ಅರ್ಧದಲ್ಲೇ ರಥಯಾತ್ರೆ ಕೈಬಿಟ್ಟಬಿಜೆಪಿ ನಾಯಕರು..!

By Kannadaprabha NewsFirst Published Mar 8, 2023, 6:18 AM IST
Highlights

ಪಟ್ಟಣಕ್ಕೆ ಆಗಮಿಸಿದ ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಯಾತ್ರೆಯ ಅರ್ಧದಲ್ಲಿಯೇ ವಿಜಯ ರಥದಿಂದ ಇಳಿದು ಹೋದ ಪ್ರಸಂಗ ನಡೆಯಿತು.

  ಕೆ.ಆರ್‌.ಪೇಟೆ :  ಪಟ್ಟಣಕ್ಕೆ ಆಗಮಿಸಿದ ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಯಾತ್ರೆಯ ಅರ್ಧದಲ್ಲಿಯೇ ವಿಜಯ ರಥದಿಂದ ಇಳಿದು ಹೋದ ಪ್ರಸಂಗ ನಡೆಯಿತು.

ನೆರೆಯ ಪಾಂಡವಪುರದಿಂದ ವಿಜಯ ಸಂಕಲ್ಪ ಯಾತ್ರೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ನೇತೃತ್ವದಲ್ಲಿ ಸಂಜೆ ಪಟ್ಟಣಕ್ಕೆ ಆಗಮಿಸಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ನೂರಾರು ಬಿಜೆಪಿ ಕಾರ್ಯಕರ್ತರ ಪಡೆಯೊಂದಿಗೆ ವಿಜಯ ಸಂಕಲ್ಪ ಯಾತ್ರಾ ರಥವನ್ನು ಸ್ವಾಗತಿಸಿದರು. ಯಾವುದೇ ಪೂರ್ವ ಸಿದ್ದತೆಯಿಲ್ಲದ ಕಾರಣ ಯಾತ್ರೆಗೆ ನಿರೀಕ್ಷಿತ ಪ್ರಮಾಣದ ಜನ ಇರಲಿಲ್ಲ. ಪಟ್ಟಣದಲ್ಲಿಂದು ಆಯೋಜಿಸಲಾಗಿದ್ದ ತ್ಯಾಗರಾಜ ಮಹೋತ್ಸವಕ್ಕೆ ಕರೆ ತಂದಿದ್ದ ಕಲಾ ತಂಡಗಳೊಂದಿಗೆ ಪೂರ್ಣಕುಂಭ ಹೊತ್ತಯರು ಸಾಂಪ್ರದಾಯಿಕ ಸ್ವಾಗತ ನೀಡಿದರು. ಪಟ್ಟಣದ ಪ್ರಮುಖ ಬೀದಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮೆರವಣಿಗೆಯ ಮೂಲಕ ಸಾಗಿ ನೆರೆಯ ನಾಗಮಂಗಲದ ಕಡೆ ತೆರಳಿತು.

Latest Videos

ಪ್ರವಾಸಿ ಮಂದಿರದ ಆವರಣಕ್ಕೆ ಆಗಮಿಸಿದ ಕೂಡಲೇ ನಿರೀಕ್ಷಿತ ಪ್ರಮಾಣದ ಜನ ಕಾಣದೆ ಮೆರವಣಿಯ ಮೂಲಕ ರಥಯಾತ್ರೆಯಲ್ಲಿ ಸಾಗುವ ಉತ್ಸಾಹ ತೋರದೆ ಬಿಜೆಪಿ ನಾಯಕರು ಹೊರಡಲು ಆತುರ ತೋರಿದರು. ಆದರೆ ಒತ್ತಾಯಕ್ಕೆ ಮಣಿದು ಕೆಲದೂರ ರಥಯಾತ್ರೆಯಲ್ಲಿ ಸಾಗಿದರಾದರೂ ಅರ್ಧದಲ್ಲಿಯೇ ಇಳಿದು ಹೊರಟು ಹೋದರು.

ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಸಿ.ನಾರಾಯಣಗೌಡರು, ಬೆಂಗಳೂರಿನಲ್ಲಿ ತುರ್ತು ಕಾರ್ಯಕ್ರಮವಿರುವ ಕಾರಣ ಸದಾನಂದಗೌಡರು ಹೋಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು. ನಾರಾಯಣಗೌಡ ಕಾಂಗ್ರೆಸ್‌ ಸೇರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಬಿ.ಸಿ.ಪಾಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ನಾರಾಯಣಗೌಡರು, ಬಿ.ಸಿ.ಪಾಟೀಲ್‌ ನನ್ನ ಸಹದ್ಯೋಗಿ. ಆದರೆ ಅವರಿಗೆ ನನ್ನ ವಿಷಯವನ್ನು ಪ್ರಸ್ತಾಪಿಸುವ ನೈತಿಕತೆಯಿಲ್ಲ ಎಂದು ಹೇಳಿದರು.

ಕಾಂಗ್ರೆಸ್ಸಿಗರ ಆಕ್ರೋಶಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಕಾಂಗ್ರೆಸ್ಸಿಗೆ ಹೋಗುವುದಾದರೆ ಎಲ್ಲರಿಗೂ ಹೇಳಿಯೇ ಹೋಗುತ್ತೇನೆ. ಕ್ಷೇತ್ರದ ಬಹುತೇಕ ರೈತರು ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ. ಸಂಜೆ ನಾಲ್ಕು ಗಂಟೆಯ ವೇಳೆಗೆ ಅವರು ಎಲ್ಲಿದ್ದರೂ ತಮ್ಮ ತಮ್ಮ ಮನೆಗಳಿಗೆ ಹಾಲು ಕರೆಯಲು ಹೋಗಲೇಬೇಕು. ವಿಜಯ ಸಂಕಲ್ಪ ಯಾತ್ರೆ ತಡವಾಗಿ ಆಗಮಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿಲ್ಲ ಎಂದರು.

ಮಾಜಿ ಸಚಿವ ಎನ್‌.ಮಹೇಶ್‌, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್‌, ತಾ.ಪಂ ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್‌ ಅರವಿಂದ, ಮಾಜಿ ಅಧ್ಯಕ್ಷ ಬಳ್ಳೇಕೆರೆ ವರದರಾಜೇಗೌಡ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು

click me!