ಮಂಡ್ಯ ಬಂದ್‌ಗೆ ಬಿಜೆಪಿ ಬೆಂಬಲವಿಲ್ಲ: ಅಶೋಕ್ ಜಯರಾಂ

By Kannadaprabha NewsFirst Published Feb 9, 2024, 2:00 AM IST
Highlights

ಜಿಲ್ಲಾಧಿಕಾರಿ ಮನವಿ ಮೇರೆಗೆ ನಾವು ಬಂದ್‌ನ್ನು ಬೆಂಬಲಿಸುತ್ತಿಲ್ಲ. ಕೆಲವರು ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಶಾಂತಿಯುತ ಬಂದ್ ಮಾಡಿ, ಯಾರಿಗೂ ತೊಂದರೆ ಕೊಡುವುದು ಬೇಡ, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿರುವ ಕಾರಣ ಅವರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದೇವೆ ಎಂದ ಬಿಜೆಪಿ ಮುಖಂಡ ಅಶೋಕ್ ಜಯರಾಂ

ಮಂಡ್ಯ(ಫೆ.09): ಕೆರಗೋಡಿನಲ್ಲಿ ಶ್ರೀಹನುಮಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಶ್ರೀರಾಮ ಭಜನಾ ಮಂಡಳಿ ಕರೆ ನೀಡಿರುವ ಮಂಡ್ಯ ಬಂದ್‌ಗೆ ಭಾರತೀಯ ಜನತಾ ಪಕ್ಷದ ಬೆಂಬಲವಿಲ್ಲ. ಆದರೆ, ಬೈಕ್ ರ್‍ಯಾಲಿ ಮತ್ತು ಪಾದಯಾತ್ರೆಗೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಬಿಜೆಪಿ ಮುಖಂಡ ಅಶೋಕ್ ಜಯರಾಂ ತಿಳಿಸಿದರು.

ಜಿಲ್ಲಾಧಿಕಾರಿ ಮನವಿ ಮೇರೆಗೆ ನಾವು ಬಂದ್‌ನ್ನು ಬೆಂಬಲಿಸುತ್ತಿಲ್ಲ. ಕೆಲವರು ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಶಾಂತಿಯುತ ಬಂದ್ ಮಾಡಿ, ಯಾರಿಗೂ ತೊಂದರೆ ಕೊಡುವುದು ಬೇಡ, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿರುವ ಕಾರಣ ಅವರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದೇವೆ ಎಂದರು.

ಮದ್ದೂರು ಕ್ಷೇತ್ರದಲ್ಲಿ ಶೀಘ್ರ ನಿಖಿಲ್ ಕುಮಾರಸ್ವಾಮಿ ಪ್ರವಾಸ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ

ಸಾರ್ವಜನಿಕವಾಗಿ ಒತ್ತಾಯ ಪೂರ್ವಕವಾಗಿ ಬಾಗಿಲು ಹಾಕಿಸುವುದು, ಚಿತ್ರ ಮಂದಿರಗಳ ಬಂದ್ ಸೇರಿದಂತೆ ಅಂಗಡಿ ಮುಂಗಟ್ಟುಗಳನ್ನು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಬಾರದು. ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದರೆ ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದರು.

ರ್‍ಯಾಲಿಯಲ್ಲಿ ನಾವೂ ಸಹ ಭಾಗವಹಿಸುತ್ತೇವೆ. ಪ್ರತಿಭಟನೆ ನಮ್ಮ ಹಕ್ಕು, ಅದು ಶಾಂತಿಯುತವಾಗಿರಲಿ ಎಂದ ಅವರು, ಹನುಮ ಧ್ವಜ ಹಾರಾಟ ವಿಚಾರವಾಗಿ ಕಾನೂನಾತ್ಮಕವಾದ ಹೋರಾಟ ನಡೆಸುತ್ತೇವೆ ಎಂದರು.
ಶ್ರೀರಾಮ ಭಜನಾ ಮಂಡಳಿಯ ವಿರೂಪಾಕ್ಷ, ಮಹೇಶ್, ಶ್ರೀನಿವಾಸ್, ಕೆ.ಎಲ್.ಕೃಷ್ಣ, ಬಸಂತ್, ಸಿದ್ದು ಗೋಷ್ಠಿಯಲ್ಲಿದ್ದರು.

click me!