Tumakur : 11 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲ್ಲಿದೆ: ಶಾಸಕ ವಿಶ್ವಾಸ

By Kannadaprabha News  |  First Published Mar 25, 2023, 9:45 AM IST

ಈ ಸಾರಿ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ 11 ತಾಲೂಕಿನಲ್ಲಿ ಬಿಜೆಪಿ ಗೆಲ್ಲಿಸುತ್ತೇವೆ ಎಂದು ತುರುವೇಕೆರೆ ಶಾಸಕ ಮಸಾಲ ಜಯರಾಮ್‌ ತಿಳಿಸಿದರು.


 ಗುಬ್ಬಿ :  ಈ ಸಾರಿ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ 11 ತಾಲೂಕಿನಲ್ಲಿ ಬಿಜೆಪಿ ಗೆಲ್ಲಿಸುತ್ತೇವೆ ಎಂದು ತುರುವೇಕೆರೆ ಶಾಸಕ ಮಸಾಲ ಜಯರಾಮ್‌ ತಿಳಿಸಿದರು.

ತಾಲೂಕಿನ ಸಿ.ಎಸ್‌.ಪುರ ಹೋಬಳಿ ಮಾವಿನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಇನ್ನು ಕೆಲವೇ ದಿನಗಳಲ್ಲಿ ಕೋರ್‌ ಕಮಿಟಿ ಕರೆದು ಅಲ್ಲಿ ನಾವು ಚರ್ಚಿಸಿ ಜಿಲ್ಲೆಯ 11 ಬಿಜೆಪಿ ಅಭ್ಯರ್ಥಿಗಳನ್ನು ಪಟ್ಟಿಮಾಡಿ ಕಳಿಸುತ್ತೇವೆ. ನಮ್ಮ ರಾಜ್ಯದಲ್ಲಿ 140 ಬಿಜೆಪಿ ಅಭ್ಯರ್ಥಿಗಳು ಗೆಲ್ಲಲೇಬೇಕೆಂದು ರಾಜ್ಯ ಹಾಗೂ ಕೇಂದ್ರದ ನಾಯಕರು ಬಂದು ಬಿಜೆಪಿಯ ಸಾಧನೆಯನ್ನು ಮತದಾರರಿಗೆ ತಿಳಿಸಿ ಹೋಗಿದ್ದಾರೆ. ಆದ್ದರಿಂದ ನಮ್ಮ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ತಿಳಿಸಿದರು.

Tap to resize

Latest Videos

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ನರಸಿಂಹಮೂರ್ತಿ, ಚಂದ್ರೇಗೌಡ, ಮುಖಂಡರಾದ ಹೊನ್ನೇಗೌಡ, ಲೋಕೇಶ್‌, ಪ್ರಕಾಶ್‌, ರವಿಕುಮಾರ್‌, ಶಿವಣ್ಣ, ಚಂದ್ರಶೇಖರ್‌, ಗುತ್ತಿಗೆದಾರರಾದ ಭುಜಂಗರಾವ್‌, ಚನ್ನಿಗಪ್ಪ, ಅಧಿಕಾರಿಗಳಾದ ತಿಮ್ಮಸ್ವಾಮಿ, ಕಸ್ತೂರಿ ಕುಮಾರ್‌, ಮುಖ್ಯ ಶಿಕ್ಷಕಿ ಶಿಲ್ಪಾ, ಮರುಳಿ ಇತರರು ಇದ್ದರು.

140 ಕ್ಕೂ ಅಧಿಕ ಸ್ಥಾನ ಖಚಿತ

ಹಿರೇಕೆರೂರ (ಮಾ.20): ಕೇಂದ್ರ ಹಾಗೂ ರಾಜ್ಯದ ಡಬಲ್‌ ಎಂಜಿನ್‌ ಸರ್ಕಾರಗಳು ದಕ್ಷ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ 140ಕ್ಕೂ ಅಧಿಕ ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಮತ್ತೇ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅಭಿವೃದ್ಧಿಯ ಕಾರ್ಡ್‌ನೊಂದಿಗೆ ಜನರ ಮುಂದೆ ಹೋಗುತ್ತೇವೆ. ಕಾಂಗ್ರೆಸ್‌ನವರಂತಹ ಗ್ಯಾರಂಟಿ ಕಾರ್ಡ್‌ ನಮ್ಮದಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎನ್ನುವುದೇ ಗ್ಯಾರಂಟಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದೇ ಗ್ಯಾರಂಟಿ ಇಲ್ಲ ಎಂದರು.

ವಿಜಯ ಸಂಕಲ್ಪ ಯಾತ್ರೆ ಎಂದರೆ ವಿಜಯದ ಸಂಕೇತವಾಗಿದೆ. ಬಿಜೆಪಿಯಿಂದ ರಾಜ್ಯಾದ್ಯಂತ ಈ ಯಾತ್ರೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾವೇರಿ ಜಿಲ್ಲೆಗೆ ಫಸಲ್‌ ಬಿಮಾ ಯೋಜನೆಯಲ್ಲಿ 435 ಕೋಟಿ ನೀಡಿದೆ. ಇದು ಇತಿಹಾಸದಲ್ಲಿ ಪ್ರಪ್ರಥಮವಾಗಿದೆ. ಕಳೆದ ಮುಂಗಾರಿನ 432 ಕೋಟಿ ಬಿಡುಗಡೆಯಾಗಲಿದೆ. ಅದರಲ್ಲಿ ಹಿರೇಕೆರೂರ ತಾಲೂಕಿನದ್ದು 89 ಕೋಟಿ ಇದೆ. ಈಗಾಗಲೇ 14 ಕೋಟಿ ಮಧ್ಯಂತರ ಪರಿಹಾರ ಬಂದಿದ್ದು, ತಾಲೂಕಿಗೆ 103 ಕೋಟಿ ಬೆಳೆ ವಿಮೆ ಬಂದಿದೆ. ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕಿಗೆ 80 ಕೋಟಿ ಬೆಳೆ ಪರಿಹಾರ ಹಾಗೂ 70 ಕೋಟಿ ಮನೆಗಳ ಪರಿಹಾರ ಬಂದಿದೆ ಎಂದರು.

ಸೊರ​ಬ​ದಲ್ಲಿ ಕುಮಾರ್‌ ಬಂಗಾರಪ್ಪ ಗೆಲ್ಲಿಸಿ: ಬಿ.ಎಸ್‌.ಯಡಿ​ಯೂ​ರ​ಪ್ಪ

ರಾಜ್ಯದ ಬಿಜೆಪಿ ಸರ್ಕಾರ ಹಿರೇಕೆರೂರ ರಟ್ಟೀಹಳ್ಳಿ ತಾಲೂಕಿನ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಿದೆ. ಕುಡಿಯವ ನೀರು ಪೊರೈಸುವ ಕಾರ್ಯವಾಗಿದೆ. ರಾಜ್ಯಾದ್ಯಂತ ಕೃಷಿ ಇಲಾಖೆಯಿಂದ ರೈತ ಶಕ್ತಿ ಯೋಜನೆಯಿಂದ ಎಕರೆಗೆ 250ರಂತೆ ಐದು ಎಕರೆವರೆಗೆ 1250 ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದರು. ರೈತ ವಿದ್ಯಾನಿಧಿ ಯೋಜನೆಯಲ್ಲಿ ರೈತರ ಮಕ್ಕಳಿಗೆ 680 ಕೋಟಿ, ರೈತ ಕಾರ್ಮಿಕರ ಮಕ್ಕಳಿಗೆ 14 ಕೋಟಿ ಬಿಡುಗಡೆಯಾಗಿದೆ. ಈ ಯೋಜನೆಗಳು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ ಭರವಸೆಗಳಲ್ಲ, ಪ್ರಣಾಳಿಕೆಯಲ್ಲಿ ಹೇಳದೇ ಇದ್ದರೂ ರೈತ ಶಕ್ತಿ, ರೈತ ವಿದ್ಯಾನಿಧಿ, ರೈತರ ಮಕ್ಕಳು ಕೃಷಿ ಪದವಿ ವ್ಯಾಸಂಗ ಮಾಡಲು ಮೀಸಲಾತಿ ಹೆಚ್ಚಳ ಮಾಡುವ ಮೂಲಕ ರೈತ ಪರವಾಗಿ ಕೆಲಸ ಮಾಡಿದೆ ಎಂದರು.

click me!