ರಾಜಕೀಯದಲ್ಲೂ ಲೈಂಗಿಕ ದೌರ್ಜನ್ಯ ನಡೆದಿದ್ದರೆ ಅಲ್ಲೂ ವಿಚಾರಣೆ ಮಾಡಲಿ. ಎಲ್ಲಿ ದೌರ್ಜನ್ಯ ಅಗಿದೆಯೋ, ಎಲ್ಲಿ ತಪ್ಪು ಆಗಿದೆಯೋ ಅಲ್ಲಿ ವಿಚಾರಣೆ ಮಾಡಲಿ. ಸರ್ಕಾರ ಅದ್ಯಾವ ರೀತಿ ಮಾಡುತ್ತೋ ಮಾಡಲಿ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಂಗಳೂರು(ಸೆ.06): ಚಲನಚಿತ್ರ ರಂಗದಲ್ಲಿನ ಲೈಂಗಿಕ ದೌರ್ಜನ್ಯ ವಿಚಾರದ ಕುರಿತು ಚಿತ್ರರಂಗವು ಸಮಿತಿ ರಚನೆ ಮಾಡಿ ವಿಚಾರಣೆ ಮಾಡಲಿ. ರಾಜಕೀಯದಲ್ಲೂ ಇಂತಹ ದೌರ್ಜನ್ಯಗಳು ನಡೆದಿದ್ದರೆ, ಅಲ್ಲೂ ವಿಚಾರಣೆ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲೂ ಲೈಂಗಿಕ ದೌರ್ಜನ್ಯ ನಡೆದಿದ್ದರೆ ಅಲ್ಲೂ ವಿಚಾರಣೆ ಮಾಡಲಿ. ಎಲ್ಲಿ ದೌರ್ಜನ್ಯ ಅಗಿದೆಯೋ, ಎಲ್ಲಿ ತಪ್ಪು ಆಗಿದೆಯೋ ಅಲ್ಲಿ ವಿಚಾರಣೆ ಮಾಡಲಿ. ಸರ್ಕಾರ ಅದ್ಯಾವ ರೀತಿ ಮಾಡುತ್ತೋ ಮಾಡಲಿ ಎಂದರು.
ಕಾಂಗ್ರೆಸ್‌ನಲ್ಲಿ ಸಿಎಂ ಖುರ್ಚಿ ರೇಸ್: ಸಿದ್ದರಾಮಯ್ಯ ಪ್ರಕರಣ ಏನಾಗುತ್ತೆ ನೋಡೋಣ, ಬಿ.ಕೆ.ಹರಿಪ್ರಸಾದ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಪ್ರಕರಣ ಕೋರ್ಟ್‌ನಲ್ಲಿದ್ದು, ಆದಷ್ಟುಶೀಘ್ರ ಕೋರ್ಟ್ ನಿರ್ಧಾರ ಕೈಗೊಳ್ಳಲಿದೆ. ಆದರೆ ಸರ್ಕಾರವೇ ತನ್ನ ಆಜ್ಞೆಯಲ್ಲಿ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದು, ಕಾನೂನು ಉಲ್ಲಂಘನೆ ಆಗಿದ್ದನ್ನು ಸ್ವಷ್ಟವಾಗಿ ಒಪ್ಪಿಕೊಂಡಿದೆ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಪ್ರಕರಣಗಳ ತನಿಖೆ ಕುರಿತು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಅದೇನೇ ಇದ್ದರೂ ಎದುರಿಸಲು ಸಿದ್ಧ. ನಾವೇನು ತಪ್ಪು ಮಾಡಿಲ್ಲ. ಕಾನೂನು ಇದೆ, ಕೋರ್ಟ್ ಇದೆ. ಸೇಡಿನ ರಾಜಕೀಯ ಭಾವನೆ ಹೊರತುಪಡಿಸಿದರೂ, ಇದನ್ನೆಲ್ಲ ಎದುರಿಸಲು ಸಿದ್ಧರಿದ್ದೇವೆ ಎಂದು ಮಾಜಿ ಸಿಎಂ ಹೇಳಿದರು.