ಕೆಸರುಗದ್ದೆ ಓಟ: ಮೂರು ಬಾರಿ ಬಿದ್ದರೂ ಗುರಿ ಮುಟ್ಟಿದ ಸಚಿವ ರವಿ!

By Kannadaprabha News  |  First Published Feb 24, 2020, 8:12 AM IST

ಕೆಸರುಗದ್ದೆ ಓಟ: ಬಿದ್ದರೂ ಗುರಿ ಮುಟ್ಟಿದ ಸಚಿವ ರವಿ| ಗುರಿ ತಲುಪಲು ಕೆಲವೇ ಮೀಟರ್‌ಗಳ ಅಂತರದಲ್ಲಿರುವಾಗ ಎರಡು ಬಾರಿ ಬಿದ್ದ ಸಚಿವ


ಚಿಕ್ಕಮಗಳೂರು[ಫೆ.24]: ಕೆಸರುಗದ್ದೆ ಓಟದಲ್ಲಿ ಪಾಲ್ಗೊಂಡ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಬಿದ್ದರೂ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು. ಭಾನುವಾರ ಚಿಕ್ಕಮಗಳೂರಿನ ನಲ್ಲೂರು ಗ್ರಾಮದಲ್ಲಿ ಜಿಲ್ಲಾ ಉತ್ಸವದ ಅಂಗವಾಗಿ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕ್ರೀಡೆಯನ್ನು ಉದ್ಘಾಟಿಸಿದ ಸಚಿವರು ಸ್ವತಃ ಕೆಸರು ಗದ್ದೆಯಲ್ಲಿ ಓಡಲು ನಿಂತುಕೊಂಡರು.

"

Latest Videos

undefined

ಓಟ ಆರಂಭಿಸಿ ಇನ್ನೇನು ತಲುಪಬೇಕು ಎನ್ನುವಷ್ಟರಲ್ಲಿ ಆಯತಪ್ಪಿ ಬಿದ್ದರು. ಸಚಿವರು ಉಳಿದವರಿಗಿಂತ ತಡವಾದರೂ ಗುರಿ ತಲುಪಿದರು. ಈ ಸಂದರ್ಭದಲ್ಲಿ ಯುವಕರು ಕೂಡ ಸಚಿವರ ಜೊತೆ ಓಡಲು ನಿಂತುಕೊಂಡರು.

ಓಟಕ್ಕೆ ಸಿಗ್ನಲ್‌ ಕೊಡುತ್ತಿದ್ದಂತೆ ಓಡಿದ ಸಚಿವರು ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ, ಇನ್ನೇನು ಗುರಿ ತಲುಪಲು ಕೆಲವೇ ಮೀಟರ್‌ಗಳ ಅಂತರದಲ್ಲಿರುವಾಗ ಎರಡು ಬಾರಿ ಬಿದ್ದರು. ಈ ಸಂದರ್ಭದಲ್ಲಿ ಇತರೆ ಸ್ಪರ್ಧಾಗಳು ಸಚಿವರನ್ನು ಹಿಂದಿಕ್ಕಿ ಓಡಿದರು. ಆದರೂ ಗುರಿ ತಲುಪವಲ್ಲಿ ಸಚಿವರು ಯಶಸ್ವಿಯಾದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಚಪ್ಪಾಳೆ ತಟ್ಟುವ ಮೂಲಕ ಸಚಿವರನ್ನು, ಓಟಗಾರರನ್ನು ಪ್ರೋತ್ಸಾಹಿಸಿದರು.

click me!