ರಾಜ್ಯದಲ್ಲಿ ಬಿಜೆಪಿ ಜೊತೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ

By Kannadaprabha News  |  First Published Oct 25, 2020, 11:33 AM IST

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಮುಖಂಡರೋರ್ವರು ಹೇಳಿದ್ದಾರೆ.


ಕೋಲಾರ (ಅ.25):  ರಾಜ್ಯದಲ್ಲಿ ಹೆಸರಿಗೆ ಮಾತ್ರ ಬಿಜೆಪಿ ಸರ್ಕಾರ ಇದೆ. ಅದರೆ ಇದು ಸಮ್ಮಿಶ್ರ ಸರ್ಕಾರ. ಇದರಲ್ಲಿ ಜೆಡಿಎಸ್‌, ಕಾಂಗ್ರೆಸ್‌ನಿಂದ ಬಂದವರು ಹಾಗೂ ಬಿಜೆಪಿ ಶಾಸಕರು ಕೂಡಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಪಕ್ಷ ತೊರೆದು ಬಂದವರು ಸಚಿವರಾಗಿದ್ದು ಮೂರು ಪಕ್ಷಗಳ ಸಮ್ಮಿಶ್ರ ಆಡಳಿತ ನಿರ್ವಹಿಸುತ್ತಿದೆ ಎಂದು ಜೆಡಿಎಸ್‌ ಮುಖಂಡ ಹಾಗೂ ಮಾಜಿ ಸಚಿವ ಬಸವರಾಜ ಹೊರಟ್ಟಿಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ವಿಧಾನ ಪರಿಷತ್‌ ಚುನಾವಣೆಯ ಜೆಡಿಎಸ್‌ ಅಭ್ಯರ್ಥಿ ತೂಪಲ್ಲಿ ಚೌಡರೆಡ್ಡಿ ಪರವಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಹೋಗಿರುವವರು ಸಚಿವರಾಗಿದ್ದಾರೆ. ಅದರೆ ಅವರು ಸಚಿವ ಸ್ಥಾನದಿಂದ ಇಳಿದ ಕೂಡಲೇ ಮರಳಿ ಗೂಡಿಗೆ ಎಂಬಂತೆ ತಮ್ಮ ಮೂಲ ಪಕ್ಷಗಳಿಗೆ ಹಿಂದಿರುಗಲಿದ್ದಾರೆ ಎಂದು ಭವಿಷ್ಯ ನುಡಿದರು.

Tap to resize

Latest Videos

ಯತ್ನಾಳ್‌ ಹಿಂದೆ ಮೋದಿ, ಶಾ ಇದ್ದಾರೆ  : 

ಈ ಸುಳಿವು ಬಸವರಾಜ ಪಾಟೀಲ್‌ ಯತ್ನಳ್‌ಗೆ ದೊರೆತ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯತೆ ನೀಡ ಬೇಕೆಂಬ ಬೇಡಿಕೆ ಪ್ರಸ್ತಾಪವನ್ನು ಇಟ್ಟಿದ್ದಾರೆ. ರಾಜ್ಯದ ಮುಖ್ಯ ಮಂತ್ರಿಗಳ ಬದಲಾವಣೆ ಬಗ್ಗೆ ಯತ್ನಾಳ್‌ ಮಾತನಾಡಿರುವುದು ಅಂತರಿಕ ವಿಚಾರವಾಗಿದೆ. ಅವರ ಈ ಮಾತು ಕೇಂದ್ರ ಸರ್ಕಾರದ ಮುಖಂಡರ ಬೆಂಬಲವಿಲ್ಲದೆ ಬರುವುದಿಲ್ಲ.ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ ಬಲವಿಲ್ಲದೆ ಯತ್ನಾಳ್‌ ಮಾತನಾಡಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಅವರ ವಿರುದ್ಧ ರಾಜ್ಯ ಬಿಜೆಪಿಗೆ ಶಿಸ್ತಿನ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ, ಬಿಜೆಪಿ ಶಾಸಕಿ ಪತಿ ಉಚ್ಛಾಟನೆ..!

ಉತ್ತರ ಕರ್ನಾಟಕದವರಿಗೆ ಹೆಚ್ಚಿನ ಅನ್ಯಾಯವಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ವಿಭಜನೆ ಕೊಗು ಬಹುದಿನಗಳಿಂದ ಕೇಳಿ ಬರುತ್ತಿದೆ. ನಾನು ಉತ್ತರ ಕರ್ನಾಟಕದವರಿಗೆ ಪ್ರಾತಿನಿಧÜ್ಯತೆಗೆ ಒತ್ತಾಯಿಸುತ್ತೇನೆ, ಅದರೆ ಪ್ರತ್ಯೇಕತೆಗೆ ವಿರೋಧಿಸುತ್ತೇನೆ. ನಮ್ಮ ರಾಜ್ಯ ಅಖಂಡ ಕರ್ನಾಟಕವಾಗಿ ಉಳಿಯಬೇಕೆಂದು ಬಯಸುತ್ತೇನೆ ಎಂದು ಸ್ವಷ್ಟಪಡಿಸಿದರು.

ಕಾಲೇಜುಗಳ ಆರಂಭಕ್ಕೆ ಸ್ವಾಗತ:

ರಾಜ್ಯ ಸರ್ಕಾರವು ನವೆಂಬರ್‌ 17 ರಿಂದ ಕಾಲೇಜುಗಳನ್ನು ಪ್ರಾರಂಬಿಸುತ್ತಿರುವುದು ಸ್ವಾಗತಿಸುತ್ತೇನೆ. ವಿದ್ಯಾಗಮದಲ್ಲಿ ಶೇ. 10 ರಷ್ಟು ವಿದ್ಯಾರ್ಥಿಗಳಿಗೂ ಶಿಕ್ಷಣ ಸಿಗುವುದಿಲ್ಲ. ಆನ್‌ ಲೈನ್‌ ಶಿಕ್ಷಣ ಸೆರಿದಂತೆ ಆಡಳಿತ ಸರ್ಕಾರದ ಬಹುತೇಕ ವಿಷಯಗಳಲ್ಲಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಗಳು ಸರಿಯಲ್ಲ ಎಂದರು.

ಬಿಜೆಪಿಯ ಸರ್ಕಾರದ ವಿರುದ್ಧ ಮಾತನಾಡದ ಎಚ್‌.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಅಡ್ಜಸ್ಟ್‌ಮೆಂಟ್‌ ಪಾಲಿಟಿಕ್ಸ್‌ ಮಾಡುತ್ತಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ರಾಜ್ಯದಲ್ಲಿ ಕೊರೋನಾ ಇರುವುದರಿಂದಾಗಿ ಆಡಳಿತ ಸರ್ಕಾರಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹಕಾರ ನೀಡುತ್ತಿದ್ದಾರೆಯೇ ಹೊರತೂ ಬೇರೇನು ಇಲ್ಲ ಎಂದು ಹೊರಟ್ಟಿಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧೆಗಿಳಿಸಿದರುವ ಚೌಡರೆಡ್ಡಿ ಅವರನ್ನು ಬೆಂಬಲಿಸುವಂತೆ ಮತದಾರರನ್ನು ಕೋರಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ, ಪದವೀದರ ಕ್ಷೇತ್ರದ ಅಭ್ಯರ್ಥಿ ಆರ್‌.ಚೌಡರೆಡ್ಡಿ ಮಾತನಾಡಿ ಮತ ನೀಡುವಂತೆ ಕೋರಿದರು.

click me!