ಬಿಜೆಪಿ-ಜೆಡಿಎಸ್ ದೋಸ್ತಿ ಬಗ್ಗೆ ದೊಡ್ಡ ನಾಯಕರ ಚರ್ಚೆ : ಕಮಲಕ್ಕೆ ಪಟ್ಟ

Kannadaprabha News   | Asianet News
Published : Feb 14, 2021, 10:28 AM IST
ಬಿಜೆಪಿ-ಜೆಡಿಎಸ್ ದೋಸ್ತಿ ಬಗ್ಗೆ ದೊಡ್ಡ ನಾಯಕರ ಚರ್ಚೆ : ಕಮಲಕ್ಕೆ ಪಟ್ಟ

ಸಾರಾಂಶ

ಅಧಿಕಾರ ಬಿಜೆಪಿಗೆ.. ಜೆಡಿಎಸ್ ಜೊತೆಗೆ ಮೈತ್ರಿ ಬಗ್ಗೆ ದೊಡ್ಡ ನಾಯಕರ ನಡುವೆ ಈಗಾಗಲೇ ನಡೆದ ಮಾತುಕತೆ.. ಪಟ್ಟ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿ ಬಿಜೆಪಿ ನಾಯಕರು.  

ಮೈಸೂರು (ಫೆ.14):  ಮೈಸೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಬಿಜೆಪಿಯವರೇ ಮೇಯರ್‌ ಮಾಡುತ್ತೇವೆ ಎಂಬ ವಿಶ್ವಾಸವಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಮೈಸೂರಿನಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಮಹಾನಗರ ಪಾಲಿಕೆಯ ಮೇಯರ್‌, ಉಪ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ವಿಚಾರವು ಈಗಾಗಲೇ ರಾಜ್ಯ ಮಟ್ಟದ ನಾಯಕರ ಜೊತೆ ಮಾತುಕತೆ ಆಗಿದೆ.

ಬಿಬಿಎಂಪಿ ಚುನಾವಣೆಯತ್ತ ಕಾಂಗ್ರೆಸ್‌ ಚಿತ್ತ ..

 ಆದರೆ, ಸ್ಥಳೀಯ ಮಟ್ಟದ ನಾಯಕರ ಜೊತೆ ಇನ್ನೂ ಚರ್ಚೆ ಮಾಡಿಲ್ಲ. ಸ್ಥಳೀಯ ನಾಯಕರ ಅಭಿಪ್ರಾಯ ಪಡೆದುಕೊಳ್ಳಬೇಕಿದೆ ಎಂದರು.

ಈಗ ತಾನೆ ಮೇಯರ್‌ ಮತ್ತು ಉಪ ಮೇಯರ್‌ ಮೀಸಲಾತಿ ಘೋಷಣೆ ಆಗಿದೆ. ಈ ಬಾರಿ ಬಿಜೆಪಿಯವರೇ ಮೇಯರ್‌ ಮಾಡಬೇಕೆಂಬ ವಿಶ್ವಾಸವಿದೆ. ಈ ವಿಚಾರವನ್ನು ಪಕ್ಷದ ನಾಯಕರು, ಮುಖ್ಯಮಂತ್ರಿಯೊಂದಿಗೆ ಮತ್ತೊಮ್ಮೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು