ನಾನು ಲಂಬಾಣಿಯಾದ ಕಾರಣ ದೇವಸ್ಥಾನ ಕೆಲಸಕ್ಕೆ ಅಡ್ಡಿ, ಬಿಜೆಪಿ ನಾಯಕನಿಂದ ಅನ್ಯಾಯ: ಪ್ರಭು ಚವ್ಹಾಣ್‌

By Kannadaprabha News  |  First Published Nov 20, 2024, 11:12 PM IST

ನಾನು ಲಂಬಾಣಿ ಸಣ್ಣ ಜಾತಿಯವನು ಅಂತ ಈ ಹಿಂದೆ ಎಂಪಿ ಬೇಕಂತಲೆ ತಮ್ಮ ಬೆಂಬಲಿಗರ ಮುಂದೆ ಲಂಬಾಣಿ ಕೈಯಿಂದ ಕಾಮಗಾರಿ ಮಾಡಿಸಬೇಡಿ ಅಂತ ಹೇಳಿ ಕೆಲಸ ಮಾಡಿಕೊಡದೆ ಇದುದರಿಂದಲೇ ವರ್ಷಗಳಿಂದ ನೆನಗುದಿಗೆ ಬಿದ್ದಿದೆ. ನಾನೇನು ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಪ್ರಭು ಚವ್ಹಾಣ್‌ 


ಔರಾದ್(ನ.20): ನಾನು ಸಣ್ಣ ಜಾತಿಯವನು ಎನ್ನುವ ಕಾರಣಕ್ಕೆ ಅಮರೇಶ್ವರ ದೇವಸ್ಥಾನ ಕೆಲಸ ಮಾಡಲಿಕ್ಕೆ ಪದೇ ಪದೆ ಅಡ್ಡಿಪಡಿಸಿ ಅನ್ಯಾಯ ಮಾಡಲಾಗಿದೆ ಎಂದು ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ್‌ ಅವರು ಕಣ್ಣಲ್ಲಿ ನೀರು ತಂದು ಗದ್ಗದಿತರಾಗಿ ನೋವು ತೋಡಿಕೊಂಡಿದ್ದಾರೆ. 

ಪಟ್ಟಣ ಪಂಚಾಯತ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮರೇಶ್ವರ ದೇವಸ್ಥಾನದ ಮಹಾದ್ವಾರದ ಕಾಮಗಾರಿ ನೆನಗುದಿಗೆ ಬಿದ್ದಿರುವ ಕುರಿತಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನಾನು ಲಂಬಾಣಿ ಸಣ್ಣ ಜಾತಿಯವನು ಅಂತ ಈ ಹಿಂದೆ ಎಂಪಿ ಬೇಕಂತಲೆ ತಮ್ಮ ಬೆಂಬಲಿಗರ ಮುಂದೆ ಲಂಬಾಣಿ ಕೈಯಿಂದ ಕಾಮಗಾರಿ ಮಾಡಿಸಬೇಡಿ ಅಂತ ಹೇಳಿ ಕೆಲಸ ಮಾಡಿಕೊಡದೆ ಇದುದರಿಂದಲೇ ವರ್ಷಗಳಿಂದ ನೆನಗುದಿಗೆ ಬಿದ್ದಿದೆ. ನಾನೇನು ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಅಮರೇಶ್ವರ ಮಂಟಪದ ಕಾಮಗಾರಿಗೆ ಶಾಸಕರ ಅನುದಾನದ ಅಡಿಯಲ್ಲಿ ನಾನೇ ಮಾಡಿ ಸಿದ್ದೇನೆ. ಆದರೆ ಅದರ ಮೇಲೆ ನನ್ನ ಹೆಸರು ಬರೆದಿಲ್ಲ. ನನ್ನ ಜಾತಿಯನ್ನು ಹಿಡಿದು ಸಾಕಷ್ಟು ನೋವು ಕೊಟ್ಟಿದ್ದಾರೆ. ನಾನು ಶಾಸಕನಾಗಿ ಇದೆಲ್ಲ ಹೇಳಿಕೊಳ್ಳಬಾರದು ಅಂದಿದ್ದೇ ಇಷ್ಟು ದಿನ ಸುಮ್ಮನಿದ್ದೆ ಎಂದರು. 

Tap to resize

Latest Videos

undefined

ಸಚಿವ ಖೂಬಾ ನನ್ನನ್ನು ಲಂಬಾಣಿ ಚೋರ್‌ ಅಂತ ಕರೀತಾರೆ: ಪ್ರಭು ಚವ್ಹಾಣ್‌

ಜಾತಿ, ಮತ ಪಂಗಡಗಳೆನ್ನದೆ ಸರ್ವರನ್ನೂ ಪೋಷಿಸುವ ಆರಾಧ್ಯ ದೈವ ಉದ್ಭವಲಿಂಗ ಅಮರೇಶ್ವರರ ಆಶೀರ್ವಾದದಿಂದ ನಾಲ್ಕು ಬಾರಿ ಶಾಸಕ, ಎರಡು ಬಾರಿ ಸಚಿವನಾಗಿದ್ದೇನೆ. ನನ್ನ ಆರಾಧ್ಯ ದೇವರ ಸೇವೆ ಮಾಡಲು ನನಗೆ ಹೀಗೆಲ್ಲ ಅಡ್ಡಗಾಲು ಹಾಕಿದ್ದಾರೆ. ಇಂದೇ ಎಲ್ಲರೂ ಹೇಳಲಿ ನಾನು ನಾಳೇನೆ ಕೆಲಸ ಆರಂಭಿಸುತ್ತೇನೆ ಎಂದು ಚವ್ಹಾಣ್ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. 

ಈ ಸಂದರ್ಭ ಮಧ್ಯ ಪ್ರವೇಶಿಸಿ ಮಾತನಾಡಿದ ಪಟ್ಟಣ ಪಂಚಾಯತ್ ಸದಸ್ಯ ದಯಾನಂದ ಘಳೆ, ನಾವು 1.2 ಕೋಟಿ ರು. ವೆಚ್ಚದ ಮಹಾದ್ವಾರ ನಿರ್ಮಾಣ  ಕಾಮಗಾರಿ ಆರಂಭಿಸುವಂತೆ ಆಗಿನ ಜಿಲ್ಲಾಧಿಕಾರಿ ಬಳಿ ಹೋಗಿ ಮನವಿ ಮಾಡಿದಾಗ ಸಾಹೇಬ್ರು ಸ್ಪಷ್ಟವಾಗಿ ಹೇಳಿದ್ರು ಕೇಂದ್ರ ಸಚಿವ ಖೂಬಾ ಅವರು ಕೆಲಸ ಮಾಡಬೇಡ ಅಂತಾರೆ, ಶಾಸಕ ಚವ್ಹಾಣ್ ಮಾಡು ಅಂತಾರೆ ನಾವೇನ್ ಮಾಡಲಿಕ್ಕಾಗುತ್ತೆ ಅಂತ ಕೈ ತೊಳೆದುಕೊಂಡರು. ಈಗ ಇದೇ ಕಾಮಗಾರಿಗೆ ಎರಡು ಕೋಟಿ ರು.ಗಳ ಬೇಡಿಕೆ ಇಟ್ಟು ನೆನಗುದಿಗೆ ದೂಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಔರಾದ್ ಮಾಸ್ಟರ್ ಪ್ಲಾನ್ ರೆಡಿಯಿದೆ: 

ಔರಾದ್ ಪಟ್ಟಣದ ಸುತ್ತಲೂ ವರ್ತುಲ ರಸ್ತೆ ನಿರ್ಮಾಣ ಮಾಡುವುದಲ್ಲದೆ ಚರಂಡಿ, ವಿದ್ಯುತ್ ಹಾಗೂ ಕುಡಿಯುವ ನೀರಿನ ಯೋಜನೆಗಳಿಗಾಗಿ ಮಾಸ್ಟರ್ ಪ್ಲಾನ್ ತಯಾರಿಲಾಗಿದೆ ಎಂದು ಶಾಸಕ ಪ್ರಭು ಚವ್ಹಾಣ್‌ ತಿಳಿಸಿದರು. 

ವರಿಷ್ಠರು ಒಪ್ಪಿದರೆ ಖೂಬಾ ಮೇಲೆ 200 ಕೋಟಿ ರು. ಮಾನನಷ್ಟಕೇಸ್‌: ಪ್ರಭು ಚವ್ಹಾಣ್

ಡಿಪ್ಲೋಮಾ ಕಾಲೇಜಿನಿಂದ ತಹಸೀಲ್ ಕಚೇರಿ, ದೇಶಮುಖಕೆರೆ, ನಾರಾಯಣಪುರ, ಮಮದಾಪೂರ ಹತ್ತಿರದಿಂದ ಬಿಎಸ್‌ಎನ್‌ಎಲ್ ಟಾವ‌ರ್ ವರೆಗೆ ವರ್ತುಲ ರಸ್ತೆ ನಿರ್ಮಾಣ ಮಾಲಾಗುವುದು. ಕಾರಂಜಾ ಜಲಾಶಯದಿಂದ 84 ಕೋಟಿ ರು. ವೇಚ್ಚದಲ್ಲಿ ಕುಡಿಯುವ ನೀರಿನ ಯೋಜನೆ, ಚರಂಡಿ ನಿರ್ಮಾಣ ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಔರಾದ್ ಪಟ್ಟಣವನ್ನು ಸುಂದರ ಮತ್ತು ಮಾದರಿಯಾಗಿ ಮಾಡಲಾಗುವುದು ಎಂದರು. 
ಪಟ್ಟಣ ಪಂಚಾಯತಿಯಲ್ಲಿ ಕಚೇರಿ ಸ್ಥಾಪನೆ ಮಾಡುವ ಮೂಲಕ ತಿಂಗಳಿಗೊಮ್ಮೆ ಜನತಾ ದರ್ಶನ ಕಾರ್ಯಕ್ರಮ ಮಾಡಲಾಗುವುದು ಎ೦ದು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಪ.ಪಂ ಅಧ್ಯಕ್ಷೆ ಸರೂಬಾಯಿ ಘಳೆ, ಉಪಾಧ್ಯಕ್ಷೆ ರಾಧಾಬಾಯಿ ನರೋಟಿ, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ್, ಸದಸ್ಯರಾದ ಧೋಂಡಿಬಾ ನರೋಟೆ ಇದ್ದರು.

click me!