ಮುನಿಸು ಮರೆತು ಒಂದಾದ ಮೈತ್ರಿ ಪಕ್ಷದ ನಾಯಕರು; ಅಕ್ಕಪಕ್ಕ‌ ಕುಳಿತು ಖುಷಿಯಿಂದಲೇ ಮಾತುಕತೆ

Published : Jun 15, 2026, 06:28 AM IST
HD Kumaraswamy

ಸಾರಾಂಶ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಬೇಡ ಎಂದಿದ್ದ ಬಿಜೆಪಿ ನಾಯಕ ಕೆ.ಸಿ.ನಾರಾಯಣಗೌಡ, ಇದೀಗ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಆಡಳಿತ ಸ್ಮರಣೆ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಅಕ್ಕಪಕ್ಕ ಕುಳಿತು ಖುಷಿಯಿಂದ ಮಾತನಾಡಿದ್ದು, ಮೈತ್ರಿ ಪಕ್ಷಗಳ ನಡುವಿನ ಮುನಿಸು ಶಮನವಾದಂತೆ ಕಂಡುಬಂದಿದೆ.

ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಬೇಡವೇ ಬೇಡ ಎಂದಿದ್ದ ನಾಯಕರು ಒಂದೇ ವೇದಿಕೆಯಲ್ಲಿ ಪರಸ್ಪರ ಅಕ್ಕ-ಪಕ್ಕ ಕುಳಿತು ಖುಷಿಯಿಂದಲೇ ಮಾತುಕತೆಯಲ್ಲಿ ತೊಡಗಿದ್ದು ವಿಶೇಷವೆನಿಸಿತ್ತು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ 12 ವರ್ಷ ಸುಧೀರ್ಘ ಆಡಳಿತ ಸ್ಮರಣೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕ ಕೆ.ಸಿ.ನಾರಾಯಣಗೌಡ ಪರಸ್ಪರ ಅಕ್ಕ-ಪಕ್ಕ ಕುಳಿತು ಮಾತುಕತೆಯಲ್ಲಿ ತೊಡಗಿದ್ದುದು ಕುತೂಹಲ ಕೆರಳಿಸಿತ್ತು.

ಸ್ಥಳೀಯ ಸಂಸ್ಥೆ ಚುನಾವಣೆಯ ಮೈತ್ರಿ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್‌-ಬಿಜೆಪಿಯವರ ವಿರುದ್ಧ ವಾಗ್ವಾದ ನಡೆದ ಪರಿಣಾಮ ಜೆಡಿಎಸ್‌ ಜೊತೆ ಮೈತ್ರಿಯೇ ಬೇಡ ಎಂದು ಕೆ.ಸಿ.ನಾರಾಯಣಗೌಡರು ಹೇಳಿಕೆ ನೀಡಿದ್ದರು. ಜೆಡಿಎಸ್ ವಿರುದ್ಧ ರಾಜ್ಯ ಬಿಜೆಪಿ ನಾಯಕರಿಗೂ ದೂರು ನೀಡಿದ್ದರು. ಬಿಜೆಪಿ ಮುಖಂಡರ ವಿರುದ್ಧವೂ ಜೆಡಿಎಸ್ ಮುಖಂಡರು ನೇರ ವಾಗ್ದಾಳಿ ನಡೆಸಿದ್ದರು.

ಇದೀಗ ಮುನಿಸು ಮರೆತು ನಾಯಕರು ಒಂದೇ ವೇದಿಕೆಯಲ್ಲಿ ಭಾಗಿಯಾಗಿದ್ದರು. ಕುಮಾರಸ್ವಾಮಿ- ನಾರಾಯಣಗೌಡ ಅಕ್ಕಪಕ್ಕ‌ ಕುಳಿತು ಖುಷಿಯಿಂದಲೇ ಮಾತುಕತೆಯಲ್ಲಿ ತೊಡಗಿದ್ದರು. ಬಿಜೆಪಿಯ ಜಿಲ್ಲಾ ಮುಖಂಡರು ಹಾಗೂ ಜೆಡಿಎಸ್ ಜಿಲ್ಲಾ ಮುಖಂಡರು ಭಾಗಿಯಾಗಿದ್ದರು.

 

 

PREV
Read more Articles on
click me!

Recommended Stories

ಫ್ರೀ ಬಸ್‌ ಪಾಸ್‌ ಅರ್ಜಿ: ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳ ಪರದಾಟ
ವರುಣನ ಅಬ್ಬರಕ್ಕೆ ಸಿಲುಕಿದ ಬೆಂಗಳೂರು, ದಕ್ಷಿಣ ಕನ್ನಡ; ಎಲ್ಲಿ, ಎಷ್ಟು ಮಳೆ? ಇಲ್ಲಿದೆ ಮಾಹಿತಿ