ಜೈನ ಸಮಾಜಕ್ಕೆ ಹೆಚ್ಚಿನ ಆದ್ಯತೆ ನೀಡಿದ ಬಿಜೆಪಿ ಸರ್ಕಾರ: ಸಂಸದ ಜಗದೀಶ ಶೆಟ್ಟರ್

Kannadaprabha News   | Kannada Prabha
Published : Jun 08, 2025, 08:52 PM IST
Jagadish shettar

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಜೈನ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಅವುಗಳನ್ನು ತಡೆ ಹಿಡಿದು, ಜೈನ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಕಾಗವಾಡ (ಜೂ.08): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಜೈನ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಅವುಗಳನ್ನು ತಡೆ ಹಿಡಿದು, ಜೈನ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು. ತಾಲೂಕಿನ ಐನಾಪೂರ ಪಟ್ಟಣದಲ್ಲಿ ಗುಣಧನಂದಿ ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ಜೈನ ಸಮಾವೇಶದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈನ ಸಮಾಜ ಒಂದು ತಾತ್ವಿಕ ಹಾಗೂ ಅಹಿಂಸಾ ತತ್ವಗಳನ್ನು ಅಳವಡಿಸಿಕೊಂಡು, ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ.

ರಾಜ್ಯ ಸರ್ಕಾರ ಸಣ್ಣ ಸಣ್ಣ ಸಮಾಜಗಳಿಗೆ ನಿಗಮ ಮಂಡಳ ನೀಡಿದೆ. ಆದರೆ, ಜೈನ ಸಮಾಜಕ್ಕೆ ನೀಡದೆ ಓಲೈಕೆ ರಾಜಕಾರಣ ಮಾಡುತ್ತಿದೆ. ಇದನ್ನು ನೋಡಲು ಆಗುತ್ತಿಲ್ಲ. ಜೈನ ಸಮಾದ ಮೇಲೆ ಸಮುದಾಯದ ಸಾಧುಗಳ ಮೇಲೆ ಆಗುತ್ತಿರುವ ಅನ್ಯಾಗಳ ವಿರುದ್ಧ ಸಮಾಜ ಎಚ್ಚರವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಡೆಯುತ್ತಿರು ಜೈನ ಸಮಾವೇಶ ಲಕ್ಷಾಂತರ ಜನರನ್ನು ಸೇರಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸವನ್ನು ಗುಣಧರನಂಧಿ ಮಹಾರಾಜರು ಮಾಡುತ್ತಿರುವುದು ಸೂಕ್ತವಾಗಿದೆ ಎಂದು ತಿಳಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಶಾಂತಿಪ್ರಿಯ ಜೈನ ಸಮಾಜದ ಬೇಡಿಕೆ ನ್ಯಾಯ ಸಮ್ಮತವಾಗಿದ್ದು, ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಅವರ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಕೋರಿದರು. ಗುಣಧರನಂಧಿ ಮಹಾರಾಜರು ಮಾತನಾಡಿ, ಈ ದೇಶದಲ್ಲಿ ಅಲ್ಪಸಂಖ್ಯಾತರಲ್ಲಿ ಆರು ಸಮುದಾಯಗಳು ಸರ್ಕಾರಗಳು ಕೇವಲ ಮುಸ್ಲಿಂ ಸಮಾಜವನ್ನು ತುಷ್ಠಿಕರಿಸುತ್ತಿದ್ದು ಜೈನ ಸಮಾಜವನ್ನು ನಿರ್ಲಕ್ಷ್ಯಸುತ್ತಿದ್ದು, ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೇ ನನ್ನ ಉಗ್ರರ ನಿರ್ಧಾವನ್ನು ಅದೇ ವೇದಿಕೆಯಲ್ಲಿ ತಿಳಿಸಲಾಗುವುದು ಎಂದು ಎಚ್ಚರಿಸಿದರು.

ಭಾನುವಾರ ನಡೆಯುವ ಕೊನೆಯ ದಿನದ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ತಾವರಚಂದ ಗೆಹ್ಲೋತ‌, ಹಲವು ಸಚಿವರು, ಶಾಸಕರು ಭಾಗಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಮಯದಲ್ಲಿ ಮಾಜಿ ಶಾಸಕರಾದ ಕಲ್ಲಪ್ಪಣ್ಣ ಮಗ್ಗೆಣ್ಣವರ, ಮೋಹನ ರಾವ ಶಹಾ, ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕ ಅರುಣಕುಮಾರ ಯಲಗುದ್ರಿ, ಖ್ಯಾತ ನ್ಯಾಯವಾದಿ ಕೆ.ಎ.ವಣಜೋಳ, ರಾಜು ನಾಡಗೌಡ, ದೀಪಕ ಪಾಟೀಲ, ಸಂಜಯ ಕೂಚನೂರೆ, ರಾಜು ಪಾಟೀಲ, ಸುನೀಲ ಪಾಟೀಲ, ಬಾಳಾಸಾಹೇಬ ದಾನೊಳ್ಳಿ, ಚಮನರಾವ್ ಪಾಟೀಲ, ಅಮರ ದುರ್ಗಣ್ಣನವರ, ಪುಷ್ಪಾ ಪಾಟೀಲ ಸೇರಿದಂತೆ ಅನೇಕರು ಇದ್ದರು.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ