7 ಸ್ಥಾನಗಳಲ್ಲಿ 6 ಸ್ಥಾನ ಬಿಜೆಪಿಗೆ : ಭರ್ಜರಿ ವಿಜಯ

By Kannadaprabha News  |  First Published Feb 4, 2021, 9:14 AM IST

ಬಿಜೆಪಿಗೆ ಅತ್ಯಧಿಕ ಸ್ಥಾನಗಳು ಲಭ್ಯವಾಗಿದ್ದು, ಭರ್ಜರಿ ಜಯಗಳಿಸಿದೆ. ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುಖಂಡರು ಅಧಿಕಾರ ಪಡೆದುಕೊಂಡಿದ್ದಾರೆ. 


ತುಮಕೂರು (ಫೆ.04):  ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬುಧವಾರ ನಡೆದ 7 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಚುನಾವಣೆ ಪೈಕಿ 6 ರಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರು ಪದಗ್ರಹಣ ಮಾಡಿದರು ಎಂದು ಮಾಜಿ ಶಾಸಕ ಬಿ. ಸುರೇಶ ಗೌಡ ತಿಳಿಸಿದರು.

ತುಮಕೂರಿನಲ್ಲಿ ನೂತನವಾಗಿ ಆಯ್ಕೆ ಅದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್‌ ಅಧ್ಯಕ್ಷರಿಗೆ ಸನ್ಮಾನಿಸಿ ಬಿ.ಸುರೇಶಗೌಡ ಮಾತನಾಡಿದರು.

Tap to resize

Latest Videos

ನಾವು ಪಕ್ಷದಿಂದ ಹೊರಗಿದ್ರು ಗೆಲ್ತೀವಿ : ದೂರ ಸರಿವ ಸೂಚನೆ ಕೊಟ್ಟರಾ ಬಿಜೆಪಿ ಶಾಸಕ..? .

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರಗಳ ಆಯ್ಕೆ ಚುನಾವಣೆಯಲ್ಲಿ ಗಳಿಗೆನಹಳ್ಳಿ, ಕೆಸರುಮಡು, ಮಲ್ಲಸಂದ್ರ, ಸ್ವಾಂದೇನಹಳ್ಳಿ, ದೊಡ್ಡನಾರವಂಗಲ, ತಿಮ್ಮರಾಜನಹಳ್ಳಿ. ಗ್ರಾಮಪಂಚಾಯಿತಿಗಳ ಅಧ್ಯಕ್ಷರುಗಳಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರು ಆಯ್ಕೆಯಾಗಿದ್ದಾರೆ ಎಂದು ಸುರೇಶ್ ಗೌಡ ತಿಳಿಸಿದರು.

click me!