ಜಾರಕಿಹೊಳಿ ನೇತೃತ್ವ : ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ನಾಯಕರು

Kannadaprabha News   | Asianet News
Published : Dec 01, 2020, 04:07 PM IST
ಜಾರಕಿಹೊಳಿ ನೇತೃತ್ವ : ಬಿಜೆಪಿ ಬಿಟ್ಟು  ಕಾಂಗ್ರೆಸ್ ಸೇರಿದ ನಾಯಕರು

ಸಾರಾಂಶ

ಬಿಜೆಪಿ ಮುಖಂಡರು ಜಾರಕಿಹೊಳಿ ನೇತೃತ್ವದಲ್ಲಿ  ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.  ಈ ಮೂಲಕ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. 

ಯಮನಕರಡಿ (ಡಿ.01): ಹುಕ್ಕೇರಿ ತಾಲೂಕಿನ  ಯಮನಕರಡಿ ವಿಧಾನಸಭಾ ಮತ ಕ್ಷೇತ್ರದ ಮೊದಗಾ ಗ್ರಾಮದಲ್ಲಿ ಬಿಜೆಪಿಯ ಹಲವಾರು ಮುಖಂಡರು  ಸೋಮವಾರ  ಅಧಿಕೃತವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ಸತೀಶ್ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

ಹುಕ್ಕೇರಿ ತಾಲೂಕಿನ ದಡ್ಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮೊದಗಾ ಗ್ರಾಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ಸತಿಶ್ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಅವರ ಸಾಮಾಜಿಕ  ಕಳಕಲೀ ಮತ್ತು ಕ್ಷೇತ್ರದ ವಿವಿಧ ರಂಗಗಳಲ್ಲಿ ಕಳೆದ ಒಂದು ದಶಕದಿಂದ ಮಾಡಿದ ಸಾಧನೆ ಮೆಚ್ಚಿ 28ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕೈ ಸೇರಿದರು.

ಚಾಲೇಂಜ್ ಹಾಕಿದ ಸಾಹುಕಾರ್ : ನನ್ನ ರಾಜೀನಾಮೆ ಖಚಿತ ಎಂದ ರಮೇಶ್ ಜಾರಕಿಹೊಳಿ .. 

ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿದ ಮುಖಂಡರನ್ನು ಶಾಸಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ ಮುಂಬರುವ ದಿನಗಳಲ್ಲಿ ಕ್ಷೇತ್ರದ ಶ್ರೇಯಸ್ಸಿಗೆ  ಶ್ರಮಿಸಿ ಯಮನಕರಡಿ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ  ರಾಜ್ಯಕ್ಕೆ ಮಾದರಿ ಮಾಡಲಾಗುವುದು ಎಂದರು. 

ಪ್ರೀತಿ ವಿಶ್ವಾಸ ಗೆಲ್ಲುವ ಮೂಲಕ  ಈ ಕ್ಷೇತ್ರದ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!