ಕುಂಬಾರ ಸಮಾಜದ ಹಲವಾರು ಹಿರಿಯ ಮುಖಂಡರು ಹಾಗೂ ಯುವಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ| ಕೊಪ್ಪಳದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ|
ಕೊಪ್ಪಳ(ನ.01): ಹಿಟ್ನಾಳ ಗ್ರಾಮದ ಕುಂಬಾರ ಸಮಾಜದ ಹಲವಾರು ಹಿರಿಯ ಮುಖಂಡರು ಹಾಗೂ ಯುವಕರು ಬಿಜೆಪಿ ತೊರೆದು ಕೊಪ್ಪಳದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರ ನೇತೃತ್ವದಲ್ಲಿ ಶಾಸಕರ ನಿವಾಸದ ಕಾರ್ಯಲಯದಲ್ಲಿ ಶನಿವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಮಹಾದೇವ, ಮುತ್ತಣ್ಣ, ಮೆಹಬೂಬ್ ಸಾಬ್ ಮತ್ತು ಅನೇಕ ಹಿರಿಯ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಸಿನಿಮೀಯ ಮಾದರಿ ಗಂಗಾವತಿ ನಗರಸಭೆ ಸದಸ್ಯನ ಅಪಹರಣ..!
ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ಕೆ. ನಾಗರಾಜ ಹಿಟ್ನಾಳ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬುಸಾಬ್ ಸೈಯ್ಯದ್, ಕಾರ್ಯಕರ್ತರು ಉಪಸ್ಥಿತರಿದ್ದರು.