಮುಂದುವರಿಯುತ್ತಿದೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!