ಮಂತ್ರಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಲಾಬಿ : ಭುಗಿಲೇಳುತ್ತಾ ಭಿನ್ನಮತ ?

By Suvarna News  |  First Published Dec 15, 2019, 2:47 PM IST

ಬಿಜೆಪಿಯಲ್ಲೀಗ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಎಲ್ಲಾ ಅನರ್ಹರಿಗೂ ಸಂಪುಟ ಸ್ಥಾನ ನೀಡಬೇಕಾದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮಾತ್ರ ಮುಂದೆ ಹೋಗುತ್ತಲೇ ಇದೆ. 


ಚಿತ್ರದುರ್ಗ(ಡಿ.15): ನಾನೂ ಹಲವು ವರ್ಷಗಳಿಂದ ಶಾಸಕನಾಗಿದ್ದು, ನನಗೂ ಮಂತ್ರಿ ಸ್ಥಾನದ ಆಕಾಂಕ್ಷೆ ಇದೆ ಎಂದು ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದ್ದಾರೆ. 

ಚಿತ್ರದುರ್ಗ ನಗರದಲ್ಲಿ ಮಾತನಾಡಿದ ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ 1994ರಿಂದ ನಾನು ಶಾಸಕನಾಗಿದ್ದೇನೆ. ನನಗೂ ಮಂತ್ರಿಗಿರಿ ಆಕಾಂಕ್ಷೆ  ಇದೆ ಎಂದಿದ್ದಾರೆ. 

Latest Videos

undefined

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷರಾದ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ. ಇದಕ್ಕೆ ನಮ್ಮ ನಾಯಕರೆಲ್ಲರೂ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಪ್ಪಾರೆಡ್ಡಿ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ನಮ್ಮ ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದಲೂ ಯಾರೂ ಸಚಿವರಾಗಿಲ್ಲ. ಇದರಿಂದ ಜಿಲ್ಲೆಯ ಅನೇಕ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ.  ಆದ್ದರಿಂದ ಹಿರಿತನ ಆಧರಿಸಿ ಮಂತ್ರಿಗಿರಿ ನೀಡಬೇಕು ಎಂದು ಹೇಳಿದರು. 

ಸರ್ಕಾರ ರಚನೆಯಾದಾಗಲೇ ಮಂತ್ರಿಗಿರಿ ನೀಡುವ ಭರವಸೆ ಇತ್ತು. ಆದರೆ ನಾನಾ ಕಾರಣದಿಂದ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಉಪ ಚುನಾವಣೆ ಬಳಿಕ ಇದೀಗ ಮತ್ತೊಮ್ಮೆ ಸಂಪುಟ ವಿಸ್ತರಣೆ ಆಗಲಿದ್ದು, ಈಗ ಹೈ ಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ಇದೆ ಎಂದರು. 

ರಾಜ್ಯದಲ್ಲಿ ಉಪ ಚುನಾವಣೆ ನಡೆದು 12 ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಸಿದ್ದಾರೆ. ಇನ್ನು ಅನರ್ಹರಿಗೂ ಮಂತ್ರಿ ಸ್ಥಾನ ನೀಡುವ ಅವಶ್ಯಕತೆ ಇದ್ದು, ಸಂಪುಟ ವಿಸ್ತರಣೆ ಪ್ರಕ್ರಿಯೆ ಸದ್ಯಕ್ಕೆ ಮುಂದೆ ಹೋಗುತ್ತಿದೆ.

click me!