
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡರೊಬ್ಬರ ಪುತ್ರ ಕೃಷ್ಣಾ ಜೆ. ರಾವ್ ವಿರುದ್ಧದ ಅತ್ಯಾ*ಚಾರ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಪ್ರಸ್ತಾಪವನ್ನು ರಾವ್ ಪರ ವಕೀಲರು ಮುಂದಿಟ್ಟಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ತಡೆ ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಕೃಷ್ಣರಾವ್ ಪರ ಹಿರಿಯ ವಕೀಲರ ಪಿ.ಪಿ. ಹೆಗ್ಡೆ, ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಪ್ರಸ್ತಾವವನ್ನು ನ್ಯಾಯಾಲಯದ ಮುಂದಿಟ್ಟರು ತಿಳಿಸಿದರು.
ಅದನ್ನು ಪರಿಗಣಿಸಿದ ಪೀಠ, ಜೂನ್ 19ರಂದು ಸಂತ್ರಸ್ತೆ ಹಾಗೂ ಆರೋಪಿ ಮತ್ತು ಪ್ರಕರಣಕ್ಕೆ ಸಂಬಂಧಪಟ್ಟವರು ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಬೇಕು ಎಂದು ಸೂಚಿಸಿ ವಿಚಾರಣೆಯನ್ನು ಜೂನ್ 30ರಂದು ಮುಂದೂಡಿತು.
ಇದಕ್ಕೂ ಮುನ್ನ ಹೈಕೋರ್ಟ್ ನಲ್ಲಿ ಠೇವಣಿ ಇಡಲಾದ ಸಂತ್ರಸ್ತೆಗೆ ನೀಡಬೇಕಾದ ಮೊದಲ ತಿಂಗಳ ಜೀವನಾಂಶ ಪರಿಹಾರ ಮೊತ್ತ 75 ಸಾವಿರ ರು. ಅನ್ನು ಸಂತ್ರಸ್ತೆಗೆ ಪಾವತಿಸಲು ಸೂಚಿಸಿತು. ಎರಡನೇ ತಿಂಗಳ ಪರಿಹಾರ ಮೊತ್ತ 75 ಸಾವಿರ ರು. ಅನ್ನು ಮುಂದಿನ ನಾಲ್ಕು ದಿನಗಳಲ್ಲಿ ಪಾವತಿಸಲು ಆರೋಪಿ ಕೃಷ್ಣರಾವ್‌ಗೆ ಸೂಚಿಸಿತು