ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಶ್ರೀರಾಮನಿಗೆ ಅವಮಾನ: ಬಿಜೆಪಿ ಶಾಸಕನ ವಿರುದ್ಧ ಆಕ್ರೋಶ

Published : Mar 31, 2023, 11:03 AM ISTUpdated : Mar 31, 2023, 11:19 AM IST
ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಶ್ರೀರಾಮನಿಗೆ ಅವಮಾನ: ಬಿಜೆಪಿ ಶಾಸಕನ ವಿರುದ್ಧ ಆಕ್ರೋಶ

ಸಾರಾಂಶ

ಶ್ರೀರಾಮನ‌ ಏಡತೊಡೆಯ ಮೇಲೆ ನಿಂತು ಶಾಸಕ ಶರಣು ಸಲಗರ ಪೋಸ್ ಕೊಟ್ಟಿದ್ದಾರೆ. ರಾಮನ‌ ಮೂರ್ತಿ ಮೇಲೆ ನಿಂತು ಮಾಲಾರ್ಪಣೆ ಮಾಡಿದ್ದಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ‌ ವ್ಯಕ್ತವಾಗಿದೆ. 

ಬೀದರ್(ಮಾ.31):  ರಾಮನ ತೊಡೆ ಮೇಲೆ ನಿಂತು ಶ್ರೀರಾಮನಿಗೆ ಬಿಜೆಪಿ ಶಾಸಕ ಶಾಸಕ ಶರಣು ಸಲಗರ ಅವಮಾನಗೊಳಿಸಿದ ಘಟನೆ ಬಸವಕಲ್ಯಾಣದಲ್ಲಿ‌ ನಡೆದ ರಾಮನವಮಿ‌ ಶೋಭಾಯಾತ್ರೆ ವೇಳೆ ನಡೆದಿದೆ. ಶಾಸಕ ಶರಣು ಸಲಗರ ತೊಡೆ ಮೇಲೆ ನಿಂತು ಮರ್ಯಾದೆ ಪುರುಷೋತ್ತಮ ಶ್ರೀ ರಾಮನ ಕೊರಳಿಗೆ ಹೂವಿನ ಹಾರ ಹಾಕಿದ್ದಾರೆ. 

ಈ ಮೂಲಕ ರಾಮನವಮಿಯಂದೇ ಬಿಜೆಪಿ ಶಾಸಕ ಸಲಗರ ಮಹಾ ಯಡವಟ್ಟು ಮಾಡಿಕೊಂಡಿದ್ದಾರೆ. ಶ್ರೀರಾಮನ‌ ಏಡತೊಡೆಯ ಮೇಲೆ ನಿಂತು ಶಾಸಕ ಶರಣು ಸಲಗರ ಪೋಸ್ ಕೊಟ್ಟಿದ್ದಾರೆ. ರಾಮನ‌ ಮೂರ್ತಿ ಮೇಲೆ ನಿಂತು ಮಾಲಾರ್ಪಣೆ ಮಾಡಿದ್ದಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ‌ ವ್ಯಕ್ತವಾಗಿದೆ. 

ಪೂಜಾ ಹಡಪದ ಹತ್ಯೆ ಪ್ರಕರಣ: ಬಿಜೆಪಿ ಕಾರ‍್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣ ವಾಪಸ್‌ !

ಮಾಜಿ ಶಾಸಕ‌ ಮಲ್ಲಿಕಾರ್ಜುನ ಖೂಬಾ ಅವರು ಫೇಸ್‌ಬುಕ್‌ನಲ್ಲಿ‌ ಪೊಸ್ಟ್ ಮಾಡಿ ಆಕ್ರೋಶವನ್ನ ಹೊರಹಾಕಿದ್ದಾರೆ. ರಾಮನ ಮೇಲೆ ನಿಂತಿರೋ‌ ಪೋಟೋವನ್ನು ಶಾಸಕ ಶರಣು‌ ಸಲಗರ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಚಾರದ ಭರಾಟೆಯಲ್ಲಿ ಶಾಸಕ ಸಲಗರ ಮತ್ತೊಂದು ಮಹಾಯಡವಟ್ಟು ಮಾಡಿಕೊಂಡಿದ್ದಾರೆ. ಶಾಸಕ ಸಲಗರ ವಿರುದ್ಧ ಬೀದರ್‌ ಜಿಲ್ಲಾದ್ಯಾಂತ ಶ್ರೀರಾಮ ಭಕ್ತರು ಆಕ್ರೋಶವನ್ನ ಹೊರಹಾಕಿದ್ದಾರೆ. 

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ