ಕಾವೇರಿಗೆ ಕೊಟ್ಟಷ್ಟು ಆದ್ಯತೆ ತುಂಗಾ, ಕೃಷ್ಣಾಕ್ಕಿಲ್ಲ: ರಾಜೂಗೌಡ

By Kannadaprabha News  |  First Published Jul 16, 2021, 3:39 PM IST

* ಡ್ಯಾಂ ವಿಚಾರವಷ್ಟೇ ಅಲ್ಲ, ಎಲ್ಲಾ ವಿಚಾರದಲ್ಲೂ ತಾರತಮ್ಯ 
* ತುಂಗಭದ್ರಾ ಜಲಾಶಯ ಹೂಳು ತುಂಬಿದ ಬಗ್ಗೆ ಯಾರು ಮಾತನಾಡಲ್ಲ 
* ಕೃಷ್ಣಾ ನದಿ ನೀರು ಪ್ರವಾಹದ ಸಂದರ್ಭದಲ್ಲಿ ಹೆಚ್ಚುವರಿ ಆಂಧ್ರದ ಪಾಲು
 


ಯಾದಗಿರಿ(ಜು.16): ತಾಯಿಗೆ ಆದ್ಯತೆ ಕೊಟ್ಟಷ್ಟು ತಾಯಿ, ಕೃಷ್ಣಾ ತಾಯಿಗೆ ಆದ್ಯತೆ ನೀಡಲಿ. ಸಿಎಂ ಬಿಎಸ್‌ಐ ಅವರೇ, ತುಂಗಭದ್ರಾ ಜಲಾಶಯಕ್ಕೆ ಹಾಗೂ ನಾರಾಯಣಪುರದ ಜಲಾಶಯಕ್ಕೆ ಆದ್ಯತೆ ನೀಡಿ ಎಂದು ಸುರಪುರ ಶಾಸಕ ನರಸಿಂಹ ನಾಯಕ್‌(ರಾಜೂಗೌಡ) ಸರ್ಕಾರಕ್ಕೆ ಮನವಿ ಮಾಡಿದರು.

ಗುರುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡ್ಯಾಂ ವಿಚಾರವಷ್ಟೇ ಅಲ್ಲ, ಎಲ್ಲಾ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ.ತುಂಗಭದ್ರಾ ಜಲಾಶಯ ಹೂಳು ತುಂಬಿದ ಬಗ್ಗೆ ಯಾರು ಮಾತನಾಡಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ಯಾದಗಿರಿ: ಕೃಷ್ಣ ನದಿಗೆ ನೀರು, ಎಚ್ಚರದಿಂದಿರಲು ಸೂಚನೆ

ನೀರು ಪ್ರವಾಹದ ಸಂದರ್ಭದಲ್ಲಿ ಹೆಚ್ಚುವರಿ ಆಂಧ್ರ ಪಾಲಾಗುತ್ತಿದೆ. ಇದನ್ನು ತಡೆಯಲು ತಿಂಥಣಿ ಸಮೀಪ ನೀರು ಸಂಗ್ರಹಿಸಲು ಬ್ರಿಡ್ಜ್‌ಕಂ ಬ್ಯಾರೇಜ್‌ ಬೇಗ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ. 
 

click me!