ಯಡಿಯೂರಪ್ಪ ಸರ್ಕಾರಕ್ಕೆ ಮತ್ತೊಂದು ಕಂಟಕ: ರಾಜೀನಾಮೆ ಬೆದರಿಕೆ ಇಟ್ಟ ಬಿಜೆಪಿ ಶಾಸಕ

By Suvarna News  |  First Published Oct 10, 2020, 12:44 PM IST

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ‌ ಮೀಸಲಾತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಗೂಳಿಹಟ್ಟಿ ಶೇಖರ್| ಮೀಸಲಾತಿ ಹಾಗೂ ವರ್ಗಗಳ ಫಿಕ್ಸ್ ಮಾಡುವಾಗ ಬಿಜೆಪಿ ಶಾಸಕರ ಸಲಹೆ ಕೇಳಲಾಗಿತ್ತು. ಆದರೆ ಈಗ ನಮ್ಮ ಮಾತಿಗಾಗಲಿ ಸಲಹೆಗಾಗಲಿ ರಾಜ್ಯ ಸರ್ಕಾರ ಕಿಮ್ಮತ್ತು ಕೊಟ್ಟಿಲ್ಲ ಎಂದು ತಮ್ಮ ಅಸಮಾಧಾನವನ್ನ ಹೊರಹಾಕಿದ ಗೂಳಿಹಟ್ಟಿ ಶೇಖರ್| 


ಚಿತ್ರದುರ್ಗ(ಅ.10): ಯಡಿಯೂರಪ್ಪ ಸರ್ಕಾರಕ್ಕೆ ಮತ್ತೊಂದು ಕಂಟಕ ಎದುರಾಗುವ ಸಾಧ್ಯತೆ ಇದೆ. ಹೌದು, ಈ ಬಾರಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ರಾಜೀನಾಮೆ ಬೆದರಿಕೆ ಇಟ್ಟಿದ್ದಾರೆ. ಬಿಜೆಪಿ ಶಾಸಕರನ್ನ ಕೇಳದೆ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಪ್ರಕಟಿಸಿದ್ದನ್ನ ಖಂಡಿಸಿ ಜಿಲ್ಲೆಯ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ್ದಾರೆ. 

ಇಂದು ಜಿಲ್ಲೆಯ ಹೊಸದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲೆಕ್ಷನ್ ಮಾಡಲು ನಾವು ಬೇಕು, ಮೀಸಲಾತಿ ಹಂಚಿಕೆ ಮಾಡಲು ಅವರು ಬೇಕಾ? ಎಂದು ಹೇಳುವ ಮೂಲಕ ಸಚಿವ ನಾರಾಯಣ ಗೌಡ ವಿರುದ್ಧ ಗೂಳಿಹಟ್ಟಿ ಶೇಖರ್ ಪರೋಕ್ಷವಾಗಿ ಗುಟುರು ಹಾಕಿದ್ದಾರೆ. 

Tap to resize

Latest Videos

ಮತ್ತೋರ್ವ ಬಿಜೆಪಿ ಶಾಸಕಗೆ ಕೊರೋನಾ ಪಾಸಿಟಿವ್ : ಸಂಪರ್ಕಕ್ಕೆ ಬರದಿರಲು ಮನವಿ

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ‌ ಮೀಸಲಾತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಗೂಳಿಹಟ್ಟಿ ಶೇಖರ್, ಮೀಸಲಾತಿ ಹಾಗೂ ವರ್ಗಗಳ ಫಿಕ್ಸ್ ಮಾಡುವಾಗ ಬಿಜೆಪಿ ಶಾಸಕರ ಸಲಹೆ ಕೇಳಲಾಗಿತ್ತು. ಆದರೆ ಈಗ ನಮ್ಮ ಮಾತಿಗಾಗಲಿ ಸಲಹೆಗಾಗಲಿ ರಾಜ್ಯ ಸರ್ಕಾರ ಕಿಮ್ಮತ್ತು ಕೊಟ್ಟಿಲ್ಲ. ನಮ್ಮ ಕ್ಷೇತ್ರದ ಸ್ಥಳೀಯ ಸಂಸ್ಥೆಯಲ್ಲಿ ಮೀಸಲಾತಿ ವರ್ಗಗಳ ಬಗ್ಗೆ ಯಾವುದೇ ಬದಲಾವಣೆ ಬೇಕಿಲ್ಲ ಎಂದು ತಿಳಿಸಿದ್ದೆ, ಆದರೆ ನನ್ನ ಮಾತಿಗೂ ಕಿಮ್ಮತ್ತು ಕೊಟ್ಟಿಲ್ಲ, ನನ್ನ ಗಮನಕ್ಕೆ ತಾರದೆ ನನಗೂ ಒಂದು ಮಾತು ತಿಳಿಸದೆ ಕೆಟಗರಿ ಫಿಕ್ಸ್ ಮಾಡಲಾಗಿದೆ. ಪ್ರತಿಯೊಂದು ವಿಚಾರದಲ್ಲೂ ನನಗೆ ಅವಮಾನವಾಗುತ್ತಿದೆ ಎಂದು ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ. 
 

click me!