ವಿಶ್ವನಾಥ್ ಉಚ್ಛಾಟನೆಗೆ ಬಿಜೆಪಿ ಮುಖಂಡರಿಂದ ಒತ್ತಾಯ

By Kannadaprabha NewsFirst Published Jul 23, 2021, 11:49 AM IST
Highlights
  • ಎಚ್ ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ ವಿರುದ್ಧವೂ ಭೂ ಅವ್ಯವಹಾರದ ಆರೋಪ 
  • ಅಂತಹವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಆಗ್ರಹ

ಮೈಸೂರು (ಜು.23): ಎಚ್ ವಿಶ್ವನಾಥ್ ಅವರ ಪುತ್ರ ಅಮಿತ್ ದೇವರಹಟ್ಟಿ ವಿರುದ್ಧವೂ ಭೂ ಅವ್ಯವಹಾರದ ಆರೋಪ ಇದ್ದು  ಇವರಿಗೆ ಬೇರೆಯವರ ಕುರಿತು ಮಾತನಾಡುವ ನೈತಿಕತೆ ಇಲ್ಲ. ಅಂತಹವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಬಿಜೆಪಿ ಪ. ಜಾತಿ  ಮೋರ್ಚಾ ರಾಜ್ಯ ಕಾರ್ಯಕಾರಿಣಿ ಮಾಜಿ ಸದಸ್ಯ ಕುಡ್ಲೂರು ಶ್ರೀಧರಮೂರ್ತಿ ಆಗ್ರಹಿಸಿದ್ದಾರೆ. 

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕುರಿತು ಹಗುರವಾಗಿ ಮಾತನಾಡಿರುವ ವಿಶ್ವನಾಥ್‌ಗೆ ನಯತಿಕತೆ ಇಲ್ಲ. ವಿಶ್ವನಾಥ್ ಅವರನ್ನು  ಯಡಿಯೂರಪ್ಪ ಅವರು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರು ಅವರಿಗೆ ಕೃತಜ್ಞತೆ ಇಲ್ಲ. ಬಿಎಸ್‌ವೈ 5 ದಶಕದಿಂದ ಹೋರಾಟ ಮಾಡಿಕೊಂಡು ಬಂದ ಫಲವಾಗಿ ಈಗ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತು ಬಿಜೆಪಿಗೆ 104 ಸ್ಥಾನ ನೀಡಿದ್ದಾಗಿ ಅವರು ಹೇಳಿದರು. 

ಬಿಎಸ್‌ವೈ ಬೆಂಬಲಕ್ಕೆ ನಿಂತ ಸ್ವಾಮೀಜಿಗಳ ವಿರುದ್ಧ ಬಿಜೆಪಿ ಹಿರಿಯ ನಾಯಕ ಆಕ್ರೋಶ

ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ವಿರುದ್ದ ಇಲ್ಲದ ಆರೋಪ ಮಾಡಲಾಗುತ್ತಿದೆ. ಕೂಡಲೇ ಅವರನ್ನು ಪಕ್ಷದಿಂದ  ಅಮಾನತುಗೊಳಿಸಬೇಕು. ರಾಜಕೀಯ ಅಂತ್ಯ ಕಾಲದಲ್ಲಿದ್ದ ವಿಶ್ವನಾಥ್ ಅವರಿಗೆ  ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಕುಮಾರಸ್ವಾಮಿ ಪುನರ್ ಜನ್ಮ ನೀಡಿದರು. ಯಡಿಯೂರಪ್ಪ ಎಂಎಲ್‌ಸಿ ಸ್ಥಾನ ನೀಡಿದರು. ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ನೆನೆಯುವ ಬದಲು ಹಿಯಾಳಿಸುವುದು ಎಷ್ಟು ಸರಿ ಎಂದರು. 

click me!