'ಪಕ್ಷದ ಕಾರ್ಯ ವೈಖರಿಯಿಂದ ಮನನೊಂದು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ'

By Kannadaprabha NewsFirst Published May 16, 2020, 11:08 AM IST
Highlights

ಶಾಸಕ ಕಳಕಪ್ಪ ಬಂಡಿ ಅವರ ಮೊದಲ ವಿಧಾನಸಭಾ ಚುನಾವಣೆ ಸಂದರ್ಭದಿಂದ ಹಿಡದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳಕಪ್ಪ ಬಂಡಿ ಅವರನ್ನು ಗೆಲ್ಲಿಸಲು ಸಾಕಷ್ಟು ಶ್ರಮಿಸಿದ್ದೇವು| ಅಲ್ಲದೆ ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಶಾಸಕ ಕಳಕಪ್ಪ ಬಂಡಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಅವಿರತವಾಗಿ ಕೆಲಸ ಮಾಡಿದ್ದೇವು| ನಮ್ಮಂತಹ ಪ್ರಾಮಾಣಿಕ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಮೀನಾಮೇಷ ಮಾಡುವುದರ ಜೊತೆಗೆ ನಮ್ಮ ಸ್ವಾಭಿಮಾನಕ್ಕೆ ಬಿಜೆಪಿ ಪಕ್ಷದಿಂದ ಧಕ್ಕೆಯಾಗಿದೆ ಎಂದು ದೂರಿದ ಬಿಜೆಪಿ ಮುಖಂಡರು|

ಗಜೇಂದ್ರಗಡ(ಮೇ.16): ಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಬಂದ್ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ತೊರೆದು ಇಂದು(ಮೇ.16)ರ ಶನಿವಾರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದೇವೆ ಎಂದು ಸ್ಥಳೀಯ ಬೋವಿ ಸಮಾಜದ ಪ್ರಮುಖರು ಹಾಗೂ ಬಿಜೆಪಿ ಮುಖಂಡರಾದ ಶರಣಪ್ಪ ಚಳಗೇರಿ ಮತ್ತು ಬಸವರಾಜ ಬಂಕದ ಹೇಳಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲೂಕಿನ ಆಡಳಿತ ಪಕ್ಷವಾಗಿರುವ ಬಿಜೆಪಿ ಅದರಲ್ಲೂ ಶಾಸಕ ಕಳಕಪ್ಪ ಬಂಡಿ ಅವರ ಮೊದಲ ವಿಧಾನಸಭಾ ಚುನಾವಣೆ ಸಂದರ್ಭದಿಂದ ಹಿಡದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳಕಪ್ಪ ಬಂಡಿ ಅವರನ್ನು ಗೆಲ್ಲಿಸಲು ಸಾಕಷ್ಟು ಶ್ರಮಿಸಿದ್ದೇವು. ಅಲ್ಲದೆ ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಶಾಸಕ ಕಳಕಪ್ಪ ಬಂಡಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಅವಿರತವಾಗಿ ಕೆಲಸ ಮಾಡಿದ್ದೇವು. ಆದರೆ ನಮ್ಮಂತಹ ಪ್ರಾಮಾಣಿಕ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಮೀನಾಮೇಷ ಮಾಡುವುದರ ಜೊತೆಗೆ ನಮ್ಮ ಸ್ವಾಭಿಮಾನಕ್ಕೆ ಬಿಜೆಪಿ ಪಕ್ಷದಿಂದ ಧಕ್ಕೆಯಾಗಿದೆ ಎಂದು ದೂರಿದ್ದಾರೆ. 

'ಕೊರೋನಾದಿಂದ ತತ್ತರಿಸಿದ ರೈತನಿಗೆ ಸರ್ಕಾರ ಆಸರೆಯಾಗಬೇಕಿದೆ'

ಬಿಜೆಪಿ ಪಕ್ಷದ ಕಾರ್ಯ ವೈಖರಿಯಿಂದ ಮನನೊಂದು ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತಗಳನ್ನು ಒಪ್ಪಿಕೊಂಡು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜಿ.ಎಸ್.ಪಾಟೀಲ ಅವರ ಸಮ್ಮುಖದಲ್ಲಿ ಇಲ್ಲಿನ ಪುರಸಭೆ ಸದಸ್ಯ ಶಿವರಾಜ ಘೋರ್ಫಡೆ ಅವರ ಫಾರ್ಮ್ ಹೌಸ್‌ನಲ್ಲಿ  ಶನಿವಾರ ಗಂಟೆಗೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೇವೆ ಎಮದು ತಿಳಿಸಿದ್ದಾರೆ.

ತಾಲೂಕಿನಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಅದರಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುವ ಮೂಲಕ ಜನಪರ, ರೈತಪರ ಹಾಗೂ ಕಾರ್ಮಿಕರ ಪರವಾದ ಆಡಳಿತ ನಡೆಸುವ ಶಾಸಕರನ್ನು ಮತ್ತೊಮ್ಮೆ ಕ್ಷೇತ್ರದಲ್ಲಿ ಆಯ್ಕೆ ಮಾಡುವ ದೆಸೆಯಲ್ಲಿ ಶ್ರಮಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

click me!