ವಸ್ತುಗಳನ್ನು ತಾವೇ ಮಾರಿಕೊಂಡು ವಂಚನೆ : ಐವರು ಫ್ಲಿಪ್ಕಾರ್ಟ್ ಉದ್ಯೋಗಿಗಳು ಅರೆಸ್ಟ್

By Kannadaprabha News  |  First Published Aug 30, 2021, 12:50 PM IST
  • ಖಾಸಗಿ ಕಾರ್ಖಾನೆಯಲ್ಲಿ ವಸ್ತುಗಳನ್ನು ಕಳುವು ಮಾಡಿದ 5 ಮಂದಿ ಆರೋಪಿಗಳ ಅರೆಸ್ಟ್
  • ಸಮರ್ಪಕವಾಗಿ ವಸ್ತುಗಳು ತಲುಪುತ್ತಿಲ್ಲವೆಂದು ಕಾರ್ಖಾನೆಗೆ ದೂರು
  • ಗ್ರಾಹಕರಿಗೆ ಡೆಲಿವರ್ ಮಾಡದೇ ವಸ್ತುಗಳನ್ನು ತಾವೆ ಮಾರಿಕೊಳ್ಳುತ್ತಿದ್ದ ಆರೋಪಿಗಳು

ಮಾಲೂರು (ಆ.30): ಇಲ್ಲಿನ ಕೈಗಾರಿಕಾ ಪ್ರಾಗಾಂಣದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ವಸ್ತುಗಳನ್ನು ಕಳುವು ಮಾಡಿದ 5 ಮಂದಿ ಆರೋಪಿಗಳನ್ನು ಮಾಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಮಾದನಹಟ್ಟಿಯ ಫ್ಲಿಪ್‌ಕಾರ್ಟ್‌ ಕಾರ್ಖಾನೆಯಲ್ಲಿ ಸೆಕ್ಯುರಿಟಿ ಟೀಂ ಮ್ಯಾನೇಜರ್‌ ಸಂತೋಷ್‌ ಆಗಸ್ಟಿನ್‌ ಥಾಮಸ್‌ ನೀಡಿದ ದೂರಿನ ಆಧಾರದ ಮೇರೆಗೆ 5 ಮಂದಿಯನ್ನು ಬಂಧಿಸಲಾಗಿದೆ. ಮಾದನಹಟ್ಟಿಯ ಫ್ಲಿಪ್‌ಕಾರ್ಟ್‌ ಕಾರ್ಖಾನೆಯ ಅಜಿತ್‌ಕುಮಾರ್‌ ಮಹಾಂತೋ, ಸಾಗರ್‌ ಬೆಹರಾನ್‌, ವಿನೋದ್‌ಕುಮಾರ್‌ಯಾದವ್‌, ಗೋರಕ್‌ನಾಥ್‌ಸಿಂಗ್‌, ವಾಸೀಂ ಬಂಧಿತ ಅರೋಪಿಗಳಾಗಿದ್ದಾರೆ.

Tap to resize

Latest Videos

ಶಿವಮೊಗ್ಗ ಪೊಲೀಸರ ಭರ್ಜರಿ ಭೇಟೆ : ಅಂತರ್ ಜಿಲ್ಲಾ ಬೈಕ್ ಕಳ್ಳರು ಅಂದರ್

ಮಾದನಹಟ್ಟಿಯ ಫ್ಲಿಪ್‌ಕಾರ್ಟ್‌ ಕಾರ್ಖಾನೆಯ ಗ್ರಾಹಕರು ಸಕಾಲಕ್ಕೆ ಮತ್ತು ಸಮರ್ಪಕವಾಗಿ ವಸ್ತುಗಳು ತಲುಪುತ್ತಿಲ್ಲವೆಂದು ಕಾರ್ಖಾನೆಗೆ ದೂರುಗಳನ್ನು ನೀಡಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 5 ಅರೋಪಿಗಳು ವಿರುದ್ದ ಮ್ಯಾನೇಜರ್‌ ಸಂತೋಷ್‌ ಆಗಸ್ಟಿನ್‌ ಥಾಮಸ್‌ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಖಾನೆಯಿಂದ ಗ್ರಾಹಕರಿಗೆ ತಲುಪುಬೇಕಾಗಿದ್ದ ಮೊಬೈಲ್‌ ಫೋನ್‌, ಕ್ಯಾಮೆರಾ, ಕೈಗಡಿಯಾರ, ಬ್ಲೂಟೂತ್‌, ವಸ್ತುಗಳನ್ನು ಸಮರ್ಪಕವಾಗಿ ಗ್ರಾಹಕರಿಗೆ ತಲುಪಿಸದೆ ಅಕ್ರಮವಾಗಿ ಮಾರಾಟ ಮಾಡಿಡಿದ್ದಾರೆಂದು ಆರೋಪಿಸಿದ್ದರು.

ಅರೋಪಿಗಳನ್ನು ಬಂಧಿಸಿ, 1.10 ಲಕ್ಷ ರೂ ಮೌಲ್ಯದ ಮೊಬೈಲ್‌, ಎಲೆಕ್ಟ್ರಾನಿಕ್‌ ವಸ್ತುಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನುನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್‌ ವಸಂತ್‌, ಎಸೈರಂಗಲಕ್ಷ್ಮೇ, ಪೇದೆ ರಮೇಶ್‌ಬಾಬು, ಅನಂತು, ಸುರೇಶ್‌, ಆನಂದ್‌, ನಾಗೇಶ್‌ ಇದ್ದರು.

click me!