ಅವಕಾಶವಿರುವವರೆಗೆ ಸೇವೆಗೆ ಜೀವನ ಮೀಸಲು: ಬಾಲಚಂದ್ರ ಜಾರಕಿಹೊಳಿ

By Kannadaprabha News  |  First Published Feb 5, 2023, 7:30 PM IST

ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಬದ್ಧನಿರುವೆ. ಜೊತೆಗೆ ಜನರು ನೀಡುತ್ತಿರುವ ಪ್ರೀತಿ, ವಿಶ್ವಾಸ, ನಂಬಿಕೆಗಳೇ ನನಗೆ ದೊಡ್ಡ ಶಕ್ತಿಯಾಗಿದೆ ಎಂದು ತಿಳಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ 


ಮೂಡಲಗಿ(ಫೆ.05):  ಭಗವಂತನು ಎಲ್ಲಿಯವರೆಗೆ ಜನರ ಸೇವೆ ಮಾಡಲು ಅವಕಾಶ ಕೊಡುತ್ತಾನೋ ಅಲ್ಲಿಯವರೆಗೆ ಜನಸೇವೆಗೆ ನನ್ನ ಜೀವನವನ್ನು ಮುಡುಪಾಗಿಡುತ್ತೇನೆ. ಜನರ ಸೇವೆಯನ್ನು ಮಾಡುತ್ತಿರುವದರಿಂದ ಅವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದನೆ ಮಾಡುತ್ತಿರುವುದು ನನಗೆ ತೃಪ್ತಿದಾಯಕವಾಗಿದೆ ಎಂದು ಕೆಎಂಎಫ್‌ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇತ್ತಿಚೆಗೆ ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ ಹಣಮಂತ ದೇವರ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಬದ್ಧನಿರುವೆ. ಜೊತೆಗೆ ಜನರು ನೀಡುತ್ತಿರುವ ಪ್ರೀತಿ, ವಿಶ್ವಾಸ, ನಂಬಿಕೆಗಳೇ ನನಗೆ ದೊಡ್ಡ ಶಕ್ತಿಯಾಗಿದೆ ಎಂದು ತಿಳಿಸಿದರು.

Latest Videos

undefined

ಬೈಲಹೊಂಗಲ: ಅಂತಿಮಯಾತ್ರೆಗೂ ಸಿಗದ ದಾರಿ..!

ಹೊಸಟ್ಟಿ ಗ್ರಾಮದ ಹಣಮಂತ ದೇವರು ಈ ಭಾಗದಲ್ಲಿ ಹೆಸರುವಾಸಿಯಾದ ದೇವಸ್ಥಾನವಾಗಿದೆ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಕಲ್ಪವೃಕ್ಷವಾಗಿದೆ. ಅಮವಾಸ್ಯೆಯ ದಿನವನ್ನು ಅಶುಭವೆಂದು ಕೆಲವರು ಹೇಳುತ್ತಿರುತ್ತಾರೆ. ಆದರೆ, ಆ ದಿನದಂದು ನಾವು ಉತ್ತಮ ಕಾರ್ಯಗಳನ್ನು ಮಾಡುತ್ತಿರುತ್ತೇವೆ. ಆ ದಿನದಂದು ದೇವರ ದರ್ಶನ ಪಡೆದು ಕೃತಾರ್ಥರಾಗುತ್ತೇವೆ. ದೇವರ ಅನುಗ್ರಹದಿಂದಲೇ ನಾವು ಬದುಕುತ್ತಿದ್ದೇವೆ. ನಾವೆಲ್ಲ ದೈವಭಕ್ತರು. ಅನೇಕ ಧಾರ್ಮಿಕ ಆಚರಣೆಗಳನ್ನು ಮಾಡುತ್ತಿರುತ್ತೇವೆ. ದೇವರು ಎಂದರೆ ಭಕ್ತಿಯ ಜೊತೆಗೆ ಭಯವೂ ಇರುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರು ಸಾಕ್ಷರರಾಗಬೇಕೆಂಬುದು ನನ್ನ ಮಹತ್ವಾಕಾಂಕ್ಷೆ. ಈ ದಿಸೆಯಲ್ಲಿ ಎಲ್ಲ ಇಲಾಖೆಗಳಿಗಿಂತ ಶಿಕ್ಷಣ ಇಲಾಖೆಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ಪ್ರತಿ ಮಕ್ಕಳು ವಿದ್ಯಾವಂತರಾಗಬೇಕು. ಮುಂದೊಂದು ದಿನ ಸಮಾಜದಲ್ಲಿ ಉತ್ತಮ ಸ್ಥಾನ ಸಿಗಬೇಕು ಕಲಿತ ಶಾಲೆಗೆ, ಊರಿಗೆ ಕೀರ್ತಿ ತರುವ ಮಕ್ಕಳಾಗಬೇಕು. ಇದರಿಂದ ಕಲಿಸಿದ ಗುರುಗಳು ಸೇರಿ ಪಾಲಕರಿಗೂ ತುಂಬಾ ಖುಷಿಯಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಗದೀಶ ಡೊಳ್ಳಿ, ಮಲ್ಲಪ್ಪ ನಾಯಿಕ, ಶಿವಾನಂದ ಹಿರೇಮಠ, ಸದಾಶಿವ ನಾಯಿಕ, ಮಲ್ಲಪ್ಪ ಕಬ್ಬೂರ, ಸಿದ್ದಪ್ಪ ಹೊಸಮನಿ, ಕೃಷ್ಣಾ ಹೊಸಮನಿ, ಪ್ರಕಾಶ ಕಬ್ಬೂರ ಸೇರಿ ಅನೇಕರು ಇದ್ದರು.

click me!