ಶಾಸಕ ರಾಮದಾಸ್‌ಗೆ ಸಿಗುತ್ತಾ BSY ಸಂಪುಟದಲ್ಲಿ ಸ್ಥಾನ ?

Kannadaprabha News   | Asianet News
Published : Sep 21, 2020, 11:45 AM ISTUpdated : Sep 21, 2020, 12:00 PM IST
ಶಾಸಕ ರಾಮದಾಸ್‌ಗೆ ಸಿಗುತ್ತಾ BSY ಸಂಪುಟದಲ್ಲಿ ಸ್ಥಾನ ?

ಸಾರಾಂಶ

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಆಕಾಂಕ್ಷಿಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. 

ಮೈಸೂರು (ಸೆ.21):  ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು 63ನೇ ವಾರ್ಡ್‌ನ ಬಿಜೆಪಿ ಉಸ್ತುವಾರಿ ಎಚ್‌.ಸಿ. ದೇವರಾಜೇಗೌಡ ಒತ್ತಾಯಿಸಿದ್ದಾರೆ. 

ಪಕ್ಷದ ಶಿಸ್ತಿನ ಸಿಪಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ ರಾಮದಾಸ್‌ ಅವರು ಈ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೈಸೂರು ಭಾಗಕ್ಕೆ ಉತ್ತಮ ಕೆಲಸಗಳಿಗೆ ಒತ್ತು ನೀಡಿದ್ದಾರೆ. ಅಲ್ಪಸಂಖ್ಯಾತರು ಮತ್ತು ಬಡವ ದೀನ ದಲಿತರ ಪರವಾಗಿ ಕೆಲಸ ಮಾಡಿದ್ದು, ಕೆ.ಆರ್‌. ಕ್ಷೇತ್ರವನ್ನು ಕೊರೋನಾ ಮುಕ್ತವನ್ನಾಗಿಸಲು ಶ್ರಮಿಸಿದ್ದಾರೆ.

ರಾಜ್ಯದಲ್ಲಿ ಮಳೆಯಬ್ಬರ : ಸರ್ಕಾರದ ವಿರುದ್ಧ ಕೈ ಸಮರ ...

 ಲಾಕ್‌ಡೌನ್‌ ಸಂದರ್ಭದಲ್ಲಿ 6 ರಿಂದ 7 ಸಾಇರ ಆಹಾರ ಪೊಟ್ಟಣ ನೀಡಿದ್ದಾರೆ. ಎಲ್ಲಾ ವರ್ಗದ ಜನರ ಪ್ರೀತಿ ಗಳಿಸಿರುವುದಾಗಿ ಅವರು ತಿಳಿಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ 25 ಸಾವಿರಕ್ಕೂ ಅಧಿಕ ಮತಗಳಿಸಿದ್ದಾರೆ. ಅವರನ್ನು ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವರನ್ನಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

PREV
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್